Karnataka Politics: ಬಿಜೆಪಿ ಸರ್ಕಾರ ಕಿತ್ತೊಗೆಯಿರಿ: ಸಿದ್ದರಾಮಯ್ಯ ಕರೆ

Published : Apr 12, 2022, 06:07 AM ISTUpdated : Apr 12, 2022, 06:19 AM IST
Karnataka Politics: ಬಿಜೆಪಿ ಸರ್ಕಾರ ಕಿತ್ತೊಗೆಯಿರಿ: ಸಿದ್ದರಾಮಯ್ಯ ಕರೆ

ಸಾರಾಂಶ

*  ಬೆಲೆ ಏರಿಕೆ ಮೂಲಕ ಪ್ರಧಾನಿ ಲೂಟಿ ಮಾಡುತ್ತಿದ್ದಾರೆ *  ಪೆಟ್ರೋಲ್‌ 15, ಡೀಸೆಲ್‌ 10 ರು. ಇಳಿಕೆ ಮಾಡಿ *  ಬೊಮ್ಮಾಯಿ ಮರ್ಯಾದೆಯಿಂದ ರಾಜೀನಾಮೆ ನೀಡಿ  

ಬೆಂಗಳೂರುಏ.12):  ಪ್ರಧಾನಮಂತ್ರಿ ನರೇಂದ್ರ ಮೋದಿ(Narendra Modi) ಬೆಲೆ ಏರಿಕೆ ಮೂಲಕ ಬಡವರ ತಲೆ ಬೋಳಿಸಿ ಲೂಟಿ ಮಾಡುತ್ತಿದ್ದಾರೆ. ರೈತರ(Farmers) ಮೇಲೆ ಚಪ್ಪಡಿ ಕಲ್ಲು ಎಳೆದು ಬದುಕನ್ನೇ ಕೊಲ್ಲುತ್ತಿದ್ದಾರೆ. ಬೆಲೆ ಏರಿಕೆ ಮೂಲಕ ಬಿಜೆಪಿ ಜನರ ಮನೆಗೂ ಬೆಂಕಿ ಹಾಕಿದ್ದು, ಈ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಿಸಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕರೆ ನೀಡಿದರು.

ಬೆಲೆ ಏರಿಕೆ ವಿರುದ್ಧದ ‘ಬೆಲೆಯೇರಿಕೆ ಮುಕ್ತ ಭಾರತ’ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜನ ಹಾಗೂ ರೈತರ ಬಗ್ಗೆ ಬದ್ಧತೆ ಇದ್ದರೆ ಪ್ರತಿ ಲೀಟರ್‌ ಮೇಲಿನ ಡೀಸೆಲ್‌ ಸುಂಕವನ್ನು 10 ರು., ಪೆಟ್ರೋಲ್‌ ಸುಂಕವನ್ನು 15 ರು. ಇಳಿಸಿ ಎಂದು ಒತ್ತಾಯ ಮಾಡಿದರು.

