ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್ : ಸಿದ್ದರಾಮಯ್ಯ ಸ್ವಾಗತಕ್ಕೆ ಸಜ್ಜು

By Kannadaprabha NewsFirst Published Nov 6, 2021, 1:49 PM IST
Highlights
  •   ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್ ನೀಡುತ್ತಿದ್ದಾರೆ
  •  ಸದ್ಯದಲ್ಲೇ ಸಿದ್ದರಾಮಯ್ಯ ಜೊತೆ ಜಿಟಿ ದೇವೇಗೌಡ ಚಾಮುಂಡೇಶ್ವರಿಯಲ್ಲಿ ಸಂಚಾರ 

ಬೆಂಗಳೂರು(ನ.06):  ಜೆಡಿಎಸ್ (JDS) ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ (GT Devegowda) ಕಾಂಗ್ರೆಸ್ ಸೇರ್ಪಡೆಗೂ ಮುನ್ನವೇ ಶಾಕ್ ನೀಡಲು ಸಜ್ಜಾಗುತ್ತಿದ್ದಾರೆ.   (Congress) ಸದ್ಯದಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಜೊತೆ ಜಿಟಿ ದೇವೇಗೌಡ ಚಾಮುಂಡೇಶ್ವರಿಯಲ್ಲಿ (Chamundeshwari) ಸಂಚಾರ ಮಾಡಲಿದ್ದಾರೆ. 

ಕಾಂಗ್ರೆಸ್ (Congress) ಸೇರುವ ಮುನ್ನವೇ ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಜಿಟಿ ದೇವೇಗೌಡರ ಜೊತೆ  ವೇದಿಕೆ ಹಂಚಿಕೊಳ್ಳಲಿದ್ದು, ಇತ್ತೀಚಿಗೆ ಎರಡು ಬಾರಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಕುಮಾರಸ್ವಾಮಿ (HD kumaraswamy) ಬಂದು ಹೋಗಿದ್ದು,  ಕುಮಾರಸ್ವಾಮಿ ಭೇಟಿ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಕ್ಷೇತ್ರಕ್ಕೆ ಜಿಟಿ ದೇವೇಗೌಡ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ.

ತಾವು ಸೋಲಿಸಿದ್ದ ಸಿದ್ದರಾಮಯ್ಯರನ್ನೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ವಾಗತಿಸಲು ಶಾಸಕ ಜಿಟಿ ದೇವೇಗೌಡ ಸಜ್ಜಾಗಿದ್ದಾರೆ. ನವೆಂಬರ್ 9ಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಜಿ.ಟಿ ದೇವೇಗೌಡ ಸಮಾಗಮವಾಗಲಿದೆ.

ಸಿದ್ದರಾಮಯ್ಯ ಜತೆ ಎರಡು ಕಡೆ ವೇದಿಕೆ‌ ಹಂಚಿಕೊಳ್ಳಲಿರುವ ಶಾಸಕ ಜಿ.ಟಿ ದೇವೇಗೌಡ  ಹಿನಕಲ್ ನಲ್ಲಿ ನಡೆಯುವ ಅಂಬೇಡ್ಕರ್ ಭವನ (Ambedkar bhavan) ಉದ್ಘಾಟನೆ ಕಾರ್ಯಕ್ರಮದಲ್ಲಿ ಇಬ್ಬರೂ ಮುಖಂಡರು  ಭಾಗಿಯಾಗಲಿದ್ದಾರೆ.  ಇದಾದ ನಂತರ ಕೇರ್ಗಳ್ಳಿಯಲ್ಲಿ ನಡೆಯುವ ಕೆಂಚಪ್ಪ ಸಮುದಾಯ ಭವನ ಉದ್ಘಾಟನೆಯಲ್ಲೂ  ಉಭಯ ನಾಯಕರು ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ. 

GTD ನಿರ್ಗಮನದಿಂದ ಜೆಡಿಎಸ್‌ ಮೇಲೆ ಪರಿಣಾಮ

ಜಿ.ಟಿ. ದೇವೇಗೌಡರು ಪಕ್ಷ ತ್ಯಜಿಸುವುದು ಜಿಲ್ಲೆಯಲ್ಲಿ ಜೆಡಿಎಸ್‌ ಮೇಲೂ ಪರಿಣಾಮವಾಗಲಿದೆ. 2008 ರಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ ಕೇವಲ ಒಂದು ಸ್ಥಾನ ಗಳಿಸಿತ್ತು. ಕೆ.ಆರ್‌. ನಗರದಿಂದ ಸಾ.ರಾ. ಮಹೇಶ್‌ ಮಾತ್ರ ಗೆದ್ದಿದ್ದರು. ಬಿಜೆಪಿ ಸೇರಿದ್ದ ಜಿ.ಟಿ. ದೇವೇಗೌಡರು ಹುಣಸೂರಿನಲ್ಲಿ ಸೋತಿದ್ದರು. ಉಳಿದೆಲ್ಲಾ ಕ್ಷೇತ್ರಗಳಲ್ಲೂ ಜೆಡಿಎಸ್‌ ಪರಾಭವಗೊಂಡಿತ್ತು.

