ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಎಚ್ ಡಿ ಕುಮಾರಸ್ವಾಮಿ ಎಲ್ಲವನ್ನೂ ಅನುಭವಿಸಿದ್ದಾರೆ. ಅವರಿಗೆ ಈಗ ಯಾವುದರ ಅಗತ್ಯವೂ ಇಲ್ಲ ಎಂದು ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.
ಬೆಂಗಳೂರು (ಡಿ.06): ಸಿದ್ದರಾಮಯ್ಯ ಟೀಂ ನನ್ನ ಟ್ರ್ಯಾಪ್ ಮಾಡಿತ್ತು ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಸ್ ಟಿ ಸೋಮಶೇಖರ್ ನಾನು ಸಿದ್ದರಾಮಯ್ಯ ಟೀಂ ಅಲ್ಲ. ಕಾಂಗ್ರೆಸ್ ಟೀಂನಲ್ಲಿದ್ದೆ ಎಂದು ಹೇಳಿದರು.
ಬೆಂಗಳೂರಿನಲ್ಲಿಂದು ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.
'HDK ಸ್ಟಾರ್ ಹೋಟೆಲ್‌ನಲ್ಲಿ ಇರ್ತಿದ್ರು, ಅಲ್ಲಿಗೆ ಯಾರನ್ನು ಬಿಡ್ತಿರಲಿಲ್ಲ' ...
ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನಾನು ಬಂದ ನಂತರ ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಂದಿದ್ದು. ನಾನೊಬ್ಬ ಅಮಾಯಕ, ಮುಗ್ಧ. ಇದೀಗ ರಾಜಕೀಯಕ್ಕೆ ಅಂಬೆಗಾಲು ಇಡುತ್ತಿದ್ದೇನೆ ಎಂದು ಸೋಮಶೇಖರ್ ಹೇಳಿದರು.
ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸಿಎಂ ಸ್ಥಾನ ಅನುಭವಿಸಿರುವವರು. ಅವರು ಎಲ್ಲಾ ರೀತಿಯ ಅಧಿಕಾರವನ್ನ ಅನುಭವಿಸಿದ್ದಾರೆ. ಅವರಿಗೆ ಇದೀಗ ಏನು ಬೇಕಾಗಿಲ್ಲ. ಅವರಿಬ್ಬರ ವಿಚಾರವನ್ನ ನಾನೇಕೆ ಹೇಳಲಿ ಎಂದರು.
ಸತ್ಯ ಏನು ಎಂಬುದು ಸಿದ್ದರಾಮಯ್ಯ-ಸೋಮಶೇಖರ್ ಅವರಿಬ್ಬರಿಗೆ ಮಾತ್ರ ಗೊತ್ತು. ಇಬ್ಬರೂ ಸತ್ಯ ಹೇಳುತ್ತಿಲ್ಲ. ಎಲ್ಲವೂ ಮುಗಿದ ಅಧ್ಯಾಯ ಎಂದು ಸೋಮಶೇಖರ್ ಹೇಳಿದರು.