ಕೊರೋನಾಗೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಬಲಿ: ಅಧಿಕಾರ ಸ್ವೀಕರಿಸಿದ ಆರೇ ತಿಂಗಳಿಗೆ ಬದುಕು ಕೊನೆ

By Suvarna NewsFirst Published May 19, 2021, 7:42 PM IST
Highlights

* ಕಿಲ್ಲರ್‌ ಕೊರೋನಾಗೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಬಲಿ
* ಸೋಮವಾರಪೇಟೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ಸಾವು
* ಅಧಿಕಾರ ಸ್ವೀಕರಿಸಿದ ಆರೇ ತಿಂಗಳಿಗೆ ಬದುಕು ಕೊನೆ

ಕೊಡಗು, (ಮೇ.19):  ಸೋಮವಾರಪೇಟೆ ಪಟ್ಟಣ ಪಂಚಾಯತಿ ಅಧ್ಯಕ್ಷೆಯಾಗಿ ಕೇವಲ 6 ತಿಂಗಳು ಆಗಿತ್ತು ಅಷ್ಟೇ. ಆದ್ರೆ, ಮಹಾಮಾರಿ ಕೊರೋನಾ ಅವರನ್ನ ಬಲಿಪಡೆದುಕೊಂಡಿದೆ.

ಹೌದು...ಕೊಡಗಿನ ಸೋಮವಾರಪೇಟೆಯ ಪಟ್ಟಣ ಪಂಚಾಯತಿ ಅಧ್ಯಕ್ಷೆ ನಳಿನಿ ಗಣೇಶ್ (57) ಕೊರೋನಾ ಸೋಂಕು ಬಲಿಯಾಗಿದ್ದಾರೆ.

ಕೊರೋನಾದಿಂದ ಕೊನೆಯುಸಿರೆಳೆದ ಗಣ್ಯರು

ಸೋಮವಾರಪೇಟೆ ಪಟ್ಟಣ ಪಂಚಾಯತಿ ಅಧ್ಯಕ್ಷೆ ನಳಿನಿ ಗಣೇಶ್ ಅವರಿಗೆ ಕೆಲ ದಿನಗಳ ಹಿಂದೆ ಕರೊನಾ ಸೋಂಕು ದೃಢವಾಗಿದ್ದು, ಮಡಿಕೇರಿ ಜಿಲ್ಲಾ‌ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. 

ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಅವರು ಇಂದು (ಬುಧವಾರ) ಕೊನೆಯುಸಿರೆಳೆದಿದ್ದಾರೆ. ನಳಿನಿ ಅವರು ಪಟ್ಟಣ ಪಂಚಾಯತಿಗೆ ಹಲವು ಬಾರಿ ಸದಸ್ಯೆಯಾಗಿ ಚುನಾಯಿತರಾಗಿದ್ದರು.  ಕಳೆದ ನವೆಂಬರ್​ನಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಆರೇ ತಿಂಗಳಿಗೆ ಅವರ ಬದುಕು ಕೊನೆಯಾಗಿದೆ.

 ಕೊರೋನಾದಿಂದ  ರಾಜ್ಯಾದ್ಯಂತ ಪ್ರತಿನಿತ್ಯ ನೂರಾರು ಜನರು ಬಲಿಯಾಗುತ್ತಿದ್ದಾರೆ. ಅನೇಕ ಅಧಿಕಾರಿಗಳು ಸೇರಿ ಜನಪ್ರತಿನಿಧಿಗಳೂ ಸೋಂಕಿನಿಂದಾಗಿ ಕೊನೆಯುಸಿರೆಳೆಯುತ್ತಿದ್ದಾರೆ.

click me!