ನಾವು ಮೋದಿ ಸಾವು ಬಯಸಲ್ಲ: ಸಿದ್ದರಾಮಯ್ಯ

Published : Mar 14, 2023, 12:44 PM IST
ನಾವು ಮೋದಿ ಸಾವು ಬಯಸಲ್ಲ: ಸಿದ್ದರಾಮಯ್ಯ

ಸಾರಾಂಶ

ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಒಂದು ಮಾತು ಹೇಳಿದ್ದರು. ವಿಪಕ್ಷ ಕಾಂಗ್ರೆಸ್ಸಿನವರು ಗೋರಿ ತೋಡುತ್ತಿದ್ದಾರೆಂಬುದಾಗಿ. ಆದರೆ, ನಾವು ಯಾರೂ ಮೋದಿ ಸಾವು ಬಯಸುವವರಲ್ಲ. ಮೋದಿ ಅವರು ಶತಾಯುಷಿಯಾಗಬೇಕು: ಸಿದ್ದರಾಮಯ್ಯ

ದಾವಣಗೆರೆ(ಮಾ.14):  ನಾವ್ಯಾರೂ ಪ್ರಧಾನಿ ಮೋದಿ ಸಾವು ಬಯಸಲ್ಲ. ಮೋದಿ ಅವರು 125 ವರ್ಷ ಕಾಲ ಆರೋಗ್ಯವಂತರಾಗಿ ಬಾಳಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಹೊನ್ನಾಳಿಯಲ್ಲಿ ಸೋಮವಾರ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿ, ರಾಜ್ಯ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಒಂದು ಮಾತು ಹೇಳಿದ್ದರು. ವಿಪಕ್ಷ ಕಾಂಗ್ರೆಸ್ಸಿನವರು ಗೋರಿ ತೋಡುತ್ತಿದ್ದಾರೆಂಬುದಾಗಿ. ಆದರೆ, ನಾವು ಯಾರೂ ಮೋದಿ ಸಾವು ಬಯಸುವವರಲ್ಲ. ಮೋದಿ ಅವರು ಶತಾಯುಷಿಯಾಗಬೇಕು ಎಂದು ಸ್ಪಷ್ಟಪಡಿಸಬೇಕು. ಆದರೆ, ಬಿಜೆಪಿ ಸಚಿವ ಡಾ.ಅಶ್ವತ್ಥ ನಾರಾಯಣ ಅವರು ಟಿಪ್ಪು ಸುಲ್ತಾನ್‌ ಮುಗಿಸಿದ ರೀತಿಯಲ್ಲೇ ಸಿದ್ದರಾಮಯ್ಯರನ್ನು ಮುಗಿಸುತ್ತೇವೆಂಬುದಾಗಿ ಹೇಳಿದ್ದರು. ಮೋದಿ ಜವಾಬ್ದಾರಿಯುತ ಪ್ರಧಾನಿಯಾಗಿದ್ದರೆ ಅಶ್ವತ್ಥ ನಾರಾಯಣರನ್ನು ಕರೆಸಿ, ಸಚಿವ ಸ್ಥಾನದಿಂದ ವಜಾ ಮಾಡಬೇಕಿತ್ತು ಎಂದು ಆಗ್ರಹಿಸಿದರು.

