
ರಾಜಾಮಹೇಂದ್ರವರಂ (ಮೇ.29): 5 ಉಚಿತ ಉಡುಗೊರೆ ಘೋಷಿಸಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ನೆರೆಯ ಆಂಧ್ರಪ್ರದೇಶದಲ್ಲಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಕೂಡಾ ಮುಂಬರುವ ಚುನಾವಣೆ ಸಂಬಂಧ ಭರ್ಜರಿ ಉಚಿತ ಕೊಡುಗೆಯ ಘೋಷಣೆ ಮಾಡಿದ್ದಾರೆ.
ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಅಧಿಕಾರಕ್ಕೆ ಬಂದರೆ ಭವಿಷ್ಯಕ್ತು ಗ್ಯಾರಂಟಿ ಯೋಜನೆಯಡಿಯಲ್ಲಿ 18 ವರ್ಷ ಮೇಲ್ಪಟ್ಟಎಲ್ಲ ಮಹಿಳೆಯರಿಗೂ ಮಾಸಿಕ 1,500 ರು. ನಗದು, ಎಲ್ಲ ತಾಯಂದಿರಿಗೆ ವಾರ್ಷಿಕ 15,000 ರು. ನಗದು ಭತ್ಯೆ, ಎಲ್ಲ ಮಹಿಳೆಯರಿಗೂ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಲ್ಲಿ ಒಂದು ಜಿಲ್ಲೆಯೊಳಗಿನ ಪ್ರಯಾಣ ಸಂಪೂರ್ಣ ಉಚಿತ ನೀಡಲಾಗುವುದು ಎಂದು ಘೋಷಿಸಿದ್ದಾರೆ.
ನಾಯಿಗೇಕೆ ಆಂಧ್ರ ಸಿಎಂ ಮೇಲೆ ಸಿಟ್ಟು: ಜಗನ್ ಪೋಸ್ಟರ್ ಹರಿದು ಹಾಕಿದ ನಾಯಿ ವಿರುದ್ಧ ಕೇಸ್
ಜತೆಗೆ ಯುವ ಗಲಮ್ ಯೋಜನೆಯಡಿ ಸರ್ಕಾರದ ವಿವಿಧ ಇಲಾಖೆಗಳಿಗೆ 20 ಲಕ್ಷ ಉದ್ಯೋಗ ಭರ್ತಿ, ನಿರುದ್ಯೋಗಿಗಳಿಗೆ ತಿಂಗಳಿಗೆ 3,000 ರು. ಭತ್ಯೆ, ರೈತರಿಗೆ ವರ್ಷಕ್ಕೆ 20,000 ರು. ನಗದು, ಕುಟುಂಬಕ್ಕೆ ವರ್ಷಕ್ಕೆ 3 ಎಲ್‌ಪಿಜಿ ಸಿಲಿಂಡರ್ ಉಚಿತವಾಗಿ ನೀಡಲಾಗುವುದು. ಪಕ್ಷ ಅಧಿಕಾರಕ್ಕೆ ಬಂದ ಕೂಡಲೇ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಭಾನುವಾರ ಪಕ್ಷದ ಕಾರ್ಯಕ್ರಮದಲ್ಲಿ ನಾಯ್ಡು ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.