ಹಾನಗಲ್, ಸಿಂದಗಿ ಬೈ ಎಲೆಕ್ಷನ್ ರಿಸಲ್ಟ್: ಅಭ್ಯರ್ಥಿಗಳಿಗೆ ಖಡಕ್ ಸೂಚನೆ ಕೊಟ್ಟ ಚುನಾವಣಾ ಆಯೋಗ

By Suvarna News  |  First Published Nov 1, 2021, 8:14 PM IST

* ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಉಪ ಚುನಾವಣೆ ಫಲಿತಾಂಶ
* ನಾಳೆ(ನವೆಂಬರ್ 02) ಪ್ರಕಟವಾಗಲಿರುವ ಹಾನಗಲ್ ಮತ್ತು ಸಿಂದಗಿ ಬೈ ಎಲೆಕ್ಷನ್ ರಿಸಲ್ಟ್
* ಚುನಾವಣಾ ಆಯೋಗದಿಂದ ಕೆಲ ಮಾರ್ಗಸೂಚಿ ಪ್ರಕಟ
 


ಬೆಂಗಳೂರು, (ನ.01): ತೀವ್ರ ಕುತೂಹಲ ಮೂಡಿಸಿರುವ ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಉಪ ಚುನಾವಣೆ ಫಲಿತಾಂಶ(By Election Result)  ನಾಳೆ(ನವೆಂಬರ್ 02) ಪ್ರಕಟವಾಗಲಿದೆ.

ಉಪ ಚುನಾವಣೆ (By Election) ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಆರಂಭದಲ್ಲಿ ಅಂಚೆ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಮಧ್ಯಾಹ್ನದೊಳಗೆ ಫಲಿತಾಂಶ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ.

Tap to resize

Latest Videos

ಉಪಚುನಾವಣೆ: ಯಾರಿಗೆ ದೀಪಾವಳಿ ಸಿಹಿ?

ಮತ ಎಣಿಕೆಯ ಬಳಿಕ ಸಂಭ್ರಮಾಚರಣೆ, ಮೆರವಣಿಗೆ ನಡೆಸುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ ಎಂದು ಭಾರತೀಯ ಚುನಾವಣಾ ಆಯೋಗ (Election Commission Of India) ಕೆಲ ಮಾರ್ಗಸೂಚಿಗಳನ್ನು ವಿಧಿಸಿದೆ.

 ವಿಜೇತರಾದ ಅಭ್ಯರ್ಥಿ ಹಾಗೂ ಬೆಂಬಲಿಗರು ವಿಜಯೋತ್ಸವವನ್ನು ಆಚರಿಸಲು ಅವಕಾಶ ಇರುವುದಿಲ್ಲ. ವಿಜೇತ ಅಭ್ಯರ್ಥಿ ಚುನಾವಣಾ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಲೂ ಷರತ್ತು‌ ವಿಧಿಸಲಾಗಿದೆ. ವಿಜೇತ ಅಭ್ಯರ್ಥಿಯೊಂದಿಗೆ ಪ್ರಮಾಣಪತ್ರ ಪಡೆಯಲು ಇಬ್ಬರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಬಗ್ಗೆ ಭಾರತ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. 

ರಾಜ್ಯದ ಆಡಳಿತಾರೂಢ ಬಿಜೆಪಿ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಯಾರಿಗೆ ವಿಜಯಮಾಲೆ ಒಲಿಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ

ಅಕ್ಟೋಬರ್ 30 ರಂದು ಹಾವೇರಿ ಜಿಲ್ಲೆಯ ಹಾನಗಲ್ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ವಿಧಾನಸಭಾ ಕ್ಷೇತ್ರಳಿಗೆ ಉಪಚುನಾವಣೆ ನಡೆದಿತ್ತು.  ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮೂರು ಪಕ್ಷಗಳು ಗೆಲ್ಲುವ ಪಣತೊಟ್ಟು ಭರ್ಜರಿ ಪ್ರಚಾರ ಮಾಡಿವೆ. ಅದರಲ್ಲೂ ಮೂರು ಪಕ್ಷಗಳ ನಾಯಕರ ಆರೋಪ-ಪ್ರತ್ಯಾರೋಗಳ ಸುರಿಮಳೆ ಸುರಿಸಿದ್ದರು. ಸಾಲದಕ್ಕೇ ವೈಯಕ್ತಿಕ ಟೀಕೆಗಳಿಗೂ ಇಳಿದಿದ್ದರು.

ಸಿಂದಗಿ
ಜೆಡಿಎಸ್‌ನಿಂದ ನಾಜಿಯಾ ಶಕೀಲ ಅಂಗಡಿ, ಕಾಂಗ್ರೆಸ್‌-ಅಶೋಕ್ ಮನಗೂಳಿ, ಬಿಜೆಪಿ- ರಮೇಶ್ ಭೂಸನೂರ ಕಣದಲ್ಲಿದ್ದು, ಯಾರಿಗೆ ಗೆಲುವು ಸಿಗಲಿದೆ ಎನ್ನುವುದು ಕಾದುನೋಡಬೇಕಿದೆ.

ಹಾವೇರಿ
ಜೆಡಿಎಸ್‌ನಿಂದ ನಿಯಾಜ್ ಶೇಖ್, ಕಾಂಗ್ರೆಸ್‌-ಶ್ರೀನಿವಾಸ್ ಮಾನೆ ಹಾಗೂ ಬಿಜೆಪಿಯಿಂದ ಶಿವರಾಜ್ ಸಜ್ಜನ್ ಕಣಕ್ಕಿಳಿದಿದ್ದು, ಮಾನೆ ಹಾಗೂ ಸಜ್ಜನ್ ನಡುವೆ ತೀವ್ರ ಪೈಪೋಟಿ ಇದೆ. ಅಂತಿಮವಾಗಿ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ಬಿಜೆಪಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಎಸ್ ಯಡಿಯೂರಪ್ಪ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಸಚಿವರೆಲ್ಲರೂ ಸೇರಿದಂತೆ ಅನೇಕ ಬಿಜೆಪಿ ನಾಯಕರು ಪ್ರಚಾರ ಕಣದಲ್ಲಿ ಪಾಲ್ಗೊಂಡಿದ್ದರು. ಇನ್ನು ಕಾಂಗ್ರೆಸ್‌ನಿಂದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ನಾಯಕರು ಅಖಾಡಕ್ಕಿಳಿದಿದ್ದರು.  ಜೆಡಿಎಸ್ ಪರವಾಗಿ ಎಚ್​.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡ ಸೇರಿದಂತೆ ಬೆರಳೆಣಿಕೆಯ ಶಾಸಕರು ಮಾತ್ರ ಪ್ರಚಾರ ಮಾಡಿದ್ದರು.

click me!