ಆದರೆ 2013 ರಲ್ಲಿ ಜೆಡಿಎಸ್‌ಗೆ ಮರಳಿದ ಜಿ.ಟಿ. ದೇವೇಗೌಡ ಚಾಮುಂಡೇಶ್ವರಿ, ಎಸ್‌. ಚಿಕ್ಕಮಾದು ಎಚ್‌.ಡಿ. ಕೋಟೆ ಗೆದ್ದಿದ್ದರು. ಕೆ.ಆರ್‌. ನಗರದಲ್ಲಿ ಸಾ.ರಾ. ಮಹೇಶ್‌ ಪುನಾರಾಯ್ಕೆಯಾಗಿದ್ದರು.

2018 ರಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್‌ 5 ರಲ್ಲಿ ಜಯ ಗಳಿಸಿತ್ತು. ಈ ಪೈಕಿ ಎಚ್‌. ವಿಶ್ವನಾಥ್‌ ನಂತರ ಬಿಜೆಪಿ ಸೇರಿದರು. ಈಗ ಜಿ.ಟಿ. ದೇವೇಗೌಡರು ಕಾಂಗ್ರೆಸ್‌ಗೆ ಹೋದರೆ ಕೆ.ಆರ್‌. ನಗರದ ಸಾ.ರಾ. ಮಹೇಶ್‌, ಪಿರಿಯಾಪಟ್ಟಣದ ಕೆ. ಮಹದೇವ್‌ ಹಾಗೂ ಟಿ.ನರಸೀಪುರದ ಎಂ. ಅಶ್ವಿನ್‌ಕುಮಾರ್‌ ಮಾತ್ರ ಉಳಿಯುತ್ತಾರೆ. ಕೆ. ಮಹದೇವ್‌ ಕೂಡ ಜಿಟಿಡಿ ಬಣದಲ್ಲಿ ಗುರುತಿಸಿಕೊಂಡು ತಮ್ಮ ಪುತ್ರ ಪಿ.ಎಂ. ಪ್ರಸನ್ನ ಅವರನ್ನು ಮೈಮುಲ್‌ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಹೀಗಾಗಿ ಮಹದೇವ್‌ ಪಕ್ಷದಲ್ಲಿ ಉಳಿದರೆ ಅವರಿಗೆ ಟಿಕೆಟ್‌ ಸಿಗಬಹುದು. ಇಲ್ಲವೇ ಪಿರಿಯಾಪಟ್ಟಣದಲ್ಲಿ ಕೂಡ ಕಾಂಗ್ರೆಸ್‌ ಟಿಕೆಟ್‌ಗೆ ಪೈಪೋಟಿ ಉಂಟಾಗಬಹುದು. ಅಲ್ಲಿ ಮಾಜಿ ಸಚಿವ ಕೆ. ವೆಂಕಟೇಶ್‌, ಅವರ ಪುತ್ರ ನಿತಿನ್‌ ವೆಂಕಟೇಶ್‌, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್‌ ಮತ್ತಿತರರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿತರು.

  • ಜೆಡಿಎಸ್ ವರಿಷ್ಠರಿಗೆ ಶಾಸಕ ಜಿ.ಟಿ. ದೇವೇಗೌಡ ಶಾಕ್!
  • ಸದ್ಯದಲ್ಲೇ ಸಿದ್ದರಾಮಯ್ಯ ಜೊತೆ ಜಿಟಿ ದೇವೇಗೌಡ ಚಾಮುಂಡೇಶ್ವರಿಯಲ್ಲಿ ಸಂಚಾರ.
  • ಕಾಂಗ್ರೆಸ್ ಸೇರುವ ಮುನ್ನವೇ ಸಿದ್ದರಾಮಯ್ಯ ಜತೆ ವೇದಿಕೆ ಹಂಚಿಕೊಳ್ಳಲಿರುವ ಜಿಟಿಡಿ.
  • ಇತ್ತೀಚಿಗೆ ಎರಡು ಬಾರಿ ಚಾಮುಂಡೇಶ್ವರಿ ಕ್ಷೇತ್ರಕ್ಕೆ ಎಂಟ್ರಿಕೊಟ್ಟಿದ್ದ ಕುಮಾರಸ್ವಾಮಿ.
  • ಕುಮಾರಸ್ವಾಮಿ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯ ಕ್ಷೇತ್ರಕ್ಕೆ ಗ್ರ್ಯಾಂಡ್ ಎಂಟ್ರಿ.
  • ಸಿದ್ದರಾಮಯ್ಯರನ್ನು ಸ್ವಾಗತಿಸಲು ಸಜ್ಜಾದ ಶಾಸಕ ಜಿಟಿ ದೇವೇಗೌಡ.
  • ನವೆಂಬರ್ 9ಕ್ಕೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ್ತು ಜಿಟಿ ದೇವೇಗೌಡ ಸಮಾಗಮ.
  • ಸಿದ್ದರಾಮಯ್ಯ ಜತೆ ಎರಡು ಕಡೆ ವೇದಿಕೆ‌ ಹಂಚಿಕೊಳ್ಳಲಿರುವ ಶಾಸಕ ಜಿಟಿ ದೇವೇಗೌಡ
click me!