ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ರಾಜ್ಯಲ್ಲಿ ಅಬ್ಬರಿಸುತ್ತಿದೆ, ಸೋಂಕಿತರ ಸಂಖ್ಯೆ ಹೆಚ್ಚಳದ ಜೊತೆಗೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಆದ್ರೆ, ರಾಮುಲು ಮಾತ್ರ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇನ್ನು ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದು ಹೀಗೆ...
ಬಳ್ಳಾರಿ, (ಏ.23): ಕೊರೋನಾ ಆರ್ಭಟದ ನಡುವೆ ಸಚಿವ ಶ್ರೀರಾಮುಲು ಅವರು ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಜನರನ್ನು ಕರೆದುಕೊಂಡು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ ರಾಜ್ಯಲ್ಲಿ ಅಬ್ಬರಿಸುತ್ತಿದೆ, ಸೋಂಕಿತರ ಸಂಖ್ಯೆ ಹೆಚ್ಚಳದ ಜೊತೆಗೆ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿರುವುದರಿಂದ ರಾಜ್ಯ ಸರ್ಕಾರ ಟಫ್ ರೂಲ್ಸ್ಗಳನ್ನ ಅಳವಡಿಕೆ ಮಾಡಿದೆ. ಅದನ್ನು ಪ್ರತೀ ಪ್ರಜೆ ಪಾಲಿಸಬೇಕು ಎಂದು ಆದೇಶವನ್ನೂ ಹೊರಡಿಸಿದೆ. ಆದರೆ ಜನರಿಗೆ ಮಾದರಿಯಾಗಿರಬೇಕಾಗಿದ್ದ ಸಚಿವ ಶ್ರೀರಾಮುಲು ಅವರೇ ತಮ್ಮ ಸರ್ಕಾರದ ಆಡಳಿತವನ್ನು ತಾವೇ ಉಲ್ಲಂಘಿಸುತ್ತಿದ್ದಾರೆ.
ರಾಜ್ಯಕ್ಕೆ ಒಂದು ರೂಲ್ಸ್, ಶ್ರೀರಾಮುಲುಗೆ ಪ್ರತ್ಯೇಕ ರೂಲ್ಸ್; ಸಚಿವರಿಂದ ಪದೇ ಪದೇ ರೂಲ್ಸ್ ಬ್ರೇಕ್!
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಜನರು ಕಮೆಂಟ್‌ನಲ್ಲಿ ಛೀ...ಥೂ ಅಂತ ಅಂತ ಜನ ಉಗೀತ್ತಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಶ್ರೀರಾಮುಲು, ಚುನಾವಣಾ ಪ್ರಚಾರ ಸಂದರ್ಭದಲ್ಲಿ ನಾನು ಹೋದಲೆಲ್ಲಾ 5ಕ್ಕಿಂತ ಹೆಚ್ಚು ಜನ ಬರಬೇಡಿ ಎಂದು ಹೇಳುತ್ತೇನೆ. ಆದರೂ ಜನರು ಕೇಳುತ್ತಿಲ್ಲ. ಮಾಸ್ಕ್ ಹಾಕಿಕೊಳ್ಳಲು ಹೋದರೆ ಸೆಲ್ಫಿ ತೆಗೆದುಕೊಳ್ಳಬೇಕು. ಮಾಸ್ಕ್ ತೆಗೀರಿ ಎಂದು ಜನರೇ ನನ್ನನ್ನು ಬೆದರಿಸುತ್ತಾರೆ. ನಾನು ಏನು ಮಾಡಲಿ? ಎಂದು ಸಬೂಬು ಹೇಳಿದರು.
ನಾನು ನನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕು. ಅದಕ್ಕಾಗಿ ಪ್ರಚಾರ ಕೈಗೊಂಡಿರುವೆ. ಆದರೆ, ಜನಗಳೇ ನುಗ್ಗಿ-ನುಗ್ಗಿ ಬರ್ತಿದ್ದಾರೆ. ನಾನು ಎಷ್ಟು ತಡೆಯಲು ಪ್ರಯತ್ನಪಟ್ಟರೂ ಜನ ಬರ್ತಿದ್ದಾರೆ. ದಯವಿಟ್ಟು ಹಂಗೆ ಮಾಡ್ಬೇಡಿ ಅಂದ್ರೂ ಕೇಳಲ್ಲ. ಇನ್ಮುಂದೆ ಹೀಗಾಗದಂತೆ ನೋಡಿಕೊಳ್ಳುವೆ ಎಂದು ಸಮಾಜಾಯಿಷಿ ನೀಡಿದರು.