* ಕಾಫಿನಾಡಿನಲ್ಲಿ ಕೆ.ಎಸ್ ಈಶ್ವರಪ್ಪ ವಿರುದ್ಧ ಕಾಂಗ್ರೇಸ್ ಕಹಳೆ
* ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ
* ಈಶ್ವರಪ್ಪ ಬಂಧನಕ್ಕೆ ಆಗ್ರಹ, ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಏ.16): ಕಾಫಿನಾಡಿನಲ್ಲಿ ಕೆ ಎಸ್ ಈಶ್ವರಪ್ಪ ಬಂಧನ ಸೇರಿದಂತೆ ಬೆಲೆ ಏರಿಕೆ ಖಂಡಿಸಿ ಕಾಂಗ್ರೇಸ್ ಪ್ರತಿಭಟನಾ ರ್ಯಾಳಿ ನಡೆಸಿತು. ಈಶ್ವರಪ್ಪ ಬಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಬೃಹತ್ ಪ್ರತಿಭಟನೆ ನಡೆಸಿತು ಹನುಮಂತಪ್ಪ ವೃತ್ತದಿಂದ ಆಜಾದ್ ಮೈದಾನದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಬೆಲ ಏರಿಕೆ ಖಂಡಿಸಿ ಖಾಲಿ ಸಿಲಿಂಡರ್ ನ ಅಣುಕುಯಾತ್ರೆ
ಪ್ರತಿಭಟನೆಯಲ್ಲಿ ಪಕ್ಷದ ಬಾವುಟ ಹಿಡಿದಿದ್ದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು .ಬೆಲೆ ಏರಿಕೆಯನ್ನು ಖಂಡಿಸಿ ಖಾಲಿ ಸಿಲಿಂಡರ್ ನ ಅಣಕು ಯಾತ್ರೆ ನಡೆಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಜನವಿರೋಧಿ ಸರಕಾರವನ್ನು ಕಿತ್ತೊಗೆಯುವಂತೆ ಆಗ್ರಹಿಸಿದರು.ಕೇಂದ್ರ , ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನು ಪ್ರತಿಭಟನಾನಿತರು ಕೂಗಿದರು. ಎಮ್ ಜಿ ರಸ್ತೆ ಸಾಗಿ ಬಂದ ಪ್ರತಿಭಟನಾ ಮೆರವಣಿಗೆಯೂ ಅಜಾದ್ ಪಾರ್ಕ್ ವೃತ್ತದಲ್ಲಿ ಅಂತ್ಯವಾಯಿತು.
undefined
ಕಮಿಷನ್ ದಂಧೆಗೆ ಸಂತೋಷ್ ಪಾಟೀಲ್ ಬಲಿ, ಇತರ ಗುತ್ತಿಗೆದಾರರ ಕಥೆಯೇನು ನೋಡಿ.!.
ಮಳೆ ನಡುವೆಯೂ ಸಿದ್ದರಾಮಯ್ಯ ಭಾಷಣ
ಪ್ರತಿಭಟನಾ ಮೆರವಣಿಗೆ ನಂತರ ಅಜಾದ್ ಪಾರ್ಕ್ ವೃತ್ತದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಿತು.ಸಮಾವೇಶಕ್ಕೆ ಕೆಲಕಾಲ ಮಳೆ ಅಡ್ಡಿಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಿದ್ದಂತೆ ಮಳೆ ಶುರುವಾಯಿತು. ಮಳೆಯ ನಡುವೆಯೂ ಭಾಷಣ ಮುಂದುವರೆಸಿದ್ದಾ ಸಿದ್ದುಗೆ ಕಾರ್ಯಕರ್ತಕರು ಕೊಡೆ ಹಿಡಿದರು. ಮುಂಭಾಗದಲ್ಲಿ ಕಾರ್ಯಕರ್ತರು ತಲೆ ಮೇಲೆ ಚೇರ್ ಹೊತ್ತು ಭಾಷಣ ಕೇಳಿದ್ರು.ಮಳೆ ನಿಂತ ಕೊಡಲೇ ಚೇರ್ ಮೇಲೆ ಹತ್ತಿದ್ದ ಕಾರ್ಯಕರ್ತರನ್ನು ಸಿದ್ದರಾಮಯ್ಯ ಗದರಿಸಿದ್ದರು. ಏಯ್.. ಯಾರೋ ನೀನು, ಇಳಿಯೋ ಕೆಳಗೆ ಒಂದ್ಸರಿ ಹೇಳಿದ್ರೆ ಗೊತ್ತಾಗಲ್ವಾ.?ಲೇ ಅವನ್ಯಾರೋ..? ಫೋಟೋ ತೆಗೆಯೋಕೆ ಇಲ್ಲಿಗೆ ಬಂದಿದ್ದೀರಾ.? ನಾನು ಪೋಟೋ ತೆಗೆಯಿಸಿಕೊಳ್ಳೋಕೆ ಬಂದಿಲ್ಲಲೇ ಅವನ್ಯಾವನೋ ಫೋಟೋಗ್ರಾಫರ್, ಕೆಳಕ್ಕೆ ಇಳಿಯೋ..? ಎಂದು ಗದರಿಸಿದ ಬಳಿಕ ಕೈ ಕಾರ್ಯಕರ್ತರು ಸುಮ್ಮನಾದ್ದರು.
ಸಿದ್ದರಾಮಯ್ಯ ಜೊತೆಗೆ ಸೆಲ್ಪಿಗೆ ಯುವತಿ ಪಟ್ಟು : ಪೊಲೀಸ್ರು ತಡೆ ಆಕ್ರೋಶ
ಸಿದ್ದರಾಮಯ್ಯ ಜೊತೆಗೆ ಸೆಲ್ಪಿ ತೆಗೆದುಕೊಳ್ಳಬೇಕೆಂದು ಯುವತಿಯೊಬ್ಬಳು ಸಿದ್ದರಾಮಯ್ಯ ಭಾಷಣ ಮಾಡುವಾಗ ವೇದಿಕೆ ಬಳಿಗೆ ಬಂದರು. ಸ್ಥಳದಲ್ಲಿ ಇದ್ದ ಪೊಲೀಸ್ರು ನಾನು ನಿಮ್ಮ ಅಭಿಮಾನಿ, ನಿಮ್ಮ ಜತೆ ಸೆಲ್ಫಿ ತೆಗೆಸಿಕೊಳ್ಳಬೇಕು’ ಎಂದು ಬೇಡಿಕೆ ಇಟ್ಟರು. ಭಾಷಣ ಮುಗಿಯವವರೆಗೂ ಅಲ್ಲಿಯೇ ಕಾದು ನಿಂತಿದ್ದರು. ಪೊಲೀಸರು ಯವತಿಯ ಬ್ಯಾಗು ಎಲ್ಲವನ್ನು ಪರಿಶೀಲಿಸಿದರು.ಫೋಟೊ ತೆಗೆಸಿಕೊಳ್ಳಲು ಅವಕಾಶ ಸಿಗಲಿಲ್ಲ. ಆಗ ಯುವತಿ ಪೊಲೀಸರ ಮೇಲೆ ಕೋಪ ಪ್ರದರ್ಶಿಸಿದರು.ಆಕ್ರೋಶವನ್ನು ಹೊರಹಾಕಿದರು.
ಸಿಎಂ ಬೊಮ್ಮಾಯಿ ಹೇಳಿಕೆಗೆ ಸಿದ್ದರಾಮಯ್ಯ ಟಾಂಗ್
ಕಾಂಗ್ರೆಸ್ ಹಗರಣವನ್ನು ಜನರ ಮುಂದೆ ಇಡಬೇಕಾಗುತ್ತದೆ ಎಂದಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾಯಿತು ಅಧಿಕಾರದಲ್ಲಿ ಅವರೇ ಇದ್ದಾರೆ, ಏನು ಬಯಲು ಮಾಡಿದ್ರು. ರಾಜ್ಯ- ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಲೇವಡಿ ಮಾಡಿದ್ರು.
ಬಿಜೆಪಿಯವರಿಗೆ ಸಮರ್ಥನೆ ಮಾಡಿಕೊಳ್ಳಕ್ಕೆ ಯಾವುದೇ ವಿಚಾರಗಳಿಲ್ಲ ಎಂದು ಕಿಡಿಕಾರಿದ್ರು. ಈಶ್ವರಪ್ಪ 40 ಪರ್ಸೆಂಟ್ ಡಿಮ್ಯಾಂಡ್ ಮಾಡದಿದ್ದರೆ ರಾಜೀನಾಮೆ ಯಾಕೆ ಕೊಡುತ್ತಿದ್ದರು ಪ್ರಶ್ನೆಸಿ ಹೈಕಮಾಂಡ್ ಯಾಕೆ ಈಶ್ವರಪ್ಪನವರ ರಾಜೀನಾಮೆ ಪಡೆಯುತ್ತಿತ್ತು ಎಂದ್ರು. ಶೇ.40 ಕಮಿಷನ್ ಖ್ಯಾತಿ ಪಡೆದಿರುವ ಸರ್ಕಾರ ಜನವಿರೋಧಿಯಾಗಿ ವರ್ತಿಸುತ್ತಿದೆ .ಕೋಮು ಧರ್ಮದ ವಿಷಯವನ್ನು ಮುನ್ನೆಲೆಗೆ ತಂದು ಜನರ ನಡುವೆ ವೈಷಮ್ಯದ ಬೀಜ ಬಿತ್ತುತ್ತಿದೆ ಎಂದು ಟೀಕಿಸಿದರು.
ಕಮಿಷನ್ ಆರೋಪಕ್ಕೆ ಗುರಿಯಾಗಿರುವ ಮಾಜಿ ಸಚಿವ ಈಶ್ವರಪ್ಪನವರನ್ನು ಬಂಧಿಸುವಂತೆ ಒತ್ತಾಯಿಸಿದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನೇ ನನ್ನ ಸಾವಿಗೆ ನೇರ ಕಾರಣವೆಂದು ಡೆತ್ ನೋಟ್ ನಲ್ಲಿ ಸಂತೋಷ್ ಪಾಟೀಲ್ ಹೇಳಿದ್ದಾರೆ.ವಾಟ್ಸಪ್ ಮೂಲಕ ಎಲ್ಲರಿಗೂ ಮೆಸೇಜ್ ಮಾಡಿದ್ದಾರೆ. ಡಿವೈಎಸ್ಪಿ ಗಣಪತಿ-ಸಂತೋಷ್ ಪಾಟೀಲ್ ಪ್ರಕರಣವನ್ನು ಹೋಲಿಕೆ ಮಾಡಲು ಆಗುವುದಿಲ್ಲ.ಅಲ್ಲದೆ ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಜಾರ್ಜ್ ಗೆ ಸಿಬಿಐ ಕ್ಲೀನ್ ಚಿಟ್ ಸಿಕ್ಕಿದೆ.ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿ ಇರೋದಲ್ವೇ.?ಬಿಜೆಪಿಗೆ ಗೊತ್ತಿದ್ದು ಗೊತ್ತಿದ್ದು ಸುಳ್ಳು ಹೇಳುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ,ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಸೇರಿದಂತೆ ಅನೇಕ ಪ್ರಮುಖಮುಖಂಡರು ಪಾಲ್ಗೊಂಡಿದ್ದರು..