* ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು
* ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಭೇಟಿ ನಿಗದಿ
* ಬಿಜೆಪಿ ಶಾಸಕರ ವಲಯದಲ್ಲಿ ಆರಂಭಗೊಂಡ ಬಿರುಸಿನ ಚಟುವಟಿಕೆ
ಬೆಂಗಳೂರು, (ಜೂನ್.14): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿದ್ಯಮಾನಗಳು ಕುತೂಹಲದ ಘಟ್ಟಕ್ಕೆ ತಲುಪಿದೆ. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಭೇಟಿ ನಿಗದಿಯಾದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರ ವಲಯದಲ್ಲಿ ರಾಜಕೀಯ ಬಿರುಸಿನ ಚಟುವಟಿಕೆಗಳು ಆರಂಭಗೊಂಡಿದೆ.
ಹೌದು..ನಾಯಕತ್ವ ಬದಲಾವಣೆ ಬಗ್ಗೆ ನಾಯಕರೊಂದಿಗೆ ಸುದೀರ್ಘವಾಗಿ ಚರ್ಚಿಸಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಮೂರು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದೆ. ಇದರಿಂದ ಇತ್ತ ಜೂನ್ 17 ರಂದು ಶಾಸಕರ ನಿಯೋಗ ಅರುಣ್ ಸಿಂಗ್ ಭೇಟಿ ಮಾಡಲು ತಿರ್ಮಾನಿಸಿದೆ.
undefined
ಬಿಎಸ್‌ವೈಗೆ 3 ದಿನಗಳ ಅಗ್ನಿ ಪರೀಕ್ಷೆ: 2011ರ ಮಾಡೆಲ್ ಅನುಸರಿಸಲು ಹೈಕಮಾಂಡ್ ಪ್ಲಾನ್
ಮುಖ್ಯ ಸಚೇತಕ ಸುನೀಲ್ ಕುಮಾರ್ ಸೇರಿದಂತೆ ಪ್ರಮುಖ ಶಾಸಕರ ತಂಡ ಅರುಣ್ ಸಿಂಗ್ ಅವರನ್ನ ಭೇಟಿ ಮಾಡಲಿದ್ದು, ಅವರಿಗೆ ಸೂಕ್ತ ಅಭಿಪ್ರಾಯ ಹೇಳ್ತೇವೆ ಅಂತಿದೆ ಶಾಸಕರ ಟೀಮ್.
ಅರುಣ್ ಸಿಂಗ್ ಬಳಿಗೆ ಹೋಗಿ ನಮ್ಮ ಅಹವಾಲು ಹೇಳುತ್ತೇವೆ. ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ಕೆಲವು ಅಭಿಪ್ರಾಯ ತಿಳಿಸುತ್ತೇವೆ. ರಾಜ್ಯ ಸರ್ಕಾರಕ್ಕೆ ಒಳ್ಳೆಯದಾಗಬೇಕು ಅನ್ನೋ ಕಾರಣಕ್ಕೆ ಅಭಿಪ್ರಾಯ ಹೇಳಲು ಶಾಸಕ ನಿಯೋಗ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಶಾಸಕರ ಗುಂಪೊಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಮಾಹಿತಿ ನೀಡಿದ್ದು, ಪಕ್ಷದ ಚೌಕಟ್ಟಿನಲ್ಲೇ ಸಲಹೆಗಳನ್ನು ನೀಡಲು ಪ್ಲಾನ್ ಮಾಡಿರುವುದು ನಿಜ. ಅರುಣ್ ಸಿಂಗ್ ಅವರಿಗೆ ನಮ್ಮ ಮನಸ್ಸಿನ ಭಾವನೆ ಹೇಳಲು ತಿರ್ಮಾನಿಸಿದ್ದೇವೆ. ಸರ್ಕಾರ ಮತ್ತು ಪಕ್ಷಕ್ಕೆ ಒಳ್ಳೆಯದಾಗಬೇಕು ಅನ್ನೋದು ಮಾತ್ರ ನಮ್ಮ ಉದ್ದೇಶ. ಅರುಣ್ ಸಿಂಗ್ ಅವರಿಗೆ ಸಲಹೆ ಕೊಡುತ್ತೇವೆ. ಮುಂದಿನದ್ದು ಅವರಿಗೆ ಬಿಟ್ಟಿದ್ದು ಎಂದು ಶಾಸಕರು ತಿಳಿಸಿದ್ದಾರೆ.