ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅಪರಾಧಗಳ ರಾಜ್ಯ ಹಣೆಪಟ್ಟಿ: ನಿರ್ಮಲಾ ಕೊಳ್ಳಿ

Published : May 21, 2024, 12:53 PM IST
ಕಾಂಗ್ರೆಸ್‌ನಿಂದ ಕರ್ನಾಟಕಕ್ಕೆ ಅಪರಾಧಗಳ ರಾಜ್ಯ ಹಣೆಪಟ್ಟಿ: ನಿರ್ಮಲಾ ಕೊಳ್ಳಿ

ಸಾರಾಂಶ

ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿತ್ತು. ಅಪರಾಧಗಳನ್ನು ಕನಿಷ್ಠ ಪ್ರಮಾಣದಲ್ಲಿ ಇಡುವ ನಿಟ್ಟಿನಲ್ಲಿ ಉತ್ತಮ ಹೆಸರು ಪಡೆದಿತ್ತು. ಆದರೆ ಈಗ ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟು ಹೋಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆಗಳು ಹಾಗೂ ಬಡವರು, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚಾಗಿವೆ ಎಂದು ಆರೋಪಿಸಿದ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ 

ಗದಗ(ಮೇ.21): ಕಾಂಗ್ರೆಸ್‌ನಿಂದಾಗಿ ಕರ್ನಾಟಕವು ಅಪರಾಧಗಳ ರಾಜ್ಯ ಎಂಬ ಕೆಟ್ಟ ಹೆಸರು ಪಡೆಯುವಂತಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲಾ ಕೊಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ, ಕಾಂಗ್ರೆಸ್‌ ನಡೆ ವಿರುದ್ಧ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಆನಂತರ ಅವರು ಮಾತನಾಡಿದರು. 

ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿತ್ತು. ಅಪರಾಧಗಳನ್ನು ಕನಿಷ್ಠ ಪ್ರಮಾಣದಲ್ಲಿ ಇಡುವ ನಿಟ್ಟಿನಲ್ಲಿ ಉತ್ತಮ ಹೆಸರು ಪಡೆದಿತ್ತು. ಆದರೆ ಈಗ ಕಾಂಗ್ರೆಸ್ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ತೀರಾ ಹದಗೆಟ್ಟು ಹೋಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಸುಲಿಗೆಗಳು ಹಾಗೂ ಬಡವರು, ಶೋಷಿತರ ಮೇಲಿನ ದೌರ್ಜನ್ಯ ಹೆಚ್ಚಾಗಿವೆ ಎಂದು ಆರೋಪಿಸಿದರು.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿ: ಬೊಮ್ಮಾಯಿ

ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾದ ನಂತರದಿಂದ ಒಂದು ಕೋಮಿನವರ ಮನವೊಲಿಸಿ, ಅಪರಾಧಿಗಳಿಗೆ ರಕ್ಷಣೆ ನೀಡಲಾಗುತ್ತಿದೆ, ಅಪರಾಧ ಕೃತ್ಯಗಳು ಹೆಚ್ಚು ಅದು ಕಾರಣವಾಗಿದೆ. ಗೂಂಡಾ ರಾಜ್ಯದ ಪರಿಕಲ್ಪನೆ ಮೂಡುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ಸುಲಿಗೆಗಳಂತಹ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಅಂಜಲಿ ಅಂಬಿಗೇರ ಹಾಗೂ ನೇಹಾ ಹಿರೇಮಠ ಅವ ಹತ್ಯೆಗಳು ನಮ್ಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿರುವುದಕ್ಕೆ ಸಾಕ್ಷಿ. ಈಗಲಾದರೂ ಎಚ್ಚೆತ್ತುಕೊಂಡು ರಾಜ್ಯದ ಜನರಿಗೆ ಶಾಂತಿ, ನೆಮ್ಮದಿ ನೀಡುವ ಕಠಿಣ ಕಾನೂನನ್ನು ಕಾಂಗ್ರೆಸ್‌ ಸರ್ಕಾರ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ ಮಾತನಾಡಿದರು. ರತ್ನಾ ಕುರಗೋಡ, ರೇವತಿ ಉಪನಾಳ, ಕಸ್ತೂರಿ ಕಮ್ಮಾರ, ಜ್ಯೋತಿ ಹಾನಗಲ್, ಪವಿತ್ರಾ ಕಲ್ಕುಟಗರ್, ನಂದಾ ಪಲ್ಲೇದ, ಶಾರದಾ ದಳವಾಯಿ, ಜ್ಯೋತಿ ಪಾಯಪ್ಪಗೌಡ್ರ, ಸುಮಂಗಲಾ ಕಲ್ಲಾಪುರ, ಪುಷ್ಪಾ ಉಕ್ಕಲಿ, ಲಕ್ಷ್ಮೀ ಕಾಕಿ, ರೇಖಾ ಬಂಗಾರಶೆಟ್ಟರ, ಶಾಂತಾ ತಿಮ್ಮಾಪುರ, ಚನ್ನಮ್ಮ ಹುಳಕಣ್ಣವರ, ಶೇಖವ್ವ ಮಾಸರಡ್ಡಿ, ಕಮಲಾಕ್ಷಿ ತಕ್ಕಲಕೋಟಿ, ಸುಮಂಗಲಾ ಕೊನೆವಾಲ, ರಾಜೇಶ್ವರಿ ಹಾದಿಮನಿ, ಶಿವಲೀಲಾ ಉಮಚಗಿ, ರಾಧಾ ಬಾರಕೇರ, ವೀಣಾ ಬೂದಿಹಾಳ, ಮಂಜುಳಾ ಹೆಬ್ಬಳಮಠ, ಪ್ರಭಾವತಿ ಬೆಳವಣಿಕಿಮಠ, ಕೌಶಲ್ಯ ಬದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್.ಕೆ. ಚವ್ಹಾಣ, ಫಕ್ಕಿರೇಶ ರಟ್ಟಿಹಳ್ಳಿ, ಎಂ.ಎಸ್. ಕರೀಗೌಡ್ರ, ಅಶೋಕ ಸಂಕಣ್ಣವರ, ಕೆ.ಪಿ. ಕೋಟಿಗೌಡ್ರ, ಸುರೇಶ ಚಿತ್ತರಗಿ, ಸುಧೀರ ಕಾಟಿಗರ, ವಿಜಯ ಹಿರೇಮಠ, ಗೈಬುಸಾಬ ಕಲೆಬಾಯಿ, ಲಕ್ಷ್ಮಣ ದೊಡ್ಮನಿ, ಮಾಂತೇಶ ನಲವಡಿ, ಶಂಕರ ಕಾಕಿ, ಮಂಜು ಮುಳಗುಂದ, ಸಂತೋಷ ಅಕ್ಕಿ, ರಮೇಶ ಸಜ್ಜಗಾರ್, ದೇವಪ್ಪ ಗೊಟೂರ, ಅಪ್ಪಣ್ಣ ಟೆಂಗಿನಕಾಯಿ, ಸೋಮೇಶ ಉಪನಾಳ, ರಮೇಶ ಹತ್ತಿಕಾಳ, ಮಾಂತೇಶ ಬಾತಾಖಾನಿ, ಗಣೇಶ, ವಿನಾಯಕ ಪರಾಪುರ, ಅಯ್ಯಪ್ಪ ಅಂಗಡಿ, ರಾಜೇಶ ಕಟ್ಟಿಮನಿ, ವಿಶ್ವನಾಥ ಶಿರಿಗಣ್ಣವರ, ವಿನೋದ ಹಂಸನೂರ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?
ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್