
ಚಿಕ್ಕಮಗಳೂರು, (ಏ.16): ಈಶ್ವರಪ್ಪ ಬಂಧನ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾಫಿನಾಡಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಹನುಮಂತಪ್ಪ ವೃತ್ತದಿಂದ ಆಜಾದ್ ಮೈದಾನದವರೆಗೆ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಕಾಫಿನಾಡಿನಲ್ಲಿ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಕಹಳೆ, ಸೆಲ್ಪಿಗೆ ಯುವತಿ ಪಟ್ಟು
ಇನ್ನು ಭಾಷಣದ ವೇಳೆ ಸಿದ್ದರಾಮಯ್ಯ ಅವರು, ಬಿಜೆಪಿ ರಾಷ್ಟ್ರೀ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಸಂಬಂಧಿಯನ್ನ ಪ್ರಸ್ತಾಪಿಸಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಯಾವನೋ ಸುದರ್ಶನ್ ಅನ್ನೋ ಕಂಟ್ರಾಕ್ಟರ್ ಇದ್ದಾನಂತೆ. ಅಧಿಕಾರಿಗಳೆಲ್ಲರೂ ಅವನ ಮನೆಗೆ ಹೋಗಬೇಕಂತೆ ಎಂದು ಗುಡುಗಿದರು. ಆಗ ಕಾರ್ಯಕರ್ತರು ಅವನು ಸಿ.ಟಿ ರವಿ ಭಾವ ಎಂದರು . ಯಾರ್ ಭಾವನೋ ನನಗೆ ಗೊತ್ತಿಲ್ಲ. ಕಂಟ್ರಾಕ್ಟರ್ ಹೆಸರು ಗೊತ್ತು ನನಗೆ ಎಂದು ಸಿದ್ದರಾಮ್ಯಯ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.