ಅಸಮರ್ಥ, ಕೈಲಾಗಲ್ಲ ಎಂದು ಟೀಕಿಸಿದ್ದ ಸಿದ್ದರಾಮಯ್ಯಗೆ ಆರಗ ತಿರುಗೇಟು

ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರ(BJP Government) ಬೆಲೆಯೇರಿಕೆ ಮೂಲಕ ಬಡವರ ಲೂಟಿ ಮಾಡುತ್ತಿದೆ. ಇವರಿಂದ ಕೇವಲ ಕಾಂಗ್ರೆಸ್‌ನವರ ಮನೆಗಳಿಗೆ ಮಾತ್ರವಲ್ಲ ಬಿಜೆಪಿ ಬೆಂಬಲಿಸುವವರ ಮನೆಗಳಿಗೂ ಬೆಂಕಿ ಬಿದ್ದಿದೆ. ಗ್ಯಾಸ್‌ ಬೆಲೆ ಏರಿಕೆ ಮೂಲಕ ಹೆಣ್ಣಿನ ಶೋಷಣೆ ಮಾಡುತ್ತಿದ್ದಾರೆ. ಇಡೀ ಸಮಾಜ, ದೇಶದಲ್ಲಿ ದರೋಡೆ ಆಗುತ್ತಿದೆ. ಹೀಗಾಗಿ ನಿಮ್ಮಲ್ಲಿ ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ಬೆಲೆ ಏರಿಕೆಯಿಂದ ಜನರು ಮುಕ್ತವಾಗಬೇಕಾದರೆ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ರಾಜ್ಯದ(Karnataka) ಎಲ್ಲ ಜನತೆ ನಮ್ಮ ಅವಧಿಯ 2013-18ರ ಅವಧಿ ಸುವರ್ಣ ಯುಗ ಎಂದು ನೆನೆಯುತ್ತಿದ್ದಾರೆ. ಆ ಸುವರ್ಣ ಯುಗ ಮರಳಿ ಬರಬೇಕಾದರೆ ನಮ್ಮ ಕಾರ್ಯಕರ್ತರು ಪ್ರತಿ ಮನೆಗೆ ಹೋಗಿ ಬಿಜೆಪಿ ನಿಮ್ಮ ಮನೆಗೆ ಬೆಂಕಿ ಹಾಕಿದೆ ಎಂದು ಜಾಗೃತಗೊಳಿಸಬೇಕು ಎಂದು ಹೇಳಿದರು.

ಬಾಯ್ತಪ್ಪಿ ಕಾಂಗ್ರೆಸ್‌ ಕಿತ್ತೊಗೆಯಿರಿ ಎಂದ ಸಿದ್ದು!

ತಮ್ಮ ಭಾಷಣದ ನಡುವೆ ಬಾಯಿ ತಪ್ಪಿ ಸಿದ್ದರಾಮಯ್ಯ ಅವರು ಬಿಜೆಪಿ ಬದಲು ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಕರೆ ನೀಡಿದ ಘಟನೆ ನಡೆಯಿತು. ರಾಜ್ಯದಲ್ಲಿ ಜನರು, ಪ್ರಜಾಪ್ರಭುತ್ವ, ಶಾಂತಿ-ಸೌಹಾರ್ದತೆ ಉಳಿಯಬೇಕಾದರೆ ಕಾಂಗ್ರೆಸ್‌(Congress) ಕಿತ್ತೊಗೆಯಿರಿ ಎಂದರು. ಬಳಿಕ ಎಚ್ಚೆತ್ತುಕೊಂಡ ಅವರು ‘ಸಾರಿ ಕ್ಷಮಿಸಿ, ಐ ಮೀನ್‌ ಬಿಜೆಪಿ. ಬಿಜೆಪಿಯನ್ನು ಕಿತ್ತೊಗೆಯಿರಿ’ ಎಂದರು.

ಬೊಮ್ಮಾಯಿ ಮರ್ಯಾದೆಯಿಂದ ರಾಜೀನಾಮೆ ನೀಡಿ: ಸಿದ್ದರಾಮಯ್ಯ

ರಾಜ್ಯದಲ್ಲಿ ಬೆಲೆ ಏರಿಕೆ ವಿಷಯ ಮುಚ್ಚಿ ಕೋಮು ವೈಷಮ್ಯ ಸೃಷ್ಟಿಸುತ್ತಿದ್ದರೂ ಆರ್‌ಎಸ್‌ಎಸ್‌ನಿಂದ ಮುಖ್ಯಮಂತ್ರಿಯಾದ ಗಿರಾಕಿ ಬಸವರಾಜ ಬೊಮ್ಮಾಯಿ ಮೌನಿಯಾಗಿದ್ದಾರೆ. ನಿಮ್ಮಿಂದ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೋಗಿ. ನಾವು ಬಂದು ಸರಿಪಡಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಮೋದಿ ವ್ಯಾಲೆಟ್‌ಗೆ ಬಿಟ್ಕಾಯಿನ್‌ ಹೋಗಿದೆಯೇ?: ಸಿದ್ದು ಪ್ರಶ್ನೆ

ಜೆ.ಸಿ. ಮಾಧುಸ್ವಾಮಿ ಹೇಳಿದಂತೆ ಇದು ಸಂಘ ಪರಿವಾರದ ದೇಶವಲ್ಲ. ಎಲ್ಲ ಭಾರತೀಯರ ದೇಶ. ಸಮಾಜದಲ್ಲಿ ಅಶಾಂತಿ ಮೂಡಿಸಿದರೆ ಬಂಡವಾಳ ಹೂಡಿಕೆ ಆಗುವುದಿಲ್ಲ. ಜನರು ಈಗಾಗಲೇ ಆರ್ಥಿಕ ಸಂಕಷ್ಟದಿಂದ ನರಳುತ್ತಿದ್ದಾರೆ. ಈ ಹಂತದಲ್ಲಿ ಕೋಮು ದ್ವೇಷ ಸೃಷ್ಟಿಸುವ ಕೆಲಸಗಳಿಗೆ ಅವಕಾಶ ನೀಡಬೇಕು ಎಂದು ಹೇಳಿದರು.

ಬೊಮ್ಮಾಯಿಗೇ ಟಿಕೆಟ್‌ ಸಿಗೋದು ಡೌಟು:

ಬೆಂಗಳೂರು:  ಮುಂದಿನ ವಿಧಾನಸಭೆ ಚುನಾವಣೆಗೆ(Karnataka Assembly Election)  ಬಿಜೆಪಿ ಅಭ್ಯರ್ಥಿ ಆಯ್ಕೆಗಾಗಿ ಹೈಕಮಾಂಡ್‌ ನಿಗದಿಪಡಿಸಿರುವ ಮಾನದಂಡಗಳಡಿ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದರೆ ಸಚಿವರ ಜೊತೆಗೆ ಮುಖ್ಯಮಂತ್ರಿಗಳೂ ಟಿಕೆಟ್‌ ಕಳೆದುಕೊಳ್ಳುವ ಅಪಾಯವಿದೆ. ಆದರೆ, ಬಿಜೆಪಿಗೆ ನುಡಿದಂತೆ ನಡೆಯುವ ಅಭ್ಯಾಸವಿರಬೇಕಲ್ಲ? ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ವ್ಯಂಗ್ಯವಾಡಿದ್ದರು. 

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು, ಅಭ್ಯರ್ಥಿ ಆಯ್ಕೆ ಮಾಡಲು ಹೈಕಮಾಂಡ್‌ ಮೂರು ತಂಡಗಳನ್ನು ರಚಿಸಿದೆ. ಹಾಲಿ ಶಾಸಕರ ಕಾರ್ಯವೈಖರಿ, ಜನರ ಸಮಸ್ಯೆಗೆ ಸ್ಪಂದಿಸುವ ಗುಣ ಹಾಗೂ ಜನಪ್ರಿಯತೆಯ ಮಾನದಂಡಗಳನ್ನು ನಿಗದಿ ಮಾಡಿದ್ದು, ಈ ಪರೀಕ್ಷೆಯಲ್ಲಿ ಬಿಜೆಪಿಯ ಯಾವೊಬ್ಬ ಹಾಲಿ ಶಾಸಕರಾದರೂ ಪಾಸಾಗಲು ಸಾಧ್ಯವೇ? ಈ ಮಾನದಂಡ ನೋಡಿದರೆ ಬಿಜೆಪಿಗೆ(BJP) ಅಭ್ಯರ್ಥಿಗಳ ವಿಚಾರದಲ್ಲಿ ತೀವ್ರ ತತ್ವಾರ ಸೃಷ್ಟಿಯಾಗಲಿದೆ ಎಂದು ಹೇಳಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!