Sting Operation in Karnataka: ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು? ಈಗ ಎಲ್ಲಿದ್ದಾರೆ? ಆರ್ ಅಶೋಕ್ ಹೇಳಿಕೆ ಸಂಚಲನ!

Kannadaprabha News   | Kannada Prabha
Published : Oct 14, 2026, 07:39 AM IST
R Ashoka s statement creates a stir

ಸಾರಾಂಶ

ಸ್ಟಿಂಗ್ ಆಪರೇಷನ್ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಸ್ಟಿಂಗ್ ಆಪರೇಷನ್ ನಡೆಸಿದವರು ಯಾರು? ಅವರೀಗ ಎಲ್ಲಿದ್ದಾರೆ? ಆರ್ ಅಶೋಕ್ ಹೇಳಿದ್ದೇನು?

\ಬೆಂಗಳೂರು (ಅ.14): ಸ್ಟಿಂಗ್‌ ಆಪರೇಷನ್‌(Sting Operation) ಸಂಬಂಧ ಕೆಲವರನ್ನು ಬಂಧಿಸಿ ಪ್ರಭಾವಿಗಳ ಸುಪರ್ದಿಯಲ್ಲಿರಿಸಿರುವ ಮಾಹಿತಿ ಇದೆ. ಈ ಸ್ಟಿಂಗ್‌ ಆಪರೇಷನ್‌ ಮಾಡಿಸಿದ್ದು ಯಾರೆಂಬುದು ಬೆಳಕಿಗೆ ಬರಬೇಕು. ಹೀಗಾಗಿ ಮೊದಲು ಎಫ್‌ಐಆರ್‌ ದಾಖಲಿಸಿ ತನಿಖೆ ಮಾಡಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಆಗ್ರಹಿಸಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah)ಅತಿ ಹೆಚ್ಚು ಕಾಲ ಮುಖ್ಯಮಂತ್ರಿ ಆಗಿದ್ದರು. ಅಂಥವರಿಗೆ ಕೋರ್ಟ್‌ ಮೆಟ್ಟಿಲೇರುವ ನೋವನ್ನು ಕಾಂಗ್ರೆಸ್ಸಿಗರು ನೀಡಿದ್ದಾರೆ. ಸಿದ್ದರಾಮಯ್ಯಗೆ ಈಗ ಕಾಂಗ್ರೆಸ್‌ನ ಸಂಸ್ಕೃತಿ ಗೊತ್ತಾಗಿದೆ. ಅವರ ಬೆನ್ನಿಗೆ ಕಾಂಗ್ರೆಸ್‌ ನಾಯಕರು ಚೂರಿ ಹಾಕಿದ್ದಾರೆ. ನ್ಯಾಯಾಲಯಕ್ಕೆ ಹೋಗಿ ತಡೆ ತರುವ ದಯನೀಯ ಸ್ಥಿತಿ ಅವರಿಗೆ ಬಂದಿದೆ. ಅವರನ್ನು ಬಳಸಿಕೊಂಡು ಬಳಿಕ ಎಸೆದಿದ್ದಾರೆ ಎಂದು ಕಿಡಿಕಾಡಿದರು.

ಧೈರ್ಯ ಇದ್ದರೆ ತನಿಖೆ ಮಾಡಿ:

ಸೈದ್ಧಾಂತಿಕವಾಗಿ ಸಿದ್ದರಾಮಯ್ಯ ಅವರನ್ನು ನಾನು ವಿರೋಧಿಸುತ್ತೇನೆ. ಆದರೆ ಹಿರಿಯರಾದ ಅವರಿಗೆ ಹೀಗೆ ಮಾಡಬಾರದಿತ್ತು. ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಅವರು ಸಚಿವರಾಗಿದ್ದರು. ತುರ್ತು ಪರಿಸ್ಥಿತಿ ವಿರುದ್ಧ ಹೋರಾಟ ಮಾಡಿದ್ದರು. ಫಾರ್ಮ್‌ 7 ಕೊಟ್ಟವರನ್ನು ಕೂಡಲೇ ಬಂಧಿಸಿದ್ದಾರೆ. ಆದರೆ ಸ್ಟಿಂಗ್‌ ಆಪರೇಶನ್‌ ಮಾಡಿದವರು ಯಾರೆಂದು ಕೂಡ ಹೇಳಿಲ್ಲ. ಧೈರ್ಯವಿದ್ದರೆ ಈ ಕುರಿತು ತನಿಖೆ ಮಾಡಲಿ, ಸಿಬಿಐಗೆ ವಹಿಸಲಿ. ಮೊದಲು ಎಫ್‌ಐಆರ್‌ ದಾಖಲಿಸಲಿ ಎಂದು ಅಶೋಕ್‌ ಆಗ್ರಹಿಸಿದರು.

