ಬೊಮ್ಮಾಯಿ ಹಿಂಬಾಗಿಲಿನಿಂದ ಬಂದ ಸಿಎಂ: ಸಿದ್ದರಾಮಯ್ಯ

By Kannadaprabha News  |  First Published Sep 28, 2022, 9:35 PM IST

ಮುಖ್ಯಮಂತ್ರಿ ಆಗುವವರು ಜನರಿಂದ ಆಶೀರ್ವಾದ ಪಡೆದು ಬರಬೇಕು. ಯೂಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಮಗನಿಗೆ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಚುನಾವಣೆ ಆಗುವವರೆಗೂ ಅವರಿಗೆ ಯಾವುದೇ ಮಂತ್ರಿ ಸ್ಥಾನ ಬಿಜೆಪಿಯಲ್ಲಿ ನೀಡುವುದಿಲ್ಲ ಎಂದ ಸಿದ್ದು 


ಲೋಕಾಪುರ(ಸೆ.28): ಭ್ರಷ್ಟಾಚಾರದಲ್ಲಿ ಇಡೀ ಸರ್ಕಾರವೇ ಮುಳುಗಿದೆ. ಈ ಸರ್ಕಾರ ಜನರಿಂದ ಬಂದಂತಹ ಸರ್ಕಾರ ಅಲ್ಲ. ಬಸವರಾಜ ಬೊಮ್ಮಾಯಿ ಹಿಂಬಾಗಿಲಿನಿಂದ ಬಂದ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು. ಮುಧೋಳದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಮಾಜಿ ಸಚಿವ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಆರ್‌.ಬಿ.ತಿಮ್ಮಾಪುರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಮಾತನಾಡಿದ ಅವರು, ಮುಖ್ಯಮಂತ್ರಿ ಆಗುವವರು ಜನರಿಂದ ಆಶೀರ್ವಾದ ಪಡೆದು ಬರಬೇಕು. ಯೂಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಮಗನಿಗೆ ಮಂತ್ರಿ ಸ್ಥಾನ ಕೊಡುತ್ತೇವೆ ಎಂದು ಚುನಾವಣೆ ಆಗುವವರೆಗೂ ಅವರಿಗೆ ಯಾವುದೇ ಮಂತ್ರಿ ಸ್ಥಾನ ಬಿಜೆಪಿಯಲ್ಲಿ ನೀಡುವುದಿಲ್ಲ ಎಂದರು.

ರಾಜ್ಯದಲ್ಲಿ ಅಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಎಲ್ಲ ರಂಗಗಳಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಜನರ ಬದುಕು ದುಸ್ತರವಾಗಿದೆ. ಜನ ಸಾಮಾನ್ಯರು ಬಿಜೆಪಿ ಆಡಳಿತದಿಂದ ಬಸವಳಿದಿದ್ದಾರೆ ಎಂದು ತಿಳಿಸಿದರು.

Tap to resize

Latest Videos

undefined

ವಿಪಕ್ಷಗಳ ನಾಯಕರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ: ಸಚಿವ ಗೋವಿಂದ ಕಾರಜೋಳ

ಚಿಕ್ಕಬಳ್ಳಾಪುರದಲ್ಲಿ ಸರ್ಕಾರದ ಸಾಧನಾ ಸಮಾವೇಶದಲ್ಲಿ ಜನರಿಗೆ ದುಡ್ಡು ಕೊಟ್ಟು ಜನರನ್ನು ಕರೆಯಿಸಿ ಸಮಾವೇಶ ಮಾಡಿದ್ದೀರಿ ಏನೋ ಸಾಧನೆ ಮಾಡಿದ್ದೀರಿ? ಸರ್ಕಾರ ಬಂದು 4 ವರ್ಷವಾದರೂ ಒಂದೇ ಒಂದು ಮನೆಯನ್ನು ಬಡವರಿಗೆ ನೀಡಿಲ್ಲ. ಆದರೆ, ನಮ್ಮ ಕಾಂಗ್ರೆಸ್‌ ಸರ್ಕಾರ 15 ಲಕ್ಷ ಮನೆಗಳನ್ನು ಬಡವರಿಗೆ ಕಟ್ಟಿಸಿಕೊಟ್ಟಿದ್ದೇವೆ ಎಂದರು.

ಶೇ.40 ಕಮಿಷನ್‌ ನಾನು ಮಾಡಿದ ಆರೋಪವೆಲ್ಲ ಗುತ್ತಿಗೆದಾರರ ಅಧ್ಯಕ್ಷರು ಮಾಡಿದ್ದು, ನಿಮ್ಮದೇ ಸರ್ಕಾರ ಇದೇ ಇದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಏನು ಮಾತನಾಡುತ್ತಿಲ್ಲ. ಅಂದರೆ ಅವರಿಗೂ ಶೇ. 40 ಕಮಿಷನ್‌ ಮುಟ್ಟಿರುತ್ತದೆ ಎಂದ ಅರ್ಥವೆ?. ರೈತರಿಗೆ ನಿಂಬೆಹಣ್ಣು, ದ್ರಾಕ್ಷಿ, ಮಳೆ ಬಂದರೆ ಪರಿಹಾರ ನೀಡಿದ್ದೇವೆ. ನೀವು ಯಾರಿಗೆ ಪರಿಹಾರ ನೀಡಿದ್ದೀರಿ ಎಂದು ಜನರ ಮುಂದೆ ಹೇಳಿ ನೋಡೋಣ ಎಂದು ಸವಾಲು ಹಾಕಿದರು.

