ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ನಾನು ಯಾವ ವಿವಾದದಲ್ಲೂ ಬೀಳಲು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ವರದಿ: ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಏ.11): ಉಡುಪಿ (Udupi) ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಬಸವರಾಜ್ ಬೊಮ್ಮಾಯಿ (Basavaraj Bommai ) ಪ್ರಸಕ್ತ ವಿದ್ಯಮಾನಗಳ ಕುರಿತು ಮಣಿಪಾಲದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ನಾನು ಯಾವ ವಿವಾದದಲ್ಲೂ ಬೀಳಲು ಬಯಸುವುದಿಲ್ಲ. ಯಾರು ಏನು ಹೇಳಿಕೆ ಕೊಡುತ್ತಾರೆ ಎಂಬುದು ಮುಖ್ಯವಲ್ಲ. ರಾಜ್ಯದ ಜನರ ಆಸ್ತಿಪಾಸ್ತಿ ಜೀವ ರಕ್ಷಣೆ ನಮ್ಮ ಕರ್ತವ್ಯ.ಯಾರು ಏನೇ ಹೇಳಿಕೆ ಕೊಟ್ಟರೂ ಶಾಂತಿ-ಸುವ್ಯವಸ್ಥೆ ಕಾಪಾಡುವ ವಿಚಾರದಲ್ಲಿ ರಾಜಿ ಇಲ್ಲ, ಯಾರೇ ಇರಲಿ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಖಡಕ್ ಸಂದೇಶ ನೀಡಿದರು.
undefined
ಪ್ರಮೋದ್ ಮುತಾಲಿಕ್ ಗಡಿಪಾರಿಗೆ ಕೇಳಿಬಂದಿರುವ ಒತ್ತಾಯದ ಕುರಿತು ಮಾತನಾಡಿದ ಸಿಎಂ, ನಾನಾ ತರಹದ ಒತ್ತಾಯಗಳು ಬರಬಹುದು. ಸುಮ್ಮನೆ ವಿವಾದವನ್ನು ಬೆಳೆಸಲು ಈ ರೀತಿ ಮಾಡುತ್ತಾರೆ. ಸಮಸ್ಯೆ ಪರಿಹಾರ ಮಾಡಲು ದಿಟ್ಟ ಕ್ರಮ ತೆಗೆದುಕೊಳ್ಳುತ್ತೇನೆ ಎಂದರು.
ಸಂಘರ್ಷದಿಂದ ಕೈಗಾರಿಕೆಗೆ ಸಮಸ್ಯೆ ಆಗಲ್ಲ: ರಾಜ್ಯದಲ್ಲಿ ಧರ್ಮ ಸಂಘರ್ಷದಿಂದ ಉದ್ದಿಮೆಗಳಿಗೆ ಹಿನ್ನಡೆ ಆಗುವುದಿಲ್ಲ.ಕೈಗಾರಿಕೆಗೆ ಸಮಸ್ಯೆಯಾಗುತ್ತದೆ ಎಂಬುದು ಸುಳ್ಳು. ರಾಜ್ಯದ ಪ್ರಸಕ್ತ ಬೆಳವಣಿಗೆಗಳಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ನಮಗೆ ವಿಪಕ್ಷಗಳಿಂದ ಕಲಿಯಬೇಕಾದ್ದು ಏನು ಇಲ್ಲ CM Basavaraj Bommai
ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಸಿಎಂ ,ಅತಿ ಹೆಚ್ಚು ಎಫ್ ಡಿ ಐ ಹೂಡಿಕೆ ನಮ್ಮ ರಾಜ್ಯಕ್ಕೆ ಬರುತ್ತಿದೆ. ಈ ಕ್ವಾರ್ಟರ್ ನಲ್ಲಿ ದೇಶದ 43 ಶೇ. ಹೂಡಿಕೆ ನಮ್ಮ ರಾಜ್ಯಕ್ಕೆ ಬಂದಿದೆ. ಪ್ರಪಂಚದ ಮೂಲೆಮೂಲೆಗಳಿಂದ ಹೂಡಿಕೆದಾರರು ಬರುತ್ತಿದ್ದಾರೆ. ಕೈಗಾರಿಕೆಗಳು ನಮ್ಮ ರಾಜ್ಯ ತೊರೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಯಥೇಚ್ಛವಾಗಿದೆ. ಮೂಲಸೌಕರ್ಯದ ಗುಣಮಟ್ಟ ಬಹಳ ಚೆನ್ನಾಗಿದೆ. ದೇಶದ ಟಾಪ್ ಆರ್ & ಡಿ ಸೆಂಟರ್ ನಮ್ಮಲ್ಲಿದೆ ಎಂದರು.
ವ್ಯಾಪಾರ ಇಲ್ಲದವರು ಆಫರ್ ಕೊಟ್ಟಂತೆ: ಅಕ್ಕಪಕ್ಕದ ರಾಜ್ಯಗಳು ಉದ್ಯಮಿಗಳಿಗೆ ಆಫರ್ ಕೊಡುತ್ತಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿಎಂ ಅಂಗಡಿಗಳಲ್ಲಿ ವ್ಯಾಪಾರ ಇಲ್ಲದಾಗ ಆಫರ್ ಕೊಡುವುದಿಲ್ಲವೇ? ಆ ರಾಜ್ಯಗಳಿಗೆ ಡಿಮಾಂಡ್ ಇಲ್ಲ. ಹಾಗಾಗಿ ಆಫರ್ ಕೊಟ್ಟು ಕರೆಯುತ್ತಿದ್ದಾರೆ ಎಂದ್ರು.
ರಾಜ್ಯಕ್ಕೆ ಕೊರೊನಾ XE, ME ರೂಪಾಂತರಿ ಭೀತಿ, ಸಚಿವ ಸುಧಾಕರ್ ತುರ್ತು ಸಭೆ
ಉಡುಪಿಯಲ್ಲಿ ಟೆಂಪಲ್ ರನ್ ನಾಡಿನ ಸುಭಿಕ್ಷೆಗೆ ಪ್ರಾರ್ಥನೆ: ಉಡುಪಿ ಜಿಲ್ಲೆಯಾದ್ಯಂತ ದಿನವಿಡಿ ಟೆಂಪಲ್ ರನ್ ಮಾಡಿದ ಸಿಎಂ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಸಗ್ರಿ ವಾಸಕ್ಕೆ ಸುಬ್ರಮಣ್ಯ ದೇವಸ್ಥಾನ, ನಾರಾಯಣ ಗುರು ಮಂದಿರ, ಮಲ್ಪೆಯ ಬಾಲಕರ ಭಜನಾ ಮಂದಿರ ಮತ್ತು ಪ್ರಸಿದ್ಧ ತೀರ್ಥ ಕ್ಷೇತ್ರ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದರು. ತನ್ನ ಟೆಂಪಲ್ ರನ್ ಕುರಿತಾಗಿ ಮಾತನಾಡಿದ ಸಿಎಂ ಇಡೀ ನಾಡಿನ ಸುಭಿಕ್ಷೆಗೆ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ.ಈ ನಾಡಿನ ಸೇವೆಮಾಡಲು ಭಗವಂತ ನನಗೆ ಆಶೀರ್ವಾದ ಮಾಡಿದ್ದಾನೆ.ರಾಷ್ಟ್ರದಲ್ಲೇ ಕರ್ನಾಟಕ ಸುಭಿಕ್ಷೆ ನಾಡಾಗಬೇಕೆಂದು ಪ್ರಾರ್ಥನೆ ಮಾಡಿದ್ದೇನೆ ಎಂದರು. ಇದೇ ವೇಳೆ ವಾಸುಕೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ನಾಗ ದೇವರ ದರ್ಶನದಲ್ಲೂ ಪಾಲ್ಗೊಂಡು ಪ್ರಸಾದ ಪಡೆದರು.
ಉಡುಪಿ ಜಿಲ್ಲೆಯ ಪ್ರವಾಸದ ಅಂಗವಾಗಿ ಇಂದು ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣನ ದರ್ಶನ ಪಡೆದುಕೊಂಡೆನು. pic.twitter.com/FaV6qG6Ngl
— Basavaraj S Bommai (@BSBommai)ನಾಳೆಯಿಂದ ಚುನಾವಣಾ ಪ್ರವಾಸ ಆರಂಭ: ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ತಯಾರಿ ಪ್ರಾರಂಭಿಸಿದ್ದೇವೆ. ನಾಳೆಯಿಂದ ಎಲ್ಲಾ ತಂಡಗಳು ರಾಜ್ಯ ಪ್ರವಾಸ ಮಾಡಲಿವೆ. ಮೂರು ತಂಡಗಳು ಮೂರು ವಿಭಾಗಗಳನ್ನು ಹಂಚಿಕೊಂಡಿವೆ.ಕಾರ್ಯಕಾರಿ ಸಮಿತಿಗೂ ಮುನ್ನ ಒಂಬತ್ತು ಸಭೆ ಮಾಡುತ್ತೇವೆ ಎಂದರು.
ಮಂಡಿನೋವಿಗೆ ಟ್ರೀಟ್ಮೆಂಟ್ ಮಾಡುತ್ತಿದ್ದೇನೆ: ಉಡುಪಿ ಜಿಲ್ಲಾ ಪ್ರವಾಸದುದ್ದಕ್ಕೂ, ಕುಂಟುತ್ತಲೇ ನಡೆದಾಡಿದ ಸಿಎಂ ತಮ್ಮ ಮಂಡಿನೋವಿನ ಬಗ್ಗೆ ಕೇಳಿದ ಪ್ರಶ್ನೆಗೂ ಉತ್ತರ ನೀಡಿದರು. ಮಂಡಿನೋವಿಗೆ ಈಗಾಗಲೇ ಟ್ರೀಟ್ಮೆಂಟ್ ತೆಗೆದುಕೊಂಡಿದ್ದೇನೆ. ನನ್ನ ಮಂಡಿನೋವು ಸಾಕಷ್ಟು ಸುಧಾರಣೆಯಾಗಿದೆ. ನೋವಿದ್ದರೆ ರಾಜ್ಯಾದ್ಯಂತ ಪ್ರವಾಸ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದರು.