ಕೇಂದ್ರ ಹಣಕಾಸು ಸಚಿವರನ್ನ ಭೇಟಿಯಾದ ಸಂಸದೆ ಶೋಭಾ ಕರಂದ್ಲಾಜೆ

By Suvarna News  |  First Published Nov 25, 2020, 9:42 PM IST

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರನ್ನ ಭೇಟಿ ಮಾಡಿ ಮಹತ್ವದ ಮನವಿ ಮಾಡಿದ್ದಾರೆ.


ಉಡುಪಿ, (ನ.25): ದೀಪಾವಳಿ ಹಬ್ಬದ ಪ್ರಯುಕ್ತ ಸ್ಥಳೀಯವಾಗಿ ಉಡುಪಿ ಸೀರೆಗಳನ್ನು ಖರೀದಿಸಿ ಬಿಜೆಪಿ ನಾಯಕಿಯರಿಗೆ ಉಡುಗೊರೆ ನೀಡು ಶುಭ ಕೋರಿ ಸುದ್ದಿಯಾಗಿದ್ದ ಸಂಸದೆ ಸಂಸದೆ ಶೋಭಾ ಕರಂದ್ಲಾಜೆ ಇದೀಗ ಸುದ್ದಿಯಲ್ಲಿದ್ದಾರೆ.

ಹಲವು ದಿನಗಳಿಂದ ಮಾಧ್ಯಮಗಳಲ್ಲಿ ಸುದ್ದಿ ಇಲ್ಲದೇ ಸೈಲೆಂಟ್ ಆಗಿದ್ದ  ಸಂಸದೆ ಸಂಸದೆ ಶೋಭಾ ಕರಂದ್ಲಾಜೆ ಇದೀಗ ಸುದ್ದಿಯಾಗಿದ್ದು,  ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನ ಭೇಟಿ ಮಾಡಿ ಕಾಫಿ ಬೆಳೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  

Tap to resize

Latest Videos

ಸಿಎಂ ಆದರಲ್ಲ ಇನ್ನೇನು ಆ ದರ್ದು ಇಲ್ಲ, ಮುಂದೆ ನೋಡ್ಕೋತೀವಿ ಎಂದ ಬಿಜೆಪಿ ನಾಯಕ

ಕಳೆದ ಕೆಲವು ವರ್ಷಗಳಿಂದ ಮಲೆನಾಡಿನ ಕಾಫಿ ಬೆಳೆಗಾರರು ಅತಿವೃಷ್ಟಿ, ಅನಾವೃಷ್ಟಿ, ಕಾರ್ಮಿಕರ ಸಮಸ್ಯೆ, ಬೆಳೆಗೆ ತಕ್ಕ ಬೆಲೆ ಇಲ್ಲದಿರುವುದು ಸೇರಿದಂತೆ ಒಂದಲ್ಲಾ ಒಂದು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಂದ ಕಾಫಿ ಉದ್ಯಮವೇ ಬಲವಳಿದಿದೆ. ಆದ್ದರಿಂದ ಈ ಉದ್ಯಮವನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಪರಿಹಾರ, ಸಾಲ ನೀತಿಗಳನ್ನು ಕೈಗೊಳ್ಳಬೇಕು ಎಂದು ವಿತ್ತ ಸಚಿವರನ್ನು ಸಂಸದೆ ಆಗ್ರಹಿಸಿದರು.

 ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ವಿತ್ತ ಸಚಿವರು, ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಬದ್ಧವಾಗಿದೆ. ಈ ಸಮಸ್ಯೆಗಳಿಗೆ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಭರವಸೆಯನ್ನು ನೀಡಿದರು ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

click me!