ಮಾಜಿ ಸಚಿವ ಕೆ.ಎನ್‌.ರಾಜಣ್ಣ ಈ ಬಗ್ಗೆ ಮಾತಾಡಿರುವುದರಿಂದ ಅವರ ಮೂಲಕವೇ ದೂರು ಸ್ವೀಕಾರ ಮಾಡಲಿ. ಸ್ವಯಂಪ್ರೇರಿತವಾಗಿಯೂ ದೂರು ದಾಖಲಿಸಬಹುದು. ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಕೋರ್ಟ್‌ಗೆ ಹೋಗಿರುವುದರಿಂದ ದೂರು ದಾಖಲಿಸಬಹುದು. ದೂರು ದಾಖಲಿಸದೆ ಸುಮ್ಮನೆ ಮಾತಾಡುವುದರಿಂದ ಯಾವುದೇ ಪ್ರಯೋಜವಿಲ್ಲ ಎಂದು ಹೇಳಿದರು.

ಕತ್ತಿನ ಪಟ್ಟಿ ಹಿಡಿದು ತಳ್ಳಿ ಸಿಎಂ ಡಿಕೆಶಿಗೆ ಅವಮಾನ

ದೆಹಲಿ ಪ್ರತಿಭಟನೆ ವೇಳೆ ರಾಹುಲ್‌ ಗಾಂಧಿ ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಕತ್ತಿನ ಪಟ್ಟಿ ಹಿಡಿದು ತಳ್ಳಿದ್ದಾರೆ. ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿಗೆ ಅದೇ ಪಕ್ಷದ ನಾಯಕರು ಈ ರೀತಿ ಅವಮಾನ ಮಾಡಿಲ್ಲ. ಇದು ಏಳು ಕೋಟಿ ಕನ್ನಡಿಗರಿಗೆ ಮಾಡಿದ ಅಪಮಾನ. ರಾಹುಲ್‌ ಗಾಂಧಿ ಕೂಡಲೇ ಜನರ ಕ್ಷಮೆ ಕೇಳಬೇಕು. ಇಲ್ಲವಾದರೆ ಅವರನ್ನು ರಾಜ್ಯಕ್ಕೆ ಬರಲು ಬಿಡಬಾರದು. ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ಗೆ ಹಣ ನೀಡುವ ಬಾಂಡೆಡ್‌ ಲೇಬರ್‌ ರೀತಿ ಆಗಿದ್ದಾರೆ ಎಂದು ಆರ್‌.ಅಶೋಕ್‌ ಕಿಡಿಕಾರಿದರು.

ಸೋನಿಯಾ ಗಾಂಧಿ ಮದುವೆಯಾಗಿ 15 ವರ್ಷಗಳಾದ ನಂತರ ಭಾರತೀಯರಾದರು. ಅಂತಹ ವಂಶದಿಂದ ಬಂದ ರಾಹುಲ್‌ ಗಾಂಧಿ ವೋಟ್‌ ಚೋರಿ ಬಗ್ಗೆ ಮಾತಾಡುತ್ತಾರೆ. ಇದರ ಬದಲು ಅವರು ಕರ್ನಾಟಕದಲ್ಲಿ ಖಜಾನೆ ಚೋರಿ ಬಗ್ಗೆ ಮಾತಾಡಬೇಕು.

-ಆರ್‌.ಅಶೋಕ್‌, ವಿರೋಧ ಪಕ್ಷದ ನಾಯಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನ್ನ ತಂದೆ ತಪ್ಪು ಮಾಡಿಲ್ಲ, ಅಪಪ್ರಚಾರ ಮಾಡಿದ್ರೆ ಎದುರಿಸ್ತೇವೆ: ಯತೀಂದ್ರ
Amit shah: ಗುಜರಾತ್‌ನಲ್ಲಿ 40 ವರ್ಷಗಳಿಂದ ಕಾಂಗ್ರೆಸ್ ಗೆದ್ದಿಲ್ಲ, ಇದಕ್ಕೆ SIR ಕಾರಣವಾ? ರಾಹುಲ್ ಬಗ್ಗೆ ಗಂಭೀರ ಆರೋಪ!