ಎಸ್‌ಡಿಪಿಐ, ಪಿಎಫ್‌ಐ ಮೇಲೆ ನಿಮಗೆ ಅನುಮಾನ ಇದೆಯಾ? ಎಸ್‌ಡಿಪಿಐ, ಪಿಎಫ್‌ಐ ಬಗ್ಗೆ ಸಾಕ್ಷಿ ಇದ್ದರೆ ಬ್ಯಾನ್ ಮಾಡಿ: ಸಿದ್ದು
ಮೈಸೂರು(ಜು.30): ರಾಜ್ಯದಲ್ಲಿ ಸರ್ಕಾರವೇ ಇಲ್ಲ, ಸರ್ಕಾರ ಸತ್ತು ಹೋಗಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಹತಾಶೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ಸರ್ಕಾರ ನಡೆಸಲು ಆಗದಿದ್ದರೆ ಬಿಟ್ಟು ಹೋಗಿ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಿದ್ದರೆ ವಿರೋಧ ಪಕ್ಷದ ವಿಶ್ವಾಸದ ಮಾತು ಕೇಳದಿದ್ದರೆ, ರಿಸೈನ್ ಅಂಡ್ ಗೆಟ್ ಔಟ್ ಎಂದು ಆಗ್ರಹಿಸಿದರು.
ಎಸ್‌ಡಿಪಿಐ, ಪಿಎಫ್‌ಐ ಮೇಲೆ ನಿಮಗೆ ಅನುಮಾನ ಇದೆಯಾ? ಎಸ್‌ಡಿಪಿಐ, ಪಿಎಫ್‌ಐ ಬಗ್ಗೆ ಸಾಕ್ಷಿ ಇದ್ದರೆ ಬ್ಯಾನ್ ಮಾಡಿ. ಮೈಸೂರಿನಲ್ಲಿ ಗಲಭೆ ಆಗಿತ್ತು. ಅದರಲ್ಲಿ ವಿದ್ಯಾರ್ಥಿಗಳೂ ಇದ್ದರು. ಕೇಸ್ ವಾಪಸ್ ಪಡೆಯುವಂತೆ ಎಲ್ಲಾ ಪಕ್ಷದವರೂ ಕೇಳಿದ್ದರು. ಅದಕ್ಕೆ ಕೇಸ್ ವಾಪಸ್ ಪಡೆದುಕೊಂಡಿದ್ದೆ. ಅದೆಲ್ಲಾ ಆಗಿ ಎಷ್ಟುವರ್ಷ ಆಯ್ತು. ಅದಕ್ಕೂ ಈಗಿನ ಕೊಲೆಗೂ ಏನು ಸಂಬಂಧ? ನಿಮಗೆ ನಿಜವಾಗಲೂ ಎಸ್‌ಡಿಪಿಐ, ಪಿಎಫ್‌ಐ ಮೇಲೆ ಅನುಮಾನ ಇದ್ದರೆ ಬ್ಯಾನ್ ಮಾಡಿ. ಅದನ್ನು ಬಿಟ್ಟು ಹಿಂದಿನ ಸರ್ಕಾರದ ಮೇಲೆ ಹೇಳಿದರೆ ಏನು ಪ್ರಯೋಜನ? ಅಧಿಕಾರ ಇರೋದು ನಿಮ್ಮ ಕೈಯಲ್ಲಿ ಅಲ್ವಾ ಎಂದು ಅವರು ಪ್ರಶ್ನಿಸಿದರು.
undefined
ಕೊಪ್ಪಳ: ಸಿದ್ದರಾಮೋತ್ಸವ ಅಂಗವಾಗಿ ಪಾದಯಾತ್ರೆ, ಕಾರ್ಯ್ರಮದಲ್ಲಿ 1 ಲಕ್ಷ ಕುರಿಗಾರರು ಭಾಗಿ
ಕರಾವಳಿಯಲ್ಲಿ ಪ್ರವೀಣ್, ಫಾಜಿಲ್ ಹತ್ಯೆ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ. ಸಿಎಂ ಇದ್ದಾಗಲೇ ಮತ್ತೊಂದು ಕೊಲೆ ಆಗಿದೆ. ಇಂಟಲಿಜೆನ್ಸ್ ಸಿಎಂ ಕೆಳಗೆ ಇದೆ ಏನು ಮಾಡುತ್ತಿದ್ದಾರೆ? ಇದು ಸಿಎಂಸ ಗೃಹಮಂತ್ರಿ, ಸರ್ಕಾರದ ವೈಫಲ್ಯ.ಜನರಿಗೆ ರಕ್ಷಣೆ ಕೊಡಲು ಆಗುತ್ತಿಲ್ಲ. ಜನರು ಭಯದಿಂದ ಬದುಕುತ್ತಿದ್ದಾರೆ. ಮನೆಯಿಂದ ಹೊರ ಬರಲು ಹೆದರಿದ್ದಾರೆ, ಮತ್ತೆ ಮನೆ ಸೇರುತ್ತೇವೋ ಇಲ್ಲವೋ ಅನ್ನೋ ಭಯ ಇದೆ ಎಂದರು.
ಹಿಂದಿನ ಸರ್ಕಾರಕ್ಕೂ ಕಾನೂನು ಸುವ್ಯವಸ್ಥೆಗೆ ಏನು ಸಂಬಂಧ? ಹಲವು ಕೊಲೆಗಳಾಗಿವೆ, ಸರ್ಕಾರ ಬದುಕಿದೆಯಾ? ಸತ್ತಿದ್ದೆಯಾ? ಈ ಸರ್ಕಾರ ಸತ್ತು ಹೋಗಿದೆ. ಈ ಸರ್ಕಾರÜಕ್ಕೆ ನೈತಿಕತೆಯೇ ಇಲ್ಲ. ನೈತಿಕತೆ ಇಲ್ಲದವರು ಈ ಪ್ರಕರಣಗಳ ನೈತಿಕ ಹೊಣೆ ಹೇಗೆ ಹೊರುತ್ತಾರೆ ಎಂದು ಅವರು ಪ್ರಶ್ನಿಸಿದರು.
ಸಿಎಂಗೆ ತಿರುಗೇಟು:
ಸಿದ್ದರಾಮಯ್ಯ ಕಾಲದಲ್ಲೂ ಕೊಲೆಗಳಾಗಿವೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಆಗ ಕೊಲೆ ಆಯ್ತು ಈಗಲೂ ಕೊಲೆಯಾಗಿದೆ ಇದು ಸಮರ್ಥನೆನಾ? ರಾಜ್ಯದಲ್ಲೂ ಯುಪಿ ಮಾದರಿ ಬುಲ್ಡೋಜರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಬಿಹಾರ್, ಯುಪಿ ರೀತಿ ಆಗಿದೆಯಾ? ಅದನ್ನು ಸಿಎಂ ಒಪ್ಪಿಕೊಂಡಿದ್ದರಾ? ಕರ್ನಾಟಕ ಸಹ ಯುಪಿ, ಬಿಹಾರ ಕಾನೂನು ಸುವ್ಯವಸ್ಥೆ ಕೆಟ್ಟಹೋಗಿದೆ ಎಂಬುದು ಸಿಎಂ ಮಾತಿನ ಅರ್ಥನಾ? ಸಿದ್ದರಾಮಯ್ಯ ಸರ್ಕಾರ ಆಗಿತ್ತು. ನಾವು ಹೀಗಿದ್ದೇವೆ ಎಂದು ಹೋಲಿಕೆ ಮಾಡಲು ನೀವು ಅಧಿಕಾರಕ್ಕೆ ಬಂದಿದ್ದೀರಾ ಎಂದು ಕಿಡಿಕಾರಿದರು.
ಸಿಎಂ ಗದ್ದುಗೆಗೆ ಗುದ್ದಾಟ: ಹೈಕಮಾಂಡ್ ಸೂಚಿಸಿದ್ರೂ ಸಿದ್ದು-ಡಿಕೆಶಿ ಪರಸ್ಪರ ಬಡಿದಾಟ, ಉಮೇಶ ಕತ್ತಿ
ಸಿಎಂ ಮಂಗಳೂರಿನಲ್ಲಿ ಮಸೂದ್, ಫಾಜಿಲ್ ಮನೆಗೆ ಹೋಗಲಿಲ್ಲ. ಬಾದಾಮಿಯಲ್ಲೂ ಕೆಲ ಸಚಿವರು ಇದೇ ರೀತಿ ಮಾಡುತ್ತಾರೆ. ಗಾಯವಾದ ತಮ್ಮ ಪಕ್ಷದವರನ್ನು ನೋಡಲು ಹೋಗುತ್ತಾರೆ. ಮುಸಿಮರನ್ನು ನೋಡಲು ಹೋಗುವುದಿಲ್ಲ. ಇವರು ಸರ್ಕಾರ ನಡೆಸಲು ಯೋಗ್ಯರಾ ಎಂದು ಅವರು ಪ್ರಶ್ನಿಸಿದರು. ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಜಿಪಂ ಮಾಜಿ ಜಿಲ್ಲಾಧ್ಯಕ್ಷರಾದ ಕೆ. ಮರೀಗೌಡ, ಕೂರ್ಗಳ್ಳಿ ಮಹದೇವ್ ಮೊದಲಾದವರು ಇದ್ದರು.
ಪುತ್ರನ ಕಾರ್ಯಕ್ಕೆ ಆಗಮನ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿರಿಯ ಪುತ್ರ ದಿವಂಗತ ರಾಕೇಶ್ ಅವರ ಪುಣ್ಯಸ್ಮರಣೆ ಕಾರ್ಯದ ನಿಮಿತ್ತ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ಆಗಮಿಸಿದ್ದರು. ಮೈಸೂರು ವಿಮಾನ ನಿಲ್ದಾಣದಿಂದ ಟಿ. ಕಾಟೂರು ಗ್ರಾಮದ ಬಳಿಯಿರುವ ತೋಟದ ಮನೆಗೆ ತೆರಳಿದದ ಸಿದ್ದರಾಮಯ್ಯ ಅವರು, ರಾಕೇಶ್ ವಾರ್ಷಿಕ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಸಂಜೆ ವೇಳೆಗೆ ಬೆಂಗಳೂರಿಗೆ ತೆರಳಿದರು.