ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಮೈಸೂರು (ಆ.09): ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ. ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಕೃಷಿ ಸಚಿವ ಚೆಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿ, ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಮಾಡಿ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಈ ಹಿಂದೆ ಶಾಸಕರ ಪತ್ರವನ್ನೇ ನಕಲಿ ಮಾಡಿದ್ದರು.
ನಕಲಿ ಪತ್ರ ಅಂತ ಗೊತ್ತಿದ್ದರೂ ಅದಕ್ಕೆ ವ್ಯಾಪಕ ಪ್ರಚಾರ ಸಿಕ್ಕಿತು. ಚಲುವರಾಯಸ್ವಾಮಿ ವಿಚಾರದಲ್ಲೂ ಈಗಾಗಲೇ ಅಧಿಕಾರಿಗಳೇ ಸ್ಪಷ್ಟಪಡಿಸಿದ್ದಾರೆ. ಪತ್ರ ನಾವು ಬರೆದಿಲ್ಲ, ಅದು ನಕಲಿ. ಈ ವಿಚಾರವೇ ನಮಗೆ ಗೊತ್ತಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳಿಗೆ ತೊಂದರೆ ಆದರೆ ನೇರವಾಗಿ ಲೋಕಾಯುಕ್ತಕ್ಕೆ ದೂರು ನೀಡಬಹುದು. ನಕಲಿ ದಾಖಲೆ ಸೃಷ್ಟಿಮಾಡಿ ಜನರಿಗೆ ಸರ್ಕಾರದ ಮೇಲೆ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಇದೊಂದು ರಾಜಕೀಯ ಆಟ. ಇದನ್ನು ರಾಜಕೀಯವಾಗಿಯೇ ಫೇಸ್ ಮಾಡುತ್ತೇವೆ.
ಸಂವಿಧಾನದ ವಿರುದ್ಧ ವರ್ತಿಸಿದರೆ ಕ್ರಮ ಸಹಜ: ಯು.ಟಿ.ಖಾದರ್
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿರೋಧ ಪಕ್ಷದವರಿಗೆ ಸರ್ಕಾರದ ಜನಪ್ರಿಯತೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು. ವೈಎಸ್‌ಟಿ ಟ್ಯಾಕ್ಸ್ ಆರೋಪ ಸಂಬಂಧ ನಿರ್ದಿಷ್ಟವಾದ ದಾಖಲೆಗಳಿದ್ದರೆ ಕುಮಾರಸ್ವಾಮಿಯವರು ತನಿಖಾಧಿಕಾರಿಗಳಿಗೆ ಕೊಡಲಿ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುತ್ತೇವೆ. ಅದನ್ನು ಬಿಟ್ಟು ಆರೋಪ ಮಾಡುವುದು, ಹಿಟ್ ಆ್ಯಂಡ್ ರನ್ ಮಾಡುವುದು ಸರಿಯಲ್ಲ. ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದು, ಇಂಡಿಯಾ ಮೈತ್ರಿಕೂಟ ದಿನೇ ದಿನೇ ಪ್ರಬಲವಾಗುತ್ತಿದೆ ಎಂದು ಅವರು ಹೇಳಿದರು.
ಕಂದಾಯ ಇಲಾಖೆಯಿಂದಲೇ ಸುಧಾರಣೆ ಆರಂಭವಾಗಲಿ: ಕಂದಾಯ ಇಲಾಖೆಯಿಂದಲೇ ಬದಲಾವಣೆ, ಆಡಳಿತ ಸುಧಾರಣೆ ಆರಂಭ ಆಗಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಮ್ಮಿಂದಲೇ ಬದಲಾವಣೆ ಆಗಬೇಕು. ಬೇರೆ ಇಲಾಖೆಗಳ ಮೇಲೆ ದೂರುವ ಬದಲು ನಾವು ಬದಲಾಗಬೇಕು. ಇದಕ್ಕಾಗಿ ಕಂದಾಯ ಇಲಾಖೆಯಲ್ಲಿ ಉನ್ನತ ಮಟ್ಟದಿಂದಲೇ ಬದಲಾವಣೆ ಮಾಡಲಾಗುತ್ತಿದ್ದು, ಇದು ಎಲ್ಲಾ ಹಂತದಲ್ಲಿ ಆಗುವ ಮೂಲಕ ಒಳ್ಳೆಯ ಆಡಳಿತ ನೀಡಬೇಕು. ಇದಕ್ಕೆ ಎಲ್ಲಾ ಹಂತದಲ್ಲೂ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹಕಾರ ಅಗತ್ಯ ಎಂದರು.
ವಕೀಲರ ಸಮಾವೇಶದಿಂದ ದೂರ ಸರಿದ ಡಿ.ಕೆ.ಶಿವಕುಮಾರ್: ಯಾಕೆ ಗೊತ್ತಾ?
ಕಂದಾಯ ಇಲಾಖೆಯು ಸರ್ಕಾರದ ಮಾತೃ ಇಲಾಖೆ ಆಗಿದೆ. ಪ್ರತಿಯೊಂದರಲ್ಲೂ ನಾವು ಜವಾಬ್ದಾರಿ ಹೊಂದಿದ್ದೇವೆ. ರಾಜರ ಕಾಲ, ಬ್ರಿಟಿಷರ ಆಡಳಿತ ಸೇರಿದಂತೆ ಪ್ರಸ್ತುತ ಸಹ ಕಂದಾಯ ಇಲಾಖೆಯು ಮಹತ್ವ ಪಡೆದುಕೊಂಡಿದೆ. ಜಿಲ್ಲಾಧಿಕಾರಿಗಳು, ತಹಸೀಲ್ದಾರ್‌ಗಳು ಜಿಲ್ಲೆ, ತಾಲೂಕುಗಳಿಗೆ ಮುಖ್ಯಸ್ಥರಾಗಿದ್ದು, ನಮ್ಮ ಇಲಾಖೆಯ ಹೇಗೆ ನಡೆದುಕೊಳ್ಳುತ್ತದೆಂಬ ಛಾಯೆಯು ಸರ್ಕಾರದ ಮೇಲೆ ಬೀಳುತ್ತದೆ ಎಂದು ಅವರು ಹೇಳಿದರು. ಈ ಹಿಂದಿನ ಸರ್ಕಾರದ ಆಡಳಿತ ವೈಫಲ್ಯ, ಭ್ರಷ್ಟಾಚಾರ ಆರೋಪಿಗಳಿಂದಾಗಿ ನಾಡಿನ ಜನರೇ ಬದವಾವಣೆ ಬಯಸಿ ಜನಾಡಳಿತಕ್ಕಾಗಿ ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದಾರೆ.