ಸಿಂದಗಿ(ನ.02): ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ (BY Election) ಮತ ಎಣಿಕೆ ಇಂದು ನಡೆದಿದ್ದು, ರಾಜಕೀಯ ಪಕ್ಷಗಳ ನಾಯಕರನ್ನು ತುದಿಗಾಲಿನ ಮೇಲೆ ನಿಲ್ಲುವಂತೆ ಮಾಡಿತ್ತು. ಅಂತೂ ಭಾರೀ ಕುತೂಹಲದ ಮಧ್ಯೆ ಕಮಲ ಅರಳಿದ್ದು ಈಗ ಗೆಲುವಿಗೆ ಯಾವ್ಯಾವ ಅಂಶಗಳು ಕಾರಣವಾದವು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಬೈಎಲೆಕ್ಷನ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸಿಂದಗಿಯಲ್ಲಿ ಕಾಂಗ್ರೆಸ್ ಸೋಲಲು ಕಾರಣಗಳೇನೇನು ?
ಹಾನಗಲ್, ಸಿಂದಗಿ ಬೈ ಎಲೆಕ್ಷನ್ ರಿಸಲ್ಟ್: ಅಭ್ಯರ್ಥಿಗಳಿಗೆ ಖಡಕ್ ಸೂಚನೆ ಕೊಟ್ಟ ಚುನಾವಣಾ ಆಯೋಗ
ಸಿಂದಗಿ ಉಪಚುನಾವಣೆ ಫಲಿತಾಂಶ
ಅಂತಿಯ ಫಲಿತಾಂಶ
ಕಾಂಗ್ರೆಸ್ - 62680
ಬಿಜೆಪಿ - 93865
ಜೆಡಿಎಸ್ - 4353
ಬಿಜೆಪಿ 31185 ಮಗತಗಳ ಅಂತರದಲ್ಲಿ ಗೆಲುವು
ನಿರೀಕ್ಷೆ ರೀತಿಯಲ್ಲಿ ಮತದಾರರ ಮನೆ ಮನೆ ತಲುಪುವಲ್ಲಿ ಕಾಂಗ್ರೆಸ್ ಕಾರ್ಯಕರ್ತರ ತಂಡ ಫೇಲ್ ಆಗಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಪ್ರಚಾರ ಮಾಡಿದ ಬಳಿಕ ಕ್ಷೇತ್ರದಲ್ಲಿ ರಾಜಕೀಯ ಚಿತ್ರಣ ಬದಲಾಗಿದ್ದು ಕಂಬಳಿ ರಾಜಕೀಯದ ಹೇಳಿಕೆ ಮತಗಳಿಕೆಯಲ್ಲಿ ನಿರೀಕ್ಷಿತ ಮಟ್ಟದ ಪ್ರಭಾವ ಬೀರದಿರುವುದು ಸೋಲಿಗೆ ಕಾರಣವಾಗಿದೆ. ಸಿಎಂ ತವರು ಕ್ಷೇತ್ರ ಹಾನಗಲ್ ನಲ್ಲಿ ಬಿಜೆಪಿಗೆ ಹಿನ್ನೆಡೆಯಾಗಿದ್ದು ಇನ್ನು 9 ಸುತ್ತಿನ ಮತದಾನ ಎಣಿಕೆ ಬಾಕಿ ಇದೆ.
ಉಪಚುನಾವಣೆ ನಡೆದಿದ್ದೇಕೆ?
ಸಿಂದಗಿಯಲ್ಲಿ ಜೆಡಿಎಸ್(JDS) ಶಾಸಕರಾಗಿದ್ದ ಎಂ.ಸಿ. ಮನಗೂಳಿ ಅವರು ನಿಧನರಾಗಿದ್ದರು. ಹಾಗಾಗಿ ಸಿಂದಗಿಯಲ್ಲಿ ಉಪಚುನಾವಣೆ ನಡೆದಿದೆ. ವಿಜಯಪುರ ಸಿಂದಗಿ ವಿಧಾನಸಭಾ ಕ್ಷೇತ್ರ ಹಿರಿಯ ಶಾಸಕ, ಜೆಡಿಎಸ್ ನಾಯಕರಾಗಿದ್ದ ಎಂ ಸಿ ಮನಗೂಳಿ(85) ಜನವರಿ 12ರಂದು ಕೊನೆಯುಸಿರೆಳೆದಿದ್ದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮನಗೂಳಿಯನ್ನು ಜನವರಿ 9ರಂದು ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ರಾತ್ರಿ 1 ಗಂಟೆಗೆ ನಿಧನರಾಗಿದ್ದರು.
ಸಿಂದಗಿ ಕ್ಷೇತ್ರದಲ್ಲಿ ವಾಸ್ತವ್ಯ ಹೂಡಿದರೂ ಸಿಗದ ಫಲ:
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಉಪ ಚುನಾವಣೆ ಹಿನ್ನೆಲೆ ವಾಸ್ತವ್ಯ ಹೂಡಿದರೂ ಮತದಾರ ಕೈಹಿಡಿದಿಲ್ಲ. ಕ್ಷೇತ್ರವನ್ನ ಉಳಿಸಿಕೊಳ್ಳಲು ಹತ್ತಕ್ಕೂ ಹೆಚ್ಚು ದಿನಗಳ ಕಾಲ ವಾಸ್ತವ್ಯ ಹೂಡಿದ್ದ ಜೆಡಿಎಸ್ ವರಿಷ್ಠರು ಸುದ್ದಿಯಾಗಿದ್ದರು.
ನೀರಾವರಿ ಸಚಿವರಾಗಿದ್ದಾಗ ಸಿಂದಗಿ ತಾಲ್ಲೂಕಿನ ಸುತ್ತಮುತ್ತಲ ಭಾಗಕ್ಕೆ ನೀರು ಹರಿಸಿದ್ದ ದೇವೇಗೌಡ ಇದನ್ನೇ ಚುನಾವಣಾ ಪ್ರಚಾರದ ವೇಳೆ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಂಡಿದ್ದರು. ಜೊತೆಗೆ ಮನಗೂಳಿ ಕುಟುಂಬದ ಜೊತೆಗಿನ ಒಡನಾಟವನ್ನೂ ಪ್ರಚಾರ ಸಂದರ್ಭ ಮೆಲುಕು ಹಾಕಿದ್ದರು.
ಎಂ.ಸಿ ಮನಗುಳಿ ಸಾವಿನ ಅನುಕಂಪ ವರ್ಕೌಟ್ ಆಗಬಹುದೆಂಬ ಲೆಕ್ಕಾಚಾರದಲ್ಲಿ ಮತಯಾಚನೆ ಮಾಡಿದರೂ ಮತದಾರ ಜೆಡಿಎಸ್ ಕೈಹಿಡಿದಿಲ್ಲ. ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿಯನ್ನ ಕಳೆದುಕೊಂಡಿದ್ದು ಕೇವಲ 4353 ಮತಗಳನ್ನ ಮಾತ್ರ ಪಡೆದಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಸಮಬಲದ ಪೈಪೋಟಿಯನ್ನ ಕೊಡಲಾಗದೆ ಜೆಡಿಎಸ್ ಹೀನಾಯ ಸೋಲುಕಂಡಿದೆ.
ಸಿಂದಗಿ ಉಪಚುನಾವಣೆಯಲ್ಲಿ ಉತ್ತಮ ಅಂತರದಲ್ಲಿ ವಿಜಯ ಸಾಧಿಸಿದ ಪಕ್ಷದ ಅಭ್ಯರ್ಥಿ ರಮೇಶ್ ಭೂಸನೂರ್ ಅವರಿಗೆ ಅಭಿನಂದನೆಗಳು. ಪ್ರಧಾನಿ ಶ್ರೀ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ರಾಜ್ಯ ಬಿಜೆಪಿ ಸರ್ಕಾರದ ಜನಪರ ಯೋಜನೆಗಳನ್ನು ಜನ ಮೆಚ್ಚಿದ್ದಾರೆ ಎನ್ನುವುದಕ್ಕೆ ಈ ಕ್ಷೇತ್ರದಲ್ಲಿ ಪಕ್ಷದ ಗೆಲುವು ಸಂಕೇತವಾಗಿದೆ.
— B.S. Yediyurappa (@BSYBJP)ಸಿಂದಗಿ (Sindagi) ಮತ್ತು ಹಾನಗಲ್ ಉಪಚುನಾವಣೆ (Hanagal By Election) ಮತದಾನ ಶನಿವಾರ ನಡೆದಿತ್ತು. ಮತದಾರ ತನ್ನ ನಿರ್ಣಯವನ್ನು ಮತಯಂತ್ರಗಳಲ್ಲಿ ಭದ್ರಪಡಿಸಿದ ನಂತರ ಗೆಲುವಿನ ಕುರಿತ ಕುತೂಹಲ ಹೆಚ್ಚಾಗಿತ್ತು. ಅ.30ರಂದು ನಡೆದ ಉಪಚುನಾವಣೆಯ ಫಲಿತಾಂಶ (By Election Result) ನ.2ರಂದು ಪ್ರಕಟವಾಗಿದೆ.
ಸಿಂದಗಿ (Sindagi) ಉಪ ಚುನಾವಣೆ (By election) ಮತದಾನ ಪ್ರಕ್ರಿಯೆ ಶನಿವಾರ ತಡರಾತ್ರಿ ಪೂರ್ಣಗೊಂಡಿತ್ತು. ಮತಯಂತ್ರಗಳನ್ನು ಬಿಗಿ ಭದ್ರತೆಯೊಂದಿಗೆ ವಿಜಯಪುರ (Vijayapura) ನಗರದಲ್ಲಿರುವ ಸೈನಿಕ ಶಾಲೆಯ ಒಡೆಯರ್ ಹೌಸ್‌ನ ಸ್ಟ್ರಾಂಗ್ ರೂಂನಲ್ಲಿ (Strong Room) ಇಡಲಾಗಿತ್ತು. ಅದೇರೀತಿ ಹಾನಗಲ್ ಕ್ಷೇತ್ರದ ಮತಯಂತ್ರಗಳು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ (Govt Engineering College) ಇರಿಸಲಾಗಿತ್ತು. ಎರಡೂ ಕಡೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿತ್ತು.