ಮಾಜಿ ಸಚಿವ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಆರ್‌.ಬಿ.ತಿಮ್ಮಾಪುರ ಮಾತನಾಡಿ, ಜನರ ಆಶೀರ್ವಾದ ನನ್ನ ಮೇಲೆ ಸದಾ ಇದೆ. ಅಧಿಕಾರ ಇಲ್ಲದೇ ನನ್ನ ಮೇಲೆ ಇಷ್ಟೊಂದು ಪ್ರೀತಿ ವಿಶ್ವಾಸಿ ಇಟ್ಟಿದ್ದೀರಿ. ನಿಮ್ಮ ಋುಣವನ್ನು ತೀರಿಸಲು ನನಗೆ ಆರ್ಶೀರ್ವದಿಸಿ ಎಂದು ಕಾರ್ಯಕರ್ತರಿಗೂ ಶಿಷ್ಟಾಂಗ ನಮಸ್ಕರಿಸಿದರು.

ಗವಿಮಠದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಸಚಿವರಾದ ಉಮಾಶ್ರೀ, ಎಂ.ಬಿ.ಪಾಟೀಲ, ಕೆಪಿಸಿಸಿ ಜಿಲ್ಲಾಧ್ಯಕ್ಷ ಎಸ್‌.ಜಿ.ನಂಜಯ್ಯನಮಠ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ರಾಮಲಿಂಗಾರಡ್ಡಿ, ವಿಪ ಸದಸ್ಯ ಪ್ರಕಾಶ ಹುಕ್ಕೇರಿ, ವೀರಕುಮಾರ ಪಾಟೀಲ, ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಅಜಯಕುಮಾರ ಸರನಾಯಕ, ಜೆ.ಟಿ.ಪಾಟೀಲ, ಎಚ್‌.ವೈ.ಮೇಟಿ, ಕೆಪಿಸಿಸಿ ತಾಲೂಕಾಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ಅಶೋಕ ಕಿವಡಿ, ಸತೀಶ ಬಂಡಿವಡ್ಡರ, ಶಿವಾನಂದ ಉದಪುಡಿ, ಸಂಜೀವ ನಾಯ್ಕ, ವೀಣಾ ಕಾಶಪ್ಪನವರ, ಗುರುರಾಜ ಉದಪುಡಿ, ಲೋಕಣ್ಣ ಕೊಪ್ಪದ, ದಾನೇಶ ತಡಸಲೂರ, ವಿನಯ ತಿಮ್ಮಾಪುರ, ಪರಮಾನಂದ ಕುಟರಟ್ಟಿ, ತಿಮ್ಮಾಪುರ ಅಭಿಮಾನ ಬಳಗದ ಸರ್ವಸದಸ್ಯರು ಹಾಗೂ ಕಾಂಗ್ರೆಸ್‌ ಪಕ್ಷದ ಅಪಾರ ಕಾರ್ಯಕರ್ತರು ಇದ್ದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನೀರಾವರಿಗೆ 2 ಲಕ್ಷ ಕೋಟಿ: ಸಿದ್ದರಾಮಯ್ಯ

ಜನಸೇವೆ ಮಾಡಬೇಕಿದ್ದರೆ ಅಧಿಕಾರ ಬೇಕಿಂದಿಲ್ಲ. ಅಧಿಕಾರ ಇಲ್ಲದೇ ತಿಮ್ಮಾಪುರ ಅವರು ಇಷ್ಟೊಂದು ಕಾರ್ಯಕರ್ತರ ಅಭಿಮಾನ ಬಳಗವನ್ನು ಹೊಂದಿದ್ದು ಕಾಂಗ್ರೆಸ್‌ ಪಕ್ಷಕ್ಕೆ ಒಂದು ದೊಡ್ಡ ಆಶ್ರಯ. ಕಾಂಗ್ರೆಸ್‌ ಪಕ್ಷ ತಿಮ್ಮಾಪುರ ಅವರಿಗೆ ನೀಡಿದ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ.

ಸಿದ್ದರಾಮಯ್ಯ ಮಾಜಿ ಸಿಎಂ

ಮಾಜಿ ಸಚಿವ ಹಾಗೂ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಆರ್‌.ಬಿ.ತಿಮ್ಮಾಪುರ ಮಾತನಾಡಿ, ಜನರ ಆಶೀರ್ವಾದ ನನ್ನ ಮೇಲೆ ಸದಾ ಇದೆ. ಅಧಿಕಾರ ಇಲ್ಲದೇ ನನ್ನ ಮೇಲೆ ಇಷ್ಟೊಂದು ಪ್ರೀತಿ ವಿಶ್ವಾಸಿ ಇಟ್ಟಿದ್ದೀರಿ. ನಿಮ್ಮ ಋುಣವನ್ನು ತೀರಿಸಲು ನನಗೆ ಆರ್ಶೀರ್ವದಿಸಿ ಎಂದು ಕಾರ್ಯಕರ್ತರಿಗೂ ಶಿಷ್ಟಾಂಗ ನಮಸ್ಕಾರ ಅಂತ  ಮಾಜಿ ಸಚಿವ ಆರ್‌.ಬಿ.ತಿಮ್ಮಾಪುರ ತಿಳಿಸಿದ್ದಾರೆ. 
 

click me!