* ಕೋವಿಡ್‌ನಲ್ಲಿ ರಾಜಕೀಯ ನಾಯಕರ ಕಿತ್ತಾಟ
* ಕಾಂಗ್ರೆಸ್ನ ಮಾಜಿ ಶಾಸಕಿ ಉಮಾಶ್ರೀಗೆ ಬಿಜೆಪಿ ಶಾಸಕ ಸವಾಲು
* ನಿನಗೆ ತಾಕತ್ತಿದ್ರೆ ಮಹಾರಾಷ್ಟ್ರದ ಬಗ್ಗೆ ಮಾತಾಡು ಎಂದ ಸಿದ್ದು ಸವದಿ
ಬಾಗಲಕೋಟೆ, (ಮೇ.19): ಮಹಾರಾಷ್ಟ್ರದಲ್ಲಿ ನಮ್ಮ ರಾಜ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಜನರು ಸಾಯುತ್ತಿದ್ದಾರೆ. ಆ ಬಗ್ಗೆ ಮಾತನಾಡದೆ ನಮ್ಮ ರಾಜ್ಯದ ಬಗ್ಗೆ ಮಾತಾಡುತ್ತೀರಿ. ನಿಮಗೆ ನಾಚಿಕೆ ಆಗಬೇಕು, ತಾಕತ್ ಇದ್ರೆ ಮಹಾರಾಷ್ಟ್ರದ ಬಗ್ಗೆ ಮಾತಾಡಿ ಎಂದು ತೇರದಾಳ ಶಾಸಕ ಸಿದ್ದು ಸವದಿ, ಕಾಂಗ್ರೆಸ್ನ ಮಾಜಿ ಶಾಸಕಿ ಉಮಾಶ್ರೀಗೆ ಸವಾಲು ಹಾಕಿದ್ದಾರೆ.
ಇಂದು (ಬುಧವಾರ) ನಗರದಲ್ಲಿ ಮಾತನಾಡಿದ ಅವರು, ಅನೇಕ ಜನರು ಕೋವಿಡ್ನಿಂದ ಸಾಯುತ್ತಿದ್ದಾರೆ. ಆದರೆ ಕಾಂಗ್ರೆಸ್ನವರು ಸಾವಿನ ಸಂದರ್ಭದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಕೋವಿಡ್ ನಮಗಷ್ಟೇ ಬಂದಿಲ್ಲ ಇಡೀ ಜಗತ್ತಿಗೆ ಬಂದಿದೆ ಎಂದರು.
ಬಿಜೆಪಿ ಶಾಸಕ ಸಿದ್ದು ಸವದಿ ಎಳೆದಾಡಿದ್ದ ಪುರಸಭೆ ಸದಸ್ಯೆಗೆ ಗರ್ಭಪಾತ
ಡಿ.ಕೆ. ಶಿವಕುಮಾರ್ ನಿನ್ನೆ ಹೇಳ್ತಾನೆ, ಇದೇ ಸರ್ಕಾರ ಕೋವಿಡ್ ತಂದಿದೆ ಅಂತಾ. ಇವರಿಗೆ ಮಾನ ಮರ್ಯಾದೆ ಇಲ್ವಾ? ಇವರು ಸಿಎಂ ಕ್ಯಾಂಡಿಡೇಟ್ ಆದವ್ರಿವ್ರು. ಮಾತಾಡೋಕು ಒಂದು ನಾಲಿಗೆ ಇದೆ. ನಿನಗೆ ತಾಕತ್ತಿದ್ರೆ ಮಹಾರಾಷ್ಟ್ರದ ಬಗ್ಗೆ ಮಾತನಾಡು ಎಂದು ಕಿಡಿಕಾರಿದರು.
ನಮ್ಮ ಮೇಡಮ್ ಬೆಂಗಳೂರಲ್ಲಿ ಕೂತು ವಿಡಿಯೋ ಮಾಡಿ ಕಳಿಸ್ತಾರೆ. ಅಲ್ಲಿ ಮೂಲೆಯೊಳಗೆ ಕೂತು ವಿಡಿಯೋ ಮಾಡಬೇಡಿ. ಬನ್ನಿ ನಾವು- ನೀವು ಕ್ಷೇತ್ರಕ್ಕೆ, ಹಳ್ಳಿ ಹಳ್ಳಿಗೆ ಹೋಗೋಣ ಎಂದು ಉಮಾಶ್ರೀ ವಿರುದ್ಧ ಸಿದ್ದು ಸವದಿ ಹರಿಹಾಯ್ದರು.