ಸುಮಲತಾ ಅಂಬರೀಶ್‌ಗೆ ಮಂಡ್ಯ ಬಿಟ್ಟು ಬೇರೆ ಕ್ಷೇತ್ರ ಆಫರ್ ಮಾಡಿದ ಕಾಂಗ್ರೆಸ್

By Web DeskFirst Published Feb 28, 2019, 4:08 PM IST
Highlights

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸೀಟು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಪ್ರಶ್ನೆನೇ ಇಲ್ಲ ಎನ್ನುವುದು ಜೆಡಿಎಸ್ ಹಠ. ಮತ್ತೊಂದೆಡೆ ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಮಾಡುವುದಾದರೆ ಮಂಡ್ಯದಿಂದಲೇ ಎನ್ನುತ್ತಿದ್ದಾರೆ. ಇದ್ರಿಂದ ಮಂಡ್ಯ ಕ್ಷೇತ್ರ ಕಾಂಗ್ರೆಸ್‌ ಪಾಲಿಗೆ ದೊಡ್ಡ ತಲೆನೋವಾಗಿ ಪರಣಮಿಸಿದ್ದು, ಸುಮಲತಾ ಅವರಿಗೆ ಬೇರೆ ಕ್ಷೇತ್ರದ ಆಫರ್ ನೀಡಲಾಗಿದೆ.

ಮಂಡ್ಯ, (ಫೆ.28):  ಮಂಡ್ಯದಿಂದಲೇ ರಾಜಕೀಯಕ್ಕೆ ಎಂಟ್ರಿಕೊಡಲು ಬಯಸಿರುವ ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ ಹೊಸ ಕ್ಷೇತ್ರದ ಆಫರ್ ನೀಡಿದೆ.

ಇಂದು (ಗುರುವಾರ) ಸುಮಲತಾ ಅಂಬರೀಶ್‌ ಅವರು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದರು. ಲೋಕಸಭೆ ಚುನಾವಣೆಗೆ ಸ್ಪರ್ಧೆ ಕುರಿತಂತೆ‌ ಸುಮಲತಾ ಅವರು ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಅಭಿಪ್ರಾಯ ಪಡೆದರು.

ಮಂಡ್ಯ ಮ್ಯಾಚ್ ಫಿಕ್ಸ್, ಸುಮಲತಾ ಅಂಬರೀಶ್‌ಗೆ ಟಿಕೇಟ್ ಇಲ್ಲ, ಡಿಕೆಶಿ ಸುಳಿವು..!

ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರ ಅವರು, 'ಮಂಡ್ಯವೇ ನಿಮಗೆ ಯಾಕೆ ಬೇಕು? ಬೆಂಗಳೂರು ಉತ್ತರ ಅಥವಾ ದಕ್ಷಿಣ ಯಾವುದಾದ್ರು ಕ್ಷೇತ್ರದಿಂದ ಸ್ಪರ್ಧಿಸಿ ಎನ್ನುತ್ತಾರೆ. ಇನ್ನು ನೀವು ಚುನಾವಣೆಗೆ ಸ್ಪರ್ಧೆ ಮಾಡುವುದೇ ಬೇಡ ನಿಮಗ್ಯಾವುದಾದ್ರು ಸ್ಥಾನ ನೀಡುತ್ತೇವೆ ಎನ್ನುತ್ತಾರೆ' ಎಂದು ಕಾಂಗ್ರೆಸ್ ನಾಯಕರು ಹಾಡಿರುವ ಮಾತುಗಳನ್ನು ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷದ ಮೇಲೆ ನಮಗೆ ನೀಯತ್ತಿದೆ. ಅಂಬರೀಶ್‌ರವನ್ನ ಕಾಂಗ್ರೆಸ್​​ನಿಂದ ಎರಡು ಬಾರಿ‌ ಸಚಿವನಾಗಿ, ಸಂಸದನನ್ನಾಗಿ ಮಾಡಿದ್ದೀರಾ. ನಾನು ಸ್ಪರ್ಧೆ ಮಾಡುವುದಾದರೆ ಮಂಡ್ಯದಿಂದ ಮಾತ್ರ ಎಂದು ಸುಮಲತಾ ಅಂಬರೀಶ್ ಮತ್ತೊಮ್ಮೆ ಸ್ಪಷ್ಟಪಡಿಸಿದರು. 

ಕೈ ಟಿಕೆಟ್ ಇಲ್ಲ, ದೋಸ್ತಿಗೆ ನಡುಕ ತಂದ ಸುಮಲತಾ ಮೊದಲ ಹೆಜ್ಜೆ

ನಾವು ಇಷ್ಟು ದಿನ ಅಂಬರೀಶಣ್ಣನ ಕೈ ಹಿಡಿದಿದ್ದೆವು. ಈಗ, ನೀವು ನಮ್ಮ ಕೈ ಬಿಡಬೇಡಿ ಎಂದು ಇಲ್ಲಿನ ಜನ ಹೇಳುವಾಗ ಚುನಾವಣೆಗೆ ಸ್ಪರ್ಧಿಸದಿದ್ದರೆ ನಮಗೆ ಮಾನವೀಯತೆ ಇರುವುದಿಲ್ಲ ಎಂದರು.

click me!