ಸಿದ್ದು ಸಿಎಂ ಆಗಲಿ ಎಂದ ರಾಮುಲು ರಾಜಕೀಯ ಲೆಕ್ಕಾಚಾರವೇ ಬೇರೆ ಇದೆಯಾ?

By Girish Goudar  |  First Published Aug 17, 2022, 10:43 AM IST

ಸಿದ್ದು ಸಿಎಂ ಆಗಲಿ ಎಂದಿದ್ದ ಶ್ರೀರಾಮುಲು ಹೇಳಿಕೆ ಹಿಂದೆ ಹತ್ತು ಹಲವು ರಾಜಕೀಯ ಲೆಕ್ಕಾಚಾರವೇ ಅಡಗಿದೆ


ಬಳ್ಳಾರಿ(ಆ.17): ಇದ್ದಕ್ಕಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯರನ್ನ ಹೊಗಳಿದ್ದ ಶ್ರೀರಾಮುಲು ರಾಜಕೀಯ ಲೆಕ್ಕಾಚಾರವೇ ಬೇರೆಯಾಗಿದೆ ಅಂತ ಹೇಳಲಾಗುತ್ತಿದೆ. ಹೌದು, ಸಿದ್ದು ಸಿಎಂ ಆಗಲಿ ಎಂದಿದ್ದ ಶ್ರೀರಾಮುಲು ಹೇಳಿಕೆ ಹಿಂದೆ ಹತ್ತು ಹಲವು ರಾಜಕೀಯ ಲೆಕ್ಕಾಚಾರವೇ ಅಡಗಿದೆ. ಇಷ್ಟು ದಿನ ಎಸ್ಟಿ ಸಮುದಾಯದ ಪ್ರಬಲ ನಾಯಕ ಅಂತಾ ರಾಮುಲು ಬಿಂಬಿಸಿಕೊಳ್ತಾ ಇದ್ರು, ಈಗ ಏಕಾ ಏಕಿ ಎಸ್ಟಿಗೆ ಮಾತ್ರ ಅಲ್ಲ, ಅಹಿಂದಾ ವರ್ಗಗಳ ನಾಯಕ ಅಂತಾ ಬಿಂಬಿಸಿಕೊಳ್ಳೋ ಯತ್ನದಲ್ಲಿದ್ದಾರೆ. 

ಹಿಜಾಬ್, ಹಲಾಲ್ ಕಟ್ ವಿಚಾರದಲ್ಲಿ ಮೌನವಗಿದ್ದ ಶ್ರೀರಾಮುಲು, ಈಗ ಹಿಂದುಳಿದ ವರ್ಗಗಳ ಅಭಿವೃದ್ಧಿ ಮಾಡುವ ಹೆಸರಲ್ಲಿ ಹೊಸ ರಾಜಕೀಯ ತಂತ್ರವನ್ನ ಹೆಣೆದಿದ್ದಾರೆ. ಅಹಿಂದ ಹೆಸರಲ್ಲಿ ಸಿದ್ದರಾಮೋತ್ಸವದಲ್ಲಿ ಸಿದ್ದುಗೆ ಸಿಕ್ಕ ಅಹಿಂದ ಪ್ರೀತಿ‌ ನೋಡಿ ರಾಮುಲು ಈ ತಂತ್ರಕ್ಕೆ ಮೊರೆ ಹೋಗಿದ್ದಾರಂತೆ ಅಂತ ಹೇಳಲಾಗುತ್ತಿದೆ.

Tap to resize

Latest Videos

undefined

Sriramulu Vs Nagendra; ನಾಗೇಂದ್ರ ವೈಲೆಂಟ್ ಆಗ್ತಿದ್ದಂತೆ ಶ್ರೀರಾಮುಲು ಸೈಲೆಂಟ್!

ಎಸ್ಟಿ ಸಮುದಾಯದ ಕೋಟಾದಲ್ಲಿ ಹೋದ್ರೇ ಮುಂದೆಯೂ ಡಿಸಿಎಂ‌ ಸಿಗೋದು ಡೌಟ್, ಈಗ ಅಹಿಂದ ಮಂತ್ರದ ಮೂಲಕ ಶ್ರೀರಾಮುಲು ಹೊಸ ಬಗೆಯ ಪ್ರಯತ್ನವನ್ನ ಮಾಡಿದ್ದಾರೆ. ಇನ್ನೊಂದು ಆಯಾಮದಲ್ಲಿ ನೋಡೋದಾದ್ರೇ,  ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಶ್ರೀರಾಮುಲು ಸ್ಪರ್ಧೆ ಮಾಡಲು ಪ್ಲಾನ್ ಮಾಡ್ತಿದ್ದಾರೆ. ಗ್ರಾಮೀಣ ಕ್ಷೇತ್ರದದಲ್ಲಿ ಅಹಿಂದಾ ಮತಗಳೇ ಹೆಚ್ಚಿರುವ ಕಾರಣ ಅಹಿಂದಾ ಮತ ಓಲೈಕೆ ಶ್ರೀರಾಮುಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. 

ಗ್ರಾಮೀಣ ಕ್ಷೇತ್ರದಲ್ಲಿ  

ಎಸ್.ಟಿ :  55 ಸಾವಿರ
ಮುಸ್ಲಿಂ : 40 ಸಾವಿರ ಎಸ್. ಸಿ.. (ಎಲ್ಲ ವರ್ಗ) 
25 ಸಾವಿರ ಕುರುಬ 
20 ಸಾವಿರ ಲಿಂಗಾಯಿತ

ಉಪ್ಪಾರ, ಬಲಿಜ, ಗಂಗಾ ಮತಸ್ಥ ಇತರೆ  30 ಸಾವಿರ ಮತಗಳಿವೆ

ಇದರಲ್ಲಿ ಅಹಿಂದಾ ಮತಗಳೇ ಇಲ್ಲಿ ನಿರ್ಣಾಯಕವಾಗಿರೋ ಹಿನ್ನೆಲೆಯಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯರನ್ನ ಶ್ರೀರಾಮುಲು ಹೊಗಳಿದ್ದಾರೆ ಎಂದ ಚರ್ಚೆಗಳು ಆರಂಭವಾಗಿವೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡಬೇಕಿದೆ. 
 

click me!