ಅಘೋಷಿತ ಲಾಕ್​ಡೌನ್​ ಮಾಡಿಸಿರುವುದಕ್ಕೆ ಡಿಕೆಶಿ ಫುಲ್ ಗರಂ

Published : Apr 23, 2021, 06:40 PM ISTUpdated : Apr 23, 2021, 06:43 PM IST
ಅಘೋಷಿತ ಲಾಕ್​ಡೌನ್​ ಮಾಡಿಸಿರುವುದಕ್ಕೆ ಡಿಕೆಶಿ ಫುಲ್ ಗರಂ

ಸಾರಾಂಶ

ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್​ ಮಾಡಿಸಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬೆಂಗಳೂರು, (ಏ.23): ನಿನ್ನೆ (ಏ.22)ಒತ್ತಾಯ ಪೂರ್ವಕವಾಗಿ ಬಂದ್​ ಮಾಡಿಸಿದ್ದು, ವರ್ತಕ ಸಮುದಾಯದಲ್ಲಿ ಆತಂಕ ಮೂಡುವಂತೆ ಮಾಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಏ.22ರಂದು ರಾಜ್ಯದಲ್ಲಿ ಅಘೋಷಿತ ಲಾಕ್​ಡೌನ್​ ಮಾಡಿಸಿರುವುದಕ್ಕೆ  ಇಂದು (ಶುಕ್ರವಾರ) ಕೆಪಿಸಿಸಿ ಕಾರ್ಯಾಧ್ಯಕ್ಷರ ಜೊತೆ ಡಿ.ಕೆ. ಶಿವಕುಮಾರ್​ ಸಭೆ ನಡೆಸಿದರು. ಈ ಸಭೆಯಲ್ಲಿ ‌ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಧ್ರುವನಾರಾಯಣ್​ ಹಾಗೂ ಕುಣಿಗಲ್​ ಶಾಸಕ ಡಾ. ರಂಗನಾಥ್​ ಭಾಗಿಯಾಗಿದ್ದರು.

ಕೊರೋನಾ ಸಂಕಷ್ಟದಲ್ಲಿರೋ ಜನರಿಗೆ ನೆರವಾಗಿ: ತಮ್ಮ ಶಾಸಕರಿಗೆ ಸಿದ್ದು ಮನವಿ

ಈ ಸಭೆಯ ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್​ ನಿನ್ನೆ (ಏ.22) ಅಘೋಷಿತವಾಗಿ ಅಂಗಡಿಗಳನ್ನ ಬಂದ್​​ ಮಾಡಿಸಿದ್ದಾರೆ. ಮೊನ್ನೆ ಮುಖ್ಯ ಕಾರ್ಯದರ್ಶಿ ಹೇಳಿದ್ದೇನು? ನಿನ್ನೆ ಮಾಡಿದ್ದೇನು..? ಎಂದು ಪ್ರಶ್ನಿಸಿದರು.

 ಸರ್ಕಾರ ಸಾಮಾನ್ಯ ಜನರನ್ನ ತಪ್ಪು ದಾರಿಗೆ ಎಳೀತಿದೆ, ಅವರ ಆರೋಗ್ಯದ ಬಗ್ಗೆ ಯೋಚನೆ ಮಾಡುತ್ತಿಲ್ಲ, ಅವರ ಆರ್ಥಿಕ ಸ್ಥಿತಿಗತಿ ಬಗ್ಗೆಯೂ ಯೋಚನೆ ಮಾಡುತ್ತಿಲ್ಲ. ನೀವು ಲಾಕ್​ಡೌನ್​ ಅನೌನ್ಸ್​​ ಮಾಡಿಲ್ಲ, ಆದರೆ ಏಕಾಏಕಿ ಬಂದ್​ ಮಾಡಿಸುತ್ತಿದ್ದೀರಿ ಎಂದು ಸರ್ಕಾರದ ನಡೆಗೆ ಕಿಡಿಕಾರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ
ಸಿಎಂ ಸಿದ್ದರಾಮಯ್ಯಗೆ ಸುಪ್ರೀಂಕೋರ್ಟ್‌ ನೋಟೀಸ್: ವರುಣಾ ಕ್ಷೇತ್ರದ ಆಯ್ಕೆ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