ಎಲ್ಲಾ ಮುಸ್ಲಿಮರ ಓಟು ಬೇಡ ಅಂದಿಲ್ಲ: ಈಶ್ವರಪ್ಪ

ಬಿಜೆಪಿ ಎಂದರೇ ಭ್ರಷ್ಟಜನತಾ ಪಕ್ಷ: ಸಿದ್ದರಾಮಯ್ಯ

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಜನರ ಆಶೀರ್ವಾದ ಪಡೆದುಕೊಂಡು ಬಂದ ಪಕ್ಷವಲ್ಲ, ಅನ್ಯ ಪಕ್ಷಗಳ ಶಾಸಕರನ್ನು ಖರೀದಿಸಿ ಹಿಂದಿನ ಬಾಗಿಲಿನಿಂದ ಅಧಿಕಾರಕ್ಕೆ ಬಂದ ಭ್ರಷ್ಟಮತ್ತು ಅನೈತಿಕ ಸರ್ಕಾರವಾಗಿದ್ದು, ತನ್ನ ನಾಲ್ಕು ದಶಕಗಳ ರಾಜಕೀಯದಲ್ಲಿ ಬಿಜೆಪಿಯಂತಹ ಭ್ರಷ್ಟಸರ್ಕಾರವನ್ನ ನೋಡಿಯೇ ಇಲ್ಲ. ಬಿಜೆಪಿ ಎಂದರೇ ಭ್ರಷ್ಟಜನತಾ ಪಕ್ಷ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಅವರು ಹೊನ್ನಾಳಿಯಲ್ಲಿ ಕಾಂಗ್ರೆಸ್‌ ಪಕ್ಷದವತಿಯಿಂದ ಹಮ್ಮಿಕೊಡಿದ್ದ ಪ್ರಜಾಧ್ವನಿ ಸಮಾವೇಶ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಮಾತೇತ್ತಿದರೆ ನಾನು ಮಣ್ಣಿನ ಮಗ ಎನ್ನುತ್ತಾರೆ, ಆದರೆ ಸಂಕಷ್ಟಕ್ಕೀಡಾಗಿದ್ದ ರೈತರ ಸಾಲ ಮಾನ್ನಾ ಮಾಡಿ ಎಂದರೆ ಸರ್ಕಾರದಲ್ಲಿ ಹಣ ಇಲ್ಲ ನಾನೇನು ನೋಟ್‌ ಪ್ರಿಂಟ್‌ ಮಾಡುವುದಿಲ್ಲ ಎಂದು ಹೇಳಿದ್ದರು ಎಂದು ಯಡಿಯೂರಪ್ಪಗೆ ಟಾಂಗ್‌ ನೀಡಿದರು.

ಮೆಕ್ಕೆಜೋಳ, ಕೊಬ್ಬರಿ, ಭತ್ತದ ಮುಂತಾದ ಬೆಳೆಗಳ ಬೆಲೆ ಕುಸಿದು ರೈತ ಸಂಕಷ್ಟದಲ್ಲಿದ್ದಾನೆ. ಅವೈಜ್ಞಾನಿಕ ಎಪಿಎಂಸಿ ಕಾಯ್ದೆಗಳಿಂದ ಇಂದು ರಾಜ್ಯದಲ್ಲಿರುವ 163 ಎಪಿಎಂಸಿಗಳು ಮುಚ್ಚಿಹೋಗುವ ಸ್ಥಿತಿಯಲ್ಲಿವೆ ಎಂದು ಹೇಳಿದರು.
ವಿಪಕ್ಷಗಳು ಸರ್ಕಾರದ ಭ್ರಷ್ಟಾಚಾರ ವ್ಯವಸ್ಥೆಗಳ ಬಗ್ಗೆ ಮಾತಾನಾಡಿದಾಗ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪುರಾವೆ ಕೊಡಿ ಎಂದು ಕೇಳುತ್ತಾರಲ್ಲ, ಚನ್ನಗಿರಿ ಶಾಸಕ ಮಾಡಾಳ್‌ ವಿರೋಪಾಕ್ಷಪ್ಪ ಅವರ ಮಗ ರೆಡ್‌ಹ್ಯಾಂಡಾಗಿ ಕೋಟಿ ಕೋಟಿ ಹಣ ಸಹಿತ ಸಿಕ್ಕಿ ಬಿದಿದ್ದು ಸಾಕಾಗುವುದಿಲ್ಲವೇ? ಮಾಡಾಳ್‌ ಅವರೇ ತಾನು ಮನೆಯಲ್ಲಿಯೇ ಇದ್ದೆ ಎಂದು ಹೇಳಿದರೆ ಪೊಲೀಸರು ಇವರನ್ನು ಬಂಧಿಸದೇ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಿದ್ದು ಪರೊಕ್ಷವಾಗಿ ಸಿಎಂ ಅವರೇ ಇಂತಹ ಭ್ರಷ್ಟವ್ಯಕ್ತಿಗಳಿಗೆ ರಕ್ಷಣೆ ನೀಡುತ್ತಿರುವುದು ತಿಳಿದು ಬರುತ್ತದೆ ಎಂದು ವಾಗ್ದಾಳಿ ನಡೆಸಿದರು.

40 ಪರ್ಸೆಂಟ್‌ ಸರ್ಕಾರ ಎಂದು ಗುತ್ತಿಗೆದಾರರೇ ನೇರವಾಗಿ ದೇಶದ ಪ್ರಧಾನಿಗೆ ಪತ್ರ ಬರೆದಿದ್ದರೂ ಕೂಡ ಯಾವುದೇ ಕ್ರಮ ಅಗಿಲ್ಲ, ಪತ್ರ ಪುರಾವೆಯಲ್ಲವೇ ಎಂದು ಪ್ರಶ್ನಿಸಿದರು.

ಸೆಕ್ರಟರಿ ಟು ಚೀಫ್‌ ಮಿನಿಸ್ಚರ್‌ ರೇಣುಕಾಚಾರ್ಯ:

ನೀವೇ ಆಯ್ಕೆ ಮಾಡಿರುವ ಸ್ಥಳೀಯ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಟಾಟಾ ಬಿರ್ಲಾ ಅವರ ಮಗನಲ್ಲ. ಅವರೊಬ್ಬ ಶಾಲಾ ಶಿಕ್ಷಕರ ಮಗನಾಗಿದ್ದು, ಇಂದು ಕೋಟಿ ಕೋಟಿ ಆಸ್ತಿ ಒಡೆಯನಾಗಿದ್ದು ಹೇಗೆ ಎಂದು ಈ ಕ್ಷೇತ್ರದ ಜನರೇ ಯೋಚಿಸಬೇಕು. ರೇಣುಕಾಚಾರ್ಯ ಹಾಗೂ ಮಾಡಾಳ್‌ ವಿರೋಪಾಕ್ಷಪ್ಪನಂತಹವರು ಶಾಸಕರಾಗಬೇಕೆ ಎನ್ನುವುದನ್ನು ಜನರೇ ತೀರ್ಮಾನಿಸಬೇಕು ಎಂದು ಹೇಳಿದರು.

ಈ ಕ್ಷೇತ್ರದಲ್ಲಿ 5 ಜನ ಟಿಕೇಟ್‌ ಆಕಾಂಕ್ಷಿಗಳಿದ್ದಾರೆ ಆದರೆ ಪಕ್ಷ ಒಬ್ಬರಿಗೆ ಮಾತ್ರ ಟಿಕೇಟ್‌ ನೀಡಲಿದ್ದು, ಉಳಿದವರು ಒಮ್ಮತದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ಮಟ್ಟದಲ್ಲಿ ಕೆಲಸ ಮಾಡಬೇಕು ಎಂದು ಪಕ್ಷದ ಟೀಕೇಟ್‌ ಅಕಾಂಕ್ಷಿಗಳಿಗೆ ತಾಕೀತು ಮಾಡಿ ಈ ಬಗ್ಗೆ ಟೀಕೇಟ್‌ಆಕಾಂಕ್ಷಿಗಳಿಂದ ವೇದಿಕೆಯಲ್ಲಿಯೇ ಶಪಥಮಾಡಿಸಿದರು.

ಬಿಜೆಪಿಯನ್ನು ಕಿತ್ತೊಗೆಯಬೇಕು:

ರಾಜ್ಯದಲ್ಲಿನ 40 ಪರ್ಸೆಂಟ್‌ ಸರ್ಕಾರವನ್ನು ರಾಜ್ಯದ ಜನತೆ ಕ್ತಿತೋಗೆಯಬೇಕು ಇಲ್ಲದಿದ್ದರೆ ರಾಜ್ಯ ಉಳಿಯುವುದಿಲ್ಲ ಬಡಜನತೆ ಉಳಿಯುವುದಿಲ್ಲ ಈ ಸರ್ಕಾರದಲ್ಲಿ ಬರೀ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.

ಕಾಂಗ್ರೆಸ್‌ ಮಾಡಿದ ಅಡುಗೆಯನ್ನು ಇಂದು ಬಿಜೆಪಿ ತನ್ನದೆಂದ ಉಣಬಡಿಸುತ್ತಿದೆ:

ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಳಾಗಿಸಲು ತಾವು ಸಮಿತಿ ರಚನೆ ಮಾಡಿ ಅಂದಿನ ಕಂದಾಯ ಮಂತ್ರಿ ಕಾಗೋಡು ತಿಮ್ಮಪ್ಪ ಅವರೊಂದಿಗೆ ಆರಣ್ಯ ಕಾಯ್ದೆಗೆ ತಿದ್ದುಪಡಿ ತಂದು ಕಂದಾಯ ಗ್ರಾಮಗಳ ಘೋಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ಇವುಗಳ ಅದೇಶ ಪತ್ರ ನೀಡಲು ದಾವಣಗೆರೆಗೆ ನರೇಂದ್ರ ಮೋದಿ ಬರುತ್ತಿರುವುದು ವಿಪರ್ಯಾಸ ಸಂಗತಿ. ಇದೇ ರೀತಿ ಮೈಸೂರು -ಬೆಂಗಳೂರು ಹೆದ್ದಾರಿ ಕೂಡ ಕಾಂಗ್ರೆಸ್‌ ಸರ್ಕಾರದ ಕೊಡುಗೆಯಾಗಿದ್ದು, ಇದೂ ಕೂಡ ಬಿಜೆಪಿಯವರು ತಾವು ಮಾಡಿದ್ದು ಎಂದು ಹೇಳಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ನವರು ಮಾಡಿದ ಅಡುಗೆಯನ್ನು ಬಿಜೆಪಿಯವರು ಉಣಬಡಿಸಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, 13 ಬಾರಿ ಬಜೆಡ್‌ ಮಂಡಿಸಿದ 5 ವರ್ಷ ಭ್ರಷ್ಟಾಚಾರ ರಹಿತ ಅಡಳಿತ ನಡೆಸಿದ ಸಿದ್ದರಾಮಯ್ಯ ಅವರ ಸರ್ಕಾರ 164 ಭರವೆಸಗಳ ಪೈಕಿ 160 ಭರವಸೆಗಳನ್ನು ಈಡೇರಿಸಿದ ಏಕೈಕ ಸರ್ಕಾರವಾಗಿದೆ ಎಂದು ಹೇಳಿದರು.

ಆಪರೇಷನ್‌ ಕಮಲದಲ್ಲಿದ್ದ ಉದಯ್‌ ಕಾಂಗ್ರೆಸ್‌ ಸೇರ್ಪಡೆ

ರಾಜಕೀಯ ನಾಟಕದಲ್ಲಿ ಇದೇ ತಮ್ಮ ಕೊನೆ ಚುನಾವಣೆ:

ರಾಜಕೀಯ ನಾಟಕದಲ್ಲಿ ಇದು ನನ್ನ ಕೊನೆಯ ಚುನಾವಣೆಯಾಗಿದ್ದು, ಪಕ್ಷವು ತಮಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಪ್ರಸ್ತಾವಿಕವಾಗಿ ಮಾತನಾಡಿ, ಪಕ್ಷವು ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ಬಿಜೆಪಿ ದುರಾಡಿತವನ್ನು ಖಂಡಿಸಿ ಮೊದಲೆ ಹಂತವಾಗಿ ಜಿಲ್ಲಾಮಟ್ಟದಲ್ಲಿ ಸಮಾವೇಶ ನಡೆಸಿ 2ನೇ ಹಂತವಾಗಿ ತಾಲೂಕು ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ದೇವರಾಜ್‌ ಅರಸು ನಂತರ ಈ ರಾಜ್ಯದ ಉತ್ತಮ ಸುಸ್ಥಿರ ಸರ್ಕಾರ, ಅಲ್ಪಸಂಖ್ಯಾತರು, ಹಿಂದುಳಿದವರ ಹಿತ ಕಾಪಾಡಿದವರು ಸಿದ್ದರಾಮಯ್ಯನವರು.
2013 ಹಾಗೂ 2018ರಲ್ಲಿ ಪಕ್ಷದ ಟಿಕೆಟ್‌ ಅಕಾಂಕ್ಷಿಯಾಗಿದ್ದೇ ಈಗಲೂ ಕೂಡ ಟೀಕೆಟ್‌ ಆಕಾಂಕ್ಷಿಯಾಗಿದ್ದು, ಪಕ್ಷದಲ್ಲಿ ಯಾರಿಗೆ ಟಿಕೆಟ್‌ ನೀಡಿದರು ಒಗ್ಗಟ್ಟಿನಿಂದ ದುಡಿಯುವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಮೀರ್‌ ಆಹಮ್ಮದ್‌, ಎಂಎಲ್‌ಸಿ ಪ್ರಕಾಶ್‌ ರಾಥೋಡ್‌, ಮಧುಬಂಗಾರಪ್ಪ ಅವರು ಮಾತನಾಡಿದರು. ಅಧ್ಯಕ್ಷತೆಯನ್ನು ತಾಲೂಕು ಅಧ್ಯಕ್ಷ ಎಚ್‌.ಬಿ. ಶಿವಯೋಗಿ ವಹಿಸಿದ್ದರು.

ಟಿಕೆಟ್‌ ಆಕಾಂಕ್ಷಿಗಳಾದ ಎಚ್‌.ಎ. ಉಮಾಪತಿ, ಡಿ.ಜಿ. ವಿಶ್ವನಾಥ್‌, ಬಿ. ಸಿದ್ದಪ್ಪ, ಎಂಎಲ್‌ಸಿ ಮೋಹನ್‌ ಕೊಂಡಜ್ಜಿ, ನಿಖಿಲ್‌ ಕೊಂಡಜ್ಜಿ, ಶಿವಮೂರ್ತಿ ನಾಯ್ಕ, ಕೆಪಿಸಿಸಿ ಸದಸ್ಯ, ಡಾ. ಈಶ್ವರ ನಾಯ್ಕ, ಎಂ. ರಮೇಶ್‌, ಆರ್‌. ನಾಗಪ್ಪ, ವಾಜೀದ್‌, ರಂಜಿತ್ತ, ಪ್ರಶಾಂತ್‌ ಬಣ್ಣಜ್ಜಿ, ಗೋಣಿ ಮಾಲತೇಶ್‌,ಶಿವಮೊಗ್ಗದ ರುದ್ರಮುನಿ, ಪುಪ್ಪ, ಅನೇಕ ಮುಖಂಡರಿದ್ದರು. ಹೆಲಿಪ್ಯಾಡ್‌ನಿಂದ ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಬಸ್‌ ಮೂಲಕ ಬೈಕ್‌ ರಾರ‍ಯಲಿ ಮೂಲಕ ವೇದಿಕೆ ಆಗಮಿಸಿದರು. ಸಣ್ಣಕ್ಕಿ ಬಸವನಗೌಡ ಸ್ವಾಗತಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