ಅತ್ತ ಬಿಜೆಪಿ ಬೆಂಬಲಿಸುವಂತೆ ಅಜ್ಜ ಕರೆ, ಇತ್ತ ಮೊಮ್ಮಗ ಕೆಪಿಸಿಸಿ ಹುದ್ದೆಗೆ ರಾಜೀನಾಮೆ

By Web DeskFirst Published Feb 10, 2019, 10:01 PM IST
Highlights

ನಿನ್ನೆಯಷ್ಟೇ ಮಾಜಿ ಸಿಎಂ ಎಸ್.ಎಂ ಕೃಷ್ಣ ತಮ್ಮ ಅಭಿಮಾನಿಗಳಿಗೆ ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿದ್ದ ಬೆನ್ನಲ್ಲೇ ಮೊಮ್ಮಗ ಕೆಪಿಸಿಸಿ ವೈದ್ಯರ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ  ನೀಡಿದ್ದಾರೆ.

ಬೆಂಗಳೂರು, [ಫೆ.10]: ಮಜಿ ಸಿಎಂ ಎಸ್.ಎಂ. ಕೃಷ್ಣ ಅವರ ಮೊಮ್ಮಗ ಡಾ. ನಿರಂತರ ಗಣೇಶ್ ಅವರು ಕೆಪಿಸಿಸಿ ವೈದ್ಯರ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ  ನೀಡಿದ್ದಾರೆ. 

ಕೆಪಿಸಿಸಿ ವೈದ್ಯರ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದು, ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ. 

ಕೃಷ್ಣ ಮೊಮ್ಮಗ ಇಂದು ಕಾಂಗ್ರೆಸ್'ಗೆ: ಅಜ್ಜನ ಕುರಿತಾಗಿ ಮೊಮ್ಮಗ ಹೇಳಿದ್ದೇನು?

ಎಸ್‌.ಎಂ. ಕೃಷ್ಣ ಅವರ ಸಹೋದರಿ ಸುನೀತಾ ಅವರ ಪುತ್ರಿಯ ಮಗ ನಿರಂತರ ಗಣೇಶ್‌ ಮೂಲತಃ ವೈದ್ಯರು. ಎಂ.ಎಸ್‌. ರಾಮಯ್ಯ ಆಸ್ಪತ್ರೆಯಲ್ಲಿ ಆರ್ಥೊ ಸರ್ಜನ್‌ ಆಗಿ ಸೇವೆ ಸಲ್ಲಿಸುತ್ತಿದ್ದ ನಿರಂತರ ಗಣೇಶ್‌ ಕಳೆದ ಎರಡು ವರ್ಷಗಳಿಂದ ಕಡೂರು ಕ್ಷೇತ್ರದ ರಾಜಕೀಯ ಚಟುವಟಿಕೆಯಲ್ಲಿ ಕ್ರಿಯಾಶೀಲರಾಗಿದ್ದಾರೆ.

ಅಷ್ಟೇ ಅಲ್ಲದೇ ನಿರಂತರ ಗಣೇಶ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಡೂರು ವಿಧಾನಸಭಾ ಕ್ಷೇತ್ರದ ಆಕ್ಷಾಂಕಿಯಾಗಿದ್ದರು. ಕ್ಷೇತ್ರದಲ್ಲಿ ಹಲವಾರು ವೈದ್ಯಕೀಯ ಕ್ಯಾಂಪ್, ರೈತರಿಗೆ ಉಚಿತವಾಗಿ ಮೇವು ನೀಡಿದ್ದರು. 

ನಿನ್ನೆಯಷ್ಟೇ ಮಾಜಿ ಸಿಎಂ ಎಸ್.ಎಂ ಕೃಷ್ಣ ತಮ್ಮ ಅಭಿಮಾನಿಗಳಿಗೆ ಬಿಜೆಪಿ ಬೆಂಬಲಿಸುವಂತೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ದಿಢೀರ್ ಆಗಿ ನಿರಂತರ ಗಣೇಶ್ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.

click me!