ಚಾಮುಂಡೇಶ್ವರಿಯಲ್ಲಿ ಸೋಲು-ಗೆಲುವಿನ ಆಳ ಅಗಲ ಬಿಚ್ಚಿಟ್ಟ ಸಿದ್ದರಾಮಯ್ಯ

Published : Jul 17, 2022, 08:12 PM IST
ಚಾಮುಂಡೇಶ್ವರಿಯಲ್ಲಿ ಸೋಲು-ಗೆಲುವಿನ ಆಳ ಅಗಲ ಬಿಚ್ಚಿಟ್ಟ ಸಿದ್ದರಾಮಯ್ಯ

ಸಾರಾಂಶ

ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಆಳ ಅಗಲವನ್ನು ಬಿಚ್ಚಿಟ್ಟಿದ್ದಾರೆ.

ಮೈಸೂರು, (ಜುಲೈ.17): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು(ಭಾನುವಾರ) ತಮ್ಮ ಹಳೇ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹಲವು ರಾಜಕೀಯ ವಿಚಾರಗಳನ್ನ  ಹಂಚಿಕೊಂಡರು. ಅಲ್ಲದೇ ಚಾಮುಂಡೇಶ್ವರಿ ಕ್ಷೇತ್ರದ ಆಳ ಅಗಲವನ್ನು ಹೇಳಿದ್ದಾರೆ.

ಮೈಸೂರಿನ ಚಾಮುಂಡಿ ವಿಧಾನಸಭೆ ಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿವಿಧ ಮುಂಚೂಣಿ ಘಟಕಗಳಿಗೆ ಹೊಸದಾಗಿ ನೇಮಕವಾಗಿರುವ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು 2023ರ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಸ್ಪರ್ಧಿಸುತ್ತೇನೆ. ನಂತರ ಯಾವುದೇ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡಲ್ಲ. ರಾಜ್ಯಸಭೆ ಸೇರಿ ಯಾವುದೇ ಸದಸ್ಯತ್ವ ನೀಡಿದರೂ ಸ್ವೀಕರಿಸುವುದಿಲ್ಲ. 2023ರ ವಿಧಾನಸಭೆಯ ಚುನಾವಣೆಯಲ್ಲಿ ಬಾದಾಮಿ, ಕೊಪ್ಪಳ, ಕೋಲಾರ, ಹುಣಸೂರು ಮತ್ತು ವರುಣದಲ್ಲಿ ಸ್ಪರ್ಧಿಸಲು ಆಹ್ವಾನಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಡಿಕೆ ಬ್ರದರ್ಸ್ ಟಕ್ಕರ್, ಮುಸ್ಲಿಂ ಮಹಿಳೆ ರೋಷಾವೇಶ; ಸಿದ್ದು ಸಿಎಂ “ಕಂಬಳಿ” ಭವಿಷ್ಯ..!

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿದ್ದಾರೆ ಮತ್ತು ಗೆಲ್ಲಿಸಿದ್ದಾರೆ. ನಾನು ಸೋಲು, ಗೆಲುವನ್ನು ಸಮಚಿತ್ತದಿಂದ ಸ್ವೀಕರಿಸಿದ್ದೇನೆ. ಸೋಲಿಸಿದ್ದಾರೆ ಎಂದ ವ್ಯಥೆ ಪಡಲ್ಲ, ಅಳಲು ಹೋಗುವುದಿಲ್ಲ. 2018ರ ಎಲೆಕ್ಷನ್‌ನಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಸೋತೆ. ಆಗ ಅನೇಕ ಬೂತ್ ಕಮಿಟಿಗಳಿರಲಿಲ್ಲ, ಅದ್ದರಿಂದ ನಾನು ಸೋತೆ.ಬಾದಾಮಿ ಕ್ಷೇತ್ರಕ್ಕೆ ನಾನು ಎರಡೇ ದಿನ ಹೋಗಿದ್ದು, ಅಲ್ಲಿ ಗೆಲ್ಲಿಸಿದರು. ನಾನು ಚಾಮುಂಡೇಶ್ವರಿಯಿಂದ ನಾನು ಚುನಾವಣೆಗೆ ನಿಲ್ಲಲ್ಲ. ನಾನು ನಿಲ್ಲಲ್ಲ ನಿಮ್ಮ ತಲೆಯಿಂದ ತೆಗೆದು ಹಾಕಿ ಎಂದರು. 

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏನೇ ಕೆಲಸ ಆಗಿದ್ದರೂ ನನ್ನಿಂದಲೆ. ಬೇರೆ ಯಾರೂ ಮಾಡಿಲ್ಲ, ಇದನ್ನು ಎಲ್ಲಿ ಬೇಕಾದರೂ ಹೇಳುತ್ತೇನೆ. ಮತದಾರರು ಕೆಲಸ ನೋಡಿ ಮತ ಹಾಕುವುದು ಕಡಿಮೆಯಾಗಿದೆ. ಮೈಸೂರಿಗೆ ನಾನು ಮಾಡಿದಷ್ಟು ಕೆಲಸ ಬೇರೆ ಯಾರೂ ಮಾಡಿಲ್ಲ. ಜಾತಿ, ದುಡ್ಡಿನ ಮೇಲೆ ಜನ ಮತ ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಕರ್ತರ ಮೇಲೆ ಕೋಪ 
ಮೈಸೂರು ನಗರಕ್ಕೆ ಕೋಟ್ಯಂತರ ರೂ. ಅನುದಾನ ಕೊಟ್ಟಿದ್ದೇನೆ. ಆದರೂ ಚಾಮುಂಡೇಶ್ವರಿ ಕ್ಷೇತ್ರದ ಜನರು ನನ್ನನ್ನು ಸೋಲಿಸಿದರು. ಹಿಂದೆ ಕಾಂಗ್ರೆಸ್ ಬಿ ಫಾರಂ ತಂದರೆ ಗೆಲ್ಲುತ್ತಿದ್ದರು. ಈಗ ಆ ರೀತಿ ಪರಿಸ್ಥಿತಿ ಇಲ್ಲ. ಚಾಮುಂಡೇಶ್ವರಿಯಲ್ಲಿ 5 ಸಲ ಗೆದ್ದಿದ್ದೇನೆ, 3 ಸಲ ಸೋತಿದ್ದೇನೆ. ನನಗೆ ಚಾಮುಂಡೇಶ್ವರಿ ಕ್ಷೇತ್ರದ ಮತದಾರರ ಮೇಲೆ ಕೋಪ ಇಲ್ಲ. ನನಗೆ ಪಕ್ಷದ ಕಾರ್ಯಕರ್ತರ ಮೇಲೆ ಕೋಪ ಇದೆ ಎಂದು ಹೇಳಿದರು.

ಚಾಮುಂಡೇಶ್ವರಿ ಕ್ಷೇತ್ರದ 338 ಬೂತ್ ಆ್ಯಕ್ಟೀವ್ ಆಗಿರಬೇಕು. 1983ರಲ್ಲಿ ಮೊದಲು ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೆ. ಮರೀಗೌಡ 83ರಲ್ಲಿ ಇದ್ದ ಈಗಲೂ ಇದ್ದಾನೆ. ಆಗ ಹೇಗಿತ್ತು ಈಗ ಯಾವ ರೀತಿ ಇದೆ ನೋಡಿ. ಈಗ ಜಿ ಟಿ ದೇವೇಗೌಡ ಇದ್ದಾನೆ. ನಾನು 165 ಭರವಸೆ ನೀಡಿದ್ದೆ 158 ಭರವಸೆ ಈಡೇರಿಸಿದೆ. ಬೇರೆ ಯಾರ ಸರ್ಕಾರ ಯಾವ ಸಿಎಂ ಕೊಟ್ಟಿದ್ದರು ತೋರಿಸಲಿ ಎಂದು ಪ್ರಶ್ನಿಸಿದರು.

ಶ್ರೀರಾಮುಲು ಡಿಸಿಎಂ ಆದ್ರಾ?
ಲಿಂಗಾಯತ ಧರ್ಮ ಒಡೆದ ಸಿದ್ದರಾಮಯ್ಯ ಮೇಜರ್ ಕಮಿಟಿ ವಿರೋಧಿ ಎಂದು ಬಿಂಬಿಸಿದರು. ನಮ್ಮವರೇ ಅಪಪ್ರಚಾರ ಮಾಡಿದರು. ರಾಮುಲು ಮೀಸಲಾತಿ ಬಗ್ಗೆ ರಕ್ತದಲ್ಲಿ ಬರೆದು ಕೊಡುತ್ತೇನೆ ಅಂದರು. ಸಚಿವ ಬಿ.ಶ್ರೀರಾಮುಲು ಎಸ್‌ಟಿಗೆ ಮೀಸಲಾತಿ ಕೊಡಿಸಿದ್ದರಾ? ವಾಲ್ಮೀಕಿ ಸ್ವಾಮಿಜಿ ಧರಣಿ ಕುಳಿತು 155 ದಿನ ಆಯ್ತು. ಏಕೆ ಎಲ್ಲರು ಸುಮ್ಮನೆ ಕುಳಿತಿದ್ದಾರೆ.  ಶ್ರೀರಾಮುಲು ಡಿಸಿಎಂ ಆಗುತ್ತಾನೆ ಮೀಸಲಾತಿ ಕೊಡ್ತಾರೆ ಅಂದರು ಆಯ್ತಾ ? ಇದೆಲ್ಲವೂ ಸತ್ಯ ಆದರೆ ಏಕೆ ಎಲ್ಲಾ ಸುಮ್ಮನಿದ್ದೀರಾ ? ಎಂದರು.

ರಾಜ್ಯ ಉಳಿಸಬೇಕು ಬಿಜೆಪಿ ಕಪಿಮುಷ್ಠಿಯಿಂದ ಪಾರುಮಾಡಬೇಕು. ಭ್ರಷ್ಟಾಚಾರ ರಹಿತ ಸರ್ಕಾರಕ್ಕಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನನಗೆ ಅಧಿಕಾರ ಬೇಕು ಅಂತಾ ಅಲ್ಲ. ಯಾವುದೇ ಕೆಲಸ ಜನರಿಗೆ ಆಗುತ್ತಿಲ್ಲ. ವಿಪಕ್ಷ ನಾಯಕನಾಗಿ ನನಗೆ ಒಂದು ಮನೆ ಕೊಡಿಸಲು ಆಗಿಲ್ಲ. ಕುಮಾರಸ್ವಾಮಿ ತಾಜ್ ಹೋಟೆಲ್‌ನಲ್ಲಿ ಕುಳಿತುಕೊಳ್ಳದೆ. ಮಂತ್ರಿಗಳ ಶಾಸಕರ ಮಾತು ಕೇಳಿದ್ದರೆ ಸಿಎಂ ಆಗಿಯೇ ಇರುತ್ತಿದ್ದರು. ಕುಮಾರಸ್ವಾಮಿ ಶಾಸಕರ ಮಾತು ಕೇಳಲಿಲ್ಲ ಎಂದು ಟಾಂಗ್ ಕೊಟ್ಟರು.

 ಬಿ ಎಸ್ ಯಡಿಯೂರಪ್ಪ ಒಬ್ಬೊಬ್ಬ ಅಭ್ಯರ್ಥಿಗೆ 25 ರಿಂದ 30 ಕೋಟಿ ಚುನಾವಣೆಗೆ ಹಣ ನೀಡಿದರು ಶಾಸಕರು ಶೇ 10  ಕೊಟ್ಟು ಅನುದಾನ ತರುತ್ತಿದ್ದಾರೆ. ನನ್ನ ಅವಧಿಯಲ್ಲಿ ಎನ್ ಓ ಸಿಗೆ ಹಣ ತೆಗೆದುಕೊಂಡಿದ್ದರೆ. ನನ್ನ ಅವಧಿಯಲ್ಲಿ ಈ ರೀತಿ ಆಗಿದ್ದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತಿದ್ದೆ ಎಂದು ಕಿಡಿಕಾರಿದರು.

ಪ್ರತಾಪ್ ಸಿಂಹ ಬರೀ ಸುಳ್ಳು ಹೇಳ್ತಾನೆ
ಪ್ರತಾಪ್ ಸಿಂಹ ಬರೀ ಸುಳ್ಳು ಹೇಳುತ್ತಾನೆ. ಬೆಂಗಳೂರು ಮೈಸೂರು ರಸ್ತೆ ನಾನು ಮಾಡಿಸಿದೆ ಅಂತಾನೆ. ನೀವು ಸುಮ್ಮನೆ ಇರುತ್ತೀರಾ? ಪಾಪ ಆ ಲಕ್ಷ್ಮಣ ಮಾತ್ರ ಹೇಳುತ್ತಾನೆ. ಸುಳ್ಳು ಹೇಳಲು ಇತಿ ಮಿತಿ ಇರಬೇಕು. ಪ್ರತಾಪ್ ಸಿಂಹ ಮೈಸೂರು ನಗರಕ್ಕೆ ಏನು ಮಾಡಿದ್ದಾನೆ ಹೇಳಲಿ ? 8 ವರ್ಷದಲ್ಲಿ ಏನು ಮಾಡಿದ್ದಾನೆ ?ಬರೀ ಸುಳ್ಳು ಹೇಳುತ್ತಾನೆ. ಖಾಲಿ ಡಬ್ಬ ಹೊಡೆದು ಸದ್ದು ಮಾಡುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಗ್ಯಾರಂಟಿ ಹೆಸರಿನಲ್ಲಿ ಕಾಲಹರಣ ಮಾಡುವ ಕೆಲಸ ಆಗುತ್ತಿದೆ: ಛಲವಾದಿ ನಾರಾಯಣಸ್ವಾಮಿ
ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್