ಪ್ರಮುಖ ನಾಯಕರೋರ್ವರ ರಾಜೀನಾಮೆ ವಿಚಾರ ಸದ್ದಾಗಿದ್ದು ಅವರನ್ನು ಮನ ಒಲಿಸುವ ಕಾರ್ಯ ಮಾಜಿ ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆನ್ನಲಾಗಿದೆ.
ಬೆಂಗಳೂರು (ಡಿ.05): ತಮ್ಮ ಮೇಲಿನ ಅವಿಶ್ವಾಸ ನಿರ್ಣಯದ ಪ್ರಸ್ತಾಪದ ಹಿನ್ನೆಲೆಯಲ್ಲಿ ರಾಜೀನಾಮೆಗೆ ಮುಂದಾಗಿದ್ದ ವಿಧಾನಪರಿಷತ್ ಸಭಾಪತಿ ಕೆ. ಪ್ರತಾಪ್‌ಚಂದ್ರ ಶೆಟ್ಟಿಅವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಡೆದು ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೆ, ನೀವು ರಾಜೀನಾಮೆ ನೀಡದೆ ಅವಿಶ್ವಾಸ ನಿರ್ಣಯವನ್ನು ಎದುರಿಸಿ, ಇದರಿಂದ ‘ಬಿಜೆಪಿ-ಜೆಡಿಎಸ್‌ನ ಹೊಂದಾಣಿಕೆ’ ಬಯಲು ಮಾಡಿದಂತಾಗಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿದೆ.
'ಹೋರಾಟಕ್ಕೆ ಬಾರದಿರಲು ಸಿದ್ದರಾಮಯ್ಯನವರ ಒಳ ಮರ್ಮ ಗೊತ್ತಿಲ್ಲ'
ಅವಿಶ್ವಾಸ ನಿರ್ಣಯ ಎಂಬುದು ಸದನದಲ್ಲೇ ನಿರ್ಧಾರವಾಗಲಿ. ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುವುದಾದರೆ ಆ ಸಂದೇಶ ಜನರಿಗೆ ತಲುಪಲಿ. ಇದೀಗ ನೀವು ರಾಜೀನಾಮೆ ನೀಡಿದರೆ ಜೆಡಿಎಸ್‌ನ ಬಣ್ಣ ಬಯಲು ಮಾಡುವ ಅವಕಾಶ ಕಳೆದುಕೊಂಡಂತಾಗಲಿದೆ ಎಂದು ಹೇಳಿ ಮನವೊಲಿಸಿರುವುದಾಗಿ ತಿಳಿದು ಬಂದಿದೆ.
ಇತ್ತೀಚೆಗೆ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರು ಆದ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ, ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡು ಕೆಳಗಿಳಿಯುವ ಬದಲು ಸ್ವಯಂ ಪ್ರೇರಿತವಾಗಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಈ ವೇಳೆ ಸಿದ್ದರಾಮಯ್ಯ, ಜೆಡಿಎಸ್‌ನವರು ಬಿಜೆಪಿಯವರಿಗೆ ಬಹಿರಂಗವಾಗಿ ಬೆಂಬಲ ನೀಡಲಿ. ಈ ಮೂಲಕ ಬಿಜೆಪಿ ಜೊತೆಗೆ ಜೆಡಿಎಸ್ ಇದೆ ಎಂಬ ಸಂದೇಶ ಸಾರ್ವಜನಿಕರಿಗೆ ರವಾನೆ ಆಗಲಿ. ಅವಿಶ್ವಾಸ ಸದನದಲ್ಲೇ ನಿರ್ಧಾರವಾಗಲಿ. ಅಲ್ಲಿಯವರೆಗೂ ನೀವು ರಾಜೀನಾಮೆ ನೀಡಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.