ಬಿಜೆಪಿಯವರಿಗೆ ಮಾನ ಮರ್ಯಾದೆ ಏನೂ ಇಲ್ಲ, ಲಜ್ಜೆಗೆಟ್ಟವರು, ಬಿಜೆಪಿ ತೊಲಗಲೇ ಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಮಾ.10): ಬಿಜೆಪಿಯವರಿಗೆ ಮಾನ ಮರ್ಯಾದೆ ಏನೂ ಇಲ್ಲ, ಲಜ್ಜೆಗೆಟ್ಟವರು, ಬಿಜೆಪಿ ತೊಲಗಲೇ ಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 45 ದಿನಗಳು ಮಾತ್ರ ಚುನಾವಣೆಗೆ ಬಾಕಿ ಇದೆ, ಮಾರ್ಚ್27 ಅಥವಾ 28 ರಂದು ಚುನಾವಣೆ ಘೋಷಣೆ ಆಗಬಹುದು. ನೀವು ಹೊಸ ಜನಪ್ರತಿನಿಧಿಯನ್ನು ಆಯ್ಕೆ ಮಾಡ್ಬೇಕಾಗಿದೆ. ಯಾರೇ ಸಿಎಂ ಆಗಿದ್ರು ರಾಜೀನಾಮೆ ಕೊಡ್ತಿದ್ರು, ಅದ್ರೆ ಈ ಸರ್ಕಾರದ ವಿರುದ್ಧ ಭ್ರಷ್ಟಾಚಾರ ದುರಾಡಳಿದ ಬಗ್ಗೆ ಪ್ರಶ್ನೆ ಮಾಡಿದ್ರು ಕೂಡ ಸಿಎಂ ಬೊಮ್ಮಾಯಿಯವರು ರಾಜೀನಾಮೆ ನೀಡಲಿಲ್ಲ, 40 % ಕಮಿಷನ್ ಬಗ್ಗೆ ಬಸವರಾಜ್ ಬೊಮ್ಮಾಯಿಯವರು ಹಾಗೂ ಬಿಜೆಪಿ ಮುಖಂಡರು ದಾಖಲೆ ಕೇಳಿದ್ರು, ನಾನು ಹೇಳಿದ್ದೆ ಬೊಮ್ಮಾಯಿ ನೀನು ಅಚಾನಕ್ ಆಗಿ ಸಿಎಂ ಆಗಿದ್ದೀಯಾ ಎಂದು, 100 ಕ್ಕೆ 100 ಸುಳ್ಳು ಹೇಳುವ ಅಭ್ಯಾಸ ಮಾಡಿಕೊಂಡಿದ್ದೀಯ ಎಂದು ಹೇಳಿದ್ದೆ.
ಮೋದಿಗೆ ಗುತ್ತಿಗೆದಾರರ ಸಂಘದವರು ಪತ್ರ ಬರೆದ್ರು ಕ್ರಮ ಇಲ್ಲ:
ಬಿಜೆಪಿ ಸರ್ಕಾರದಲ್ಲಿ ಕಿರುಕುಳ ