ರೈತರು ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ ಸಚಿವ ಶಿವಾನಂದ ಪಾಟೀಲರೇ ನಿಮಗೆ 10 ಕೋಟಿ ರೂ. ಹಣವನ್ನು ಕೊಡ್ತೀವಿ, ನೇಣು ಹಾಕಿಕೊಳ್ತೀರಾ ಎಂದು ಸವಾಲು ಹಾಕಿದರು.
ವಿಜಯಪುರ (ಸೆ.09): ರೈತರು ಸರ್ಕಾರದಿಂದ ನೀಡುವ ಪರಿಹಾರಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿಕೆ ನೀಡಿದ ಎಪಿಎಂಸಿ ಖಾತೆ ಸಚಿವ ಶಿವಾನಂದ ಪಾಟೀಲರ ವಿರುದ್ಧ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಆಕ್ರೋಶ ವ್ಯಕ್ತಪಡಿಸಿದರು. ನಿಮಗೆ 10 ಕೋಟಿ ರೂ. ಹಣವನ್ನು ಕೊಡ್ತೀನಿ, ನೇಣು ಹಾಕಿಕೊಳ್ತೀರಾ ಎಂದು ಸಚಿವ ಶಿವಾನಂದ ಪಾಟೀಲರಿಗೆ ಸವಾಲು ಹಾಕಿದರು.
ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ರಾಜ್ಯಾದ್ಯಂತ ಬಿಜೆಪಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ನಡೆಸಲಾದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು, ಸಚಿವ ಶಿವಾನಂದ ಪಾಟೀಲರೇ ನೀವು ತಹಶಿಲ್ದಾರ ಕಚೇರಿ ಮುಂದೆ ನೇಣ ಹಾಕಿಕೊಳ್ಳಿ. ಎಪಿಎಂಸಿ ಖಾತೆಯ ಸಚಿವ ಶಿವಾನಂದ ಪಾಟೀಲ ತಹಶಿಲ್ದಾರ ಆಫೀಸ್ ಮುಂದೆ ಉರಲು ಹಾಕಿಕೊಳ್ಳಲಿ. ರೈತರು ಸರ್ಕಾರದ ಪರಿಹಾರಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಳ್ತಿದ್ದಾರೆ ಎಂದು ಹೇಳಿದ ಸಚಿವರೇ ನಿಮಗೆ ನಾವು 10 ಕೋಟಿ ರೂ. ಕೊಡ್ತೇವೆ ನೇಣು ಹಾಕಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ದಸರಾ ಮುನ್ನವೇ ಮಹಿಷ ದಸರಾಗೆ ಸಿದ್ಧತೆ: ಸರ್ಕಾರ ಅನುಮತಿ ನೀಡದಿದ್ದರೂ ಪುಷ್ಪಾರ್ಚನೆಗೆ ತೀರ್ಮಾನ
ರಾಜ್ಯದಲ್ಲಿ ಜವಾಬ್ದಾರಿಯುತ ಸಚಿವ ಸ್ಥಾನದಲ್ಲಿರುವ ನೀವು ಇದೇ ರೀತಿ ಮಾತಾಡ್ತಾ ಇದ್ದರೇ ಜನ ಚಪ್ಪಲಿಯಿಂದ ಹೊಡಿತಾರೆ ಎಂದು ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಆಕ್ರೋಶ ವ್ಯಕ್ತಪಡಿಸಿದರು. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೆ ಕೊಡಬೇಡಿ. ನೀವು ಬಸವನ ಬಾಗೇವಾಡಿ ತಹಶಿಲ್ದಾರರ ಕಚೇರಿ ಮುಂದೆ ಆತ್ಮಹತ್ಯೆ ಮಾಡಿಕೊಳ್ಳಿ ರೈತರು ಹಾಗೂ ನಾವೆಲ್ಲರೂ ಸೇರಿ ನಿಮಗೆ 10 ಕೋಟಿ ರೂ. ಪರಿಹಾರ ಕೊಡುತ್ತೇವೆ ಎಂದು ಕಿಡಿಕಾರಿದರು.
ಚಾಮರಾಜನಗರ ರೈತರಿಂದ 50 ಕೋಟಿ ರೂ. ಆಫರ್:
ಇನ್ನು ಪರಿಹಾರದ ಆಸೆಗೆ ರೈತರು ಆತ್ಮಹತ್ಯೆ ಮಾಡಿಕೊಳ್ತಾರೆ ಎಂಬ ಸಕ್ಕರೆ ಸಚಿವ ಶಿವಾನಂದ ಪಾಟೀಲರ ಹೇಳಿಕೆ ಖಂಡಿಸಿ ಕಬ್ಬು ಬೆಳೆಗಾರರು ಗುರುವಾರ ಚಾಮರಾಜನಗರದಲ್ಲಿ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಓರ್ವ ಅವಿವೇಕಿ, ನಾವು ಅವರಿಗೆ ಆಫರ್ ಕೊಡುತ್ತಿದ್ದೇವೆ. 50 ಕೋಟಿ ರೂ. ಕೊಡ್ತೀವಿ ಆತ್ಮಹತ್ಯೆ ಮಾಡಿಕೊಳ್ಳಿ ಎಂದು ಹೋರಾಟಗಾರರು ಕಿಡಿಕಾರಿದರು. ಸಕ್ಕರೆ ಸಚಿವನಿಗೆ ತಿರುಗೇಟು ನೀಡಿದರಲ್ಲದೆ, ರಾಜ್ಯದಲ್ಲಿ 950 ಕೋಟಿ ರೂ. ಕಬ್ಬಿನ ಬಾಕಿ ಬಿಲ್ ಕೊಡಬೇಕಿದೆ ಅದನ್ನ ಕೊಡೋ ಯೋಗ್ಯತೆ ಅವನಿಗಿಲ್ಲ, ನಾವು 50 ಕೋಟಿ ರೂ. ಕೊಡ್ತೀವಿ ಆತ್ಮಹತ್ಯೆ ಮಾಡಿಕೋಳ್ತಾರಾ? ಎಂದು ಪ್ರಶ್ನಿಸಿದರು.
ಸಚಿವ ಪಾಟೀಲ್ ಓರ್ವ ಅವಿವೇಕಿ, 50 ಕೋಟಿ ಆಫರ್ ಕೊಡ್ತೇವೆ, ಆತ್ಮಹತ್ಯೆ ಮಾಡಿಕೊಳ್ಳಿ: ರೈತರ ಆಕ್ರೋಶ
ಎಲ್ಲ ರೈತರು ಭಿಕ್ಷೆ ಬೇಡಿ 50 ಕೋಟಿ ಕೊಡ್ತೀವಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ ಎಂದು ಪ್ರತಿಭಟನಾಕಾರರು ಏಕವಚನದಲ್ಲೇ ಹರಿಹಾಯ್ದರು.ಇದುವರೆಗೆ ಒಬ್ಬ ಸಚಿವ, ಕಬ್ಬಿನ ಕಾರ್ಖಾನೆ ಮಾಲೀಕ ಆತ್ಮಹತ್ಯೆ ಮಾಡಿಕೊಂಡಿಲ್ಲ, ವರ್ಷ ವರ್ಷ ನಿಮ್ಮ ಆದಾಯ ದ್ವಿಗುಣ ಆಗುತ್ತಿದೆ, ಆದರೆ, ರೈತರ ಆದಾಯ ದ್ವಿಗುಣ ಆಗುತ್ತಾ..? ಎಂದು ಕಿಡಿಕಾರಿದರು.