ಒಂದೊಂದು ಮತವೂ ಅಮೂಲ್ಯ, ಉಪಚುನಾವಣೆ ಸಂದರ್ಭ ಎಲೆಕ್ಷನ್ ಬಹಿಷ್ಕಾರ!

By Suvarna NewsFirst Published Oct 26, 2020, 5:23 PM IST
Highlights

ಜನಪ್ರತಿನಿಧಿಗಳು, ಅಧಿಕಾರಿಗಳ ಕಾರ್ಯವೈಖರಿಯಿಂದ ಬೇಸತ್ತು ಚುನಾವಣೆ ಬಹಿಷ್ಕಾರ/ ಸುಮಾರು 1200 ಮತದಾರರು ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ತೀರ್ಮಾನ/  ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಾರಾಯಣ ಗುರು ನಗರದ ನಿವಾಸಿಗಳಿಂದ ನಿರ್ಧಾರ/ ತಮ್ಮ ಬೇಡಿಕೆ ಈಡೇರೋವರೆಗೆ ಯಾರಿಗೂ ಮತದಾನ ಮಾಡಲ್ಲ ಎಂಬ ದೃಢ ನಿರ್ಧಾರ/ ಮುಂಬರುವ ಪದವೀಧರರ ಚುನಾವಣೆಯನ್ನೂ ಬಹಿಷ್ಕರಿಸಿದ ನಿವಾಸಿಗಳು

ಶಿರಸಿ(ಅ. 26)  ಜನಪ್ರತಿನಿಧಿಗಳು, ಅಧಿಕಾರಿಗಳ ಕಾರ್ಯವೈಖರಿಯಿಂದ ಬೇಸತ್ತು ಚುನಾವಣೆ ಬಹಿಷ್ಕಾರಕ್ಕೆ ನಿವಾಸಿಗಳು ನಿರ್ಧಾರ ಮಾಡಿದ್ದಾರೆ. ಸುಮಾರು 1200 ಮತದಾರರು ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನಾರಾಯಣ ಗುರು ನಗರದ ನಿವಾಸಿಗಳು  ತಮ್ಮ ಬೇಡಿಕೆ ಈಡೇರೋವರೆಗೆ ಯಾರಿಗೂ ಮತದಾನ ಮಾಡಲ್ಲ ಎಂಬ ದೃಢ ನಿರ್ಧಾರ ಮಾಖಡಿದ್ದಾರೆ.

ಆರ್ ಆರ್ ನಗರ ರಣ ಕಣ; ದೂರು ಕೊಟ್ಟರೆ ಮತ್ತೆ ಪ್ರತಿ ದೂರು

ಮುಂಬರುವ ಪದವೀಧರರ ಚುನಾವಣೆಯನ್ನೂ ಬಹಿಷ್ಕರಿಸಿದ್ದಾರೆ ಶಿರಸಿಯ ಇಸಳೂರು ಗ್ರಾಮದ ನಾರಾಯಣ ಗುರು ನಗರದಲ್ಲಿ 497 ಪ್ಲಾಟ್ ಗಳಿದ್ದು, ಅವುಗಳಿನ್ನೂ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿ ಇರದ ಕಾರಣ ಅರಣ್ಯ ಇಲಾಖೆ ಅವರ ಎಲ್ಲಾ ಹಕ್ಕುಗಳಿಗೆ ನಿರ್ಭಂಧ ಹೇರಿದೆ. ಇದರಿಂದಾಗಿ ಕಂದಾಯ ಇಲಾಖೆ, ಬ್ಯಾಂಕ್, ಪಂಚಾಯತ್‌ಗಳಿಂದ ಯಾವ ಅನುಕೂಲವೂ ಸಿಗದೆ ತೊಂದರೆಯಾಗುತ್ತಿದೆ.

ಸರ್ಕಾರ ಆರ್.ಟಿ.ಸಿ., ಮನೆ ಕಟ್ಟಲು 11 ಬಿ ಸೇರಿದಂತೆ ಎಲ್ಲಾ ಸವಲತ್ತು ನೀಡಿದೆ. ಆದರೆ, 2018ರಿಂದ ಅರಣ್ಯ ಇಲಾಖೆ ಈ ಜಾಗ ಇನ್ನೂ ಡೀಮ್ಡ್ ಫಾರೆಸ್ಟ್ ಆಗದ ಕಾರಣ ಸವಲತ್ತು ಜನರ ಕೈ ಸೇರುತ್ತಿಲ್ಲ ಇದರಿಂದ ಬ್ಯಾಂಕ್ ನಲ್ಲಿ ಸಾಲ ಪಡೆಯಲು, ಹೊಸದಾಗಿ ಮನೆ ನಿರ್ಮಿಸಲು, ಮಾರಾಟ ಮಾಡಲು ಅನುಮತಿ ಸಿಗುತ್ತಿಲ್ಲ ಈ ಎಲ್ಲ ಸಮಸ್ಯೆಗಳ ಕಾರಣಕ್ಕೆ ಜನರು ಮತದಾನ ಬಹಿಷ್ಕಾರ ನಿರ್ಧಾರ ಮಾಡಿದ್ದಾರೆ.

click me!