
ಸಿಎಂ ಡಿ.ಕೆ. ಶಿವಕುಮಾರಿಗೆ ಹೆಚ್ಚು ಶಾಸಕರ ಬೆಂಬಲ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯನವರ ಹೇಳಿಕೆಯ ಹಿನ್ನೆಲೆ ರಾಜಕೀಯ ಚರ್ಚೆಗೆ ಸಾಕಷ್ಟು ಜೋರಾಗಿದೆ. ಸಿಎಂ ಮತ್ತು ಡಿಸಿಎಂ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬ ಚರ್ಚೆಗಳು ಜೋರಾಗಿ ಆರಂಭವಾಗಿದೆ ಈ ಕುರಿತು ರಾಜ್ಯದ ಹಲವು ನಾಯಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾರು ಏನೇನು ಮಾಡತಾಡಿದ್ರೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಡಿಕೆ ಶಿವಕುಮಾರ್ ಅವರನ್ನು ಸಿಎಂ ತಡೆಯಲು ಸದಾ ಕಸರತ್ತು ನಡೆಯುತ್ತಿದೆ. ಅವರಿಗೆ ಶಾಸಕರ ಬೆಂಬಲವೇ ಇಲ್ಲವೆಂದು ಹೇಳಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ 136 ಶಾಸಕರು ಗೆದ್ದಿದ್ದು, ಅದು ಅವರ ನಾಯಕತ್ವದ ಫಲ. ಇದು ಶಾಲೆಯಲ್ಲಿ ಸುತ್ತು ಹೊಡೆಯುವ ಆಟವಲ್ಲ. ನೇರವಾಗಿ ಮಾತು ಮಾತನಾಡಲಾಗಿದೆ. ಡಿಕೆಶಿ ಇದನ್ನು ಸಹಿಸಿಕೊಂಡರೆ, ಅವರ ವ್ಯಕ್ತಿತ್ವಕ್ಕೂ ಅಪಚಾರವಾಗಿದೆ,” ಎಂದು ಕಿಡಿಕಾರಿದರು.
“ನಾನು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ,” ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. “ಈ ವಿಷಯ ಮುಗಿದದ್ದೇ ಎಂದು ಬಿಟ್ಟುಕೊಡಬೇಕು ಎಂದಿದ್ದಾರೆ. ಸಂಕ್ರಾಂತಿ ಬಂದಂತೆ ಈ ಚರ್ಚೆ ನಡೆಯುತ್ತಲೇ ಇರುತ್ತದೆ. ಸಿಎಂ ಮತ್ತು ರಣದೀಪ್ ಸುರ್ಜೇವಾಲಾ ಸ್ಪಷ್ಟವಾಗಿ ಹೇಳಿದ ಮೇಲೆ ಮತ್ತೆ ಮತ್ತೆ ಏಕೆ ಪ್ರಶ್ನೆ ಕೇಳುತ್ತಾರೆ ಅನ್ನೋದು ಗೊತ್ತಾಗುತ್ತಿಲ್ಲ. ಡಿಕೆಶಿ ಪಕ್ಷವನ್ನು ಕಟ್ಟಿದರು, ಅಧಿಕಾರಕ್ಕೆ ತರಲು ಶ್ರಮಿಸಿದರು. ಪಕ್ಷ ಕಟ್ಟುವುದು ಅಣೆಕಟ್ಟು ಕಟ್ಟಿದಂತೆ — ಕಲ್ಲು, ಮಣ್ಣು, ಜೆಲ್ಲಿ ಸೇರಿಸಿದಂತೆ ಎಲ್ಲರ ಜೊತೆಗೆ. ಡಿಕೆಶಿ ಮುಖ್ಯ ಪಾತ್ರ ವಹಿಸಿದ್ದಾರೆ. ಅವರ ಪಾತ್ರವನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಈಗಾಗಲೇ ಹೈಕಮಾಂಡ್ ತೀರ್ಮಾನಿಸಿದೆ.”
“ಕಾಂಗ್ರೆಸ್‌ನಲ್ಲಿ ಯಾವುದೇ ಜಗಳ ಇಲ್ಲ. ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿಗಳು ವಿಷಯವನ್ನು ಸ್ಪಷ್ಟಪಡಿಸಿದ್ದಾರೆ. ಡಿಕೆಶಿ ಪಕ್ಷದ ಅಧ್ಯಕ್ಷರಾಗಿ, ನಾಯಕತ್ವದಲ್ಲಿ ಮುಂದುವರಿಯುತ್ತಾರೆ. ಅವರು ಆತಂಕದಲ್ಲಿಲ್ಲ, ಪಕ್ಷದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿಯ ಸ್ಥಾನ ಖಾಲಿ ಇಲ್ಲ. ಪದೇ ಪದೇ ಈ ವಿಷಯವನ್ನು ಕೇಳುತ್ತಿರುವುದು ಆಶ್ಚರ್ಯವಾಗಿದೆ. 2028ಕ್ಕೂ ನಾನು ನಾಯಕತ್ವ ಕಾಯುತ್ತಿದ್ದೇನೆ. ರಾಜಕೀಯದಲ್ಲಿ ನಿವೃತ್ತಿ ಇಲ್ಲ. ಇಚ್ಛಾಶಕ್ತಿ ಮುಖ್ಯ. ಹೀಗಾಗಿ ಮುಖ್ಯಮಂತ್ರಿಯಾಗಿ ಮುಂದುವರಿಯಲು ನನಗೆ ಇಚ್ಛಾಶಕ್ತಿ ಇದೆ,” ಎಂದು ಹೇಳಿದರು ಎಂದು ಸಮರ್ಥಿಸಿಕೊಂಡರು.
“ಒಬ್ಬೊಬ್ಬರು ತಮ್ಮ ತಮ್ಮ ನಾಯಕನಿಗೆ ಸಿಎಂ ಆಗಬೇಕೆಂದು ಆಶಿಸುತ್ತಾರೆ. ಇದು ಸಹಜ. ತಮ್ಮ ಅನುಯಾಯಿಗಳು, ಜನಾಂಗ, ಜಿಲ್ಲೆಗೆ ಅನುಗುಣವಾಗಿ ಅವರ ಹಿತಕಾಪಾಡಲು ಇಚ್ಛಿಸುತ್ತಾರೆ. ರಾಜಕೀಯದಲ್ಲಿ ಇದು ಸಾಮಾನ್ಯ. ಹೀಗಾಗಿ, ಅವರು ವ್ಯಕ್ತಪಡಿಸಿದ ಅಭಿಪ್ರಾಯವನ್ನು ತಪ್ಪಾಗಿ ಹೇಳಲು ಸಾಧ್ಯವಿಲ್ಲ,” ಎಂದು ಹೇಳಿದರು.
“ಸಿಎಂ ಬದಲಾವಣೆ ಕುರಿತು ಮಾಧ್ಯಮ ಮುಂದೆ ಮಾತನಾಡಲ್ಲ. ಐದು ವರ್ಷ ಸುಭದ್ರ ಸರ್ಕಾರ ನೀಡುವುದು ನಮ್ಮ ಜವಾಬ್ದಾರಿ. ಪಕ್ಷದಿಂದ ಸರ್ಕಾರ ಬಂದಿದೆ, ಸರ್ಕಾರದಿಂದ ಪಕ್ಷ ಬಂದಿಲ್ಲ. ಅಧಿಕಾರ ಶಾಶ್ವತ ಅಲ್ಲ. ಯಾರಿಗೂ ನೂರು ವರ್ಷ ಅಧಿಕಾರವಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಇರುವವರೆಗೆ ಅವರೇ ಸಿಎಂ. ಬದಲಾವಣೆ ಇಲ್ಲ ಅಂತ ಯಾರು ಹೇಳಲಾರೆ. ಅದು ಐದು ವರ್ಷ ಇರಬಹುದು. ಅಧಿಕಾರ ಬದಲಾವಣೆಯ ಸೂತ್ರ ನಮಗೆ ಗೊತ್ತಿಲ್ಲ. ವರಿಷ್ಠರ ತೀರ್ಮಾನಕ್ಕೂ ನಾವು ಬದ್ಧ.”
ಹುನಗುಂದ ಪಟ್ಟಣದಲ್ಲಿ ವಿಜಯಾನಂದ ಕಾಶಪ್ಪನವರ ಹೇಳಿಕೆ ನೀಡಿ,
“ನಾನೆ ಐದು ವರ್ಷ ಸಿಎಂ ಎಂದಿರುವ ಸಿದ್ದರಾಮಯ್ಯ ಹೇಳಿಕೆಯಲ್ಲಿ ತಪ್ಪಿಲ್ಲ. ಐದು ವರ್ಷ ಸರಕಾರವನ್ನು ಸಮರ್ಪಕವಾಗಿ ನಡೆಸುತ್ತಿದ್ದಾರೆ. ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ತಪ್ಪಲ್ಲ. ಅಂತಿಮ ತೀರ್ಮಾನವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಸಂಪುಟ ವಿಸ್ತರಣೆ ಬೇಕಾದರೆ ಸಮಯಕ್ಕೆ ತಕ್ಕಂತೆ ಮಾಡುತ್ತಾರೆ.”
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.