ಬಾಯಲ್ಲೇ ಲೆಕ್ಕ ಒಪ್ಪಿಸಿದ್ರೆ ಹೆಂಗೆ? ಜುಲೈ 23ಕ್ಕೆ ನಾನ್ ಲೆಕ್ಕ ಕೊಡ್ತೀನಿ ಎಂದ ಸಿದ್ದರಾಮಯ್ಯ

By Suvarna NewsFirst Published Jul 20, 2020, 4:23 PM IST
Highlights

ಸಚಿವ ರಾಮುಲು ಲೆಕ್ಕಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ರಿಯಾಕ್ಷನ್ ಕೊಟ್ಟಿದ್ದು,  ಶ್ರೀರಾಮುಲು ಲೆಕ್ಕಕ್ಕೆ ಪ್ರತಿಯಾಗಿ ಅಂಕಿ-ಅಂಶಗಳ ಸಮೇತ ಬಿಡುಗಡೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ.

ಬೆಂಗಳೂರು, (ಜುಲೈ.20): ಕೊರೋನಾ ವೈದ್ಯಕೀಯ ಉಪಕರಣಗಳ ಖರೀದಿಯ ಲೆಕ್ಕ ಕೊಡಿ ಎಂದಿದ್ದ ಸಿದ್ದರಾಮಯ್ಯ ಅವರಿಗೆ ಸಚಿವ ಶ್ರೀರಾಮುಲು ಇಂದು (ಸೋಮವಾರ) ಲೆಕ್ಕ ಒಪ್ಪಿಸಿದ್ದು, ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದರು. ಇದೀಗ ಇದಕ್ಕೆ  ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಇಂದು (ಸೋಮವಾರ) ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಾಯಿ ಮಾತಲ್ಲೇ ಲೆಕ್ಕ ಕೊಟ್ಟರೆ ಆಗುತ್ತಾ? ದಾಖಲೆಗಳನ್ನ ತೋರಿಸಲಿ ಎಂದು ರಾಜ್ಯ ಸರ್ಕಾರ ಮತ್ತೆ ಸವಾಲು ಹಾಕಿದರು. 

ಭ್ರಷ್ಟಾಚಾರ ಆರೋಪ: ಲೆಕ್ಕ ಕೊಟ್ಟ ಶ್ರೀರಾಮುಲು, ಅವ್ಯವಹಾರ ಸಾಬೀತಾದ್ರೆ ರಾಜೀನಾಮೆ ಸವಾಲ್

ಲೆಕ್ಕ ಕೊಡಿ ಅಂದ್ರೆ ಹೀಗಾ ಕೊಡೋದು? ಇವರು ಬಾಯಿ ಮಾತಲ್ಲೇ ಕೊಟ್ಟರೆ ಆಗುತ್ತಾ? ಏನೇನು ಖರೀದಿ ಮಾಡಲಾಗಿದೆ. ಎಷ್ಟೆಷ್ಟು ಖರ್ಚು ಮಾಡಲಾಗಿದೆ ಎಂಬ ಲೆಕ್ಕ ಬೇಡ್ವಾ? ಮಾತಿನಲ್ಲಿ ಹೇಳಿದರೆ ಹೇಗೆ? ದಾಖಲೆಗಳನ್ನ ತೋರಿಸಲಿ ಎಂದು ಆರೋಗ್ಯ ಸಚಿವ ಶ್ರೀರಾಮುಲುಗೆ ತಿರುಗೇಟು ನೀಡಿದರು.
  
ಗುರುವಾರ ಸುದ್ದಿಗೋಷ್ಠಿ
ಹೌದು...ಸಿಚ ಶ್ರೀರಾಮುಲು ಕೊಟ್ಟ ಲೆಕ್ಕಕ್ಕೆ ಪ್ರತಿಯಾಗಿ ಅಂಕಿ-ಅಂಶಗಳ ಸಮೇತ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಗುರುವಾರ (ಜುಲೈ 23)ಕ್ಕೆ ಸುದ್ದಿಗೋಷ್ಠಿ ಮಾಡಲಿದ್ದಾರೆ. ಅಂದು ರಾಜ್ಯ ಸರ್ಕಾರ ಯಾವುದನ್ನ ಎಷ್ಟೆಷ್ಟು ಹಣಕ್ಕೆ ಖರೀದಿಸಿ ಎನ್ನುವುದನ್ನು ಅಂಕಿ-ಅಂಶಗಳ ಮೂಲಕ ರಾಜ್ಯಕ್ಕೆ ತಿಳಿಸಲಿದ್ದಾರೆ.

ಕೋವಿಡ್​ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸುತ್ತಲೇ ಇರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೊರೋನಾ ನಿಯಂತ್ರಣದ ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಲೆಕ್ಕ ಕೊಡಿ ಎಂದು ಸಿಎಂ ಯಡಿಯೂರಪ್ಪ ಅವರನ್ನು ಆಗ್ರಹಿಸುತ್ತಲೇ ಇದ್ದಾರೆ. 'ಲೆಕ್ಕ ಕೇಳುವುದು ರಾಜ್ಯದ ಜನತೆಯ ಹಕ್ಕು, ಲೆಕ್ಕ ಕೊಡುವುದು ನಿಮ್ಮ ಕರ್ತವ್ಯ' ಎಂದು ಸಾಮಾಜಿಕ ಜಾಲತಾಣಗಳಲ್ಲಿ #LekkaKodi ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ರಾಜ್ಯ ಸರ್ಕಾರದ ವಿರುದ್ಧ ವಿಡಿಯೋ ಅಭಿಯಾನ ಕೂಡ ಮಾಡಿದ್ದರು. 

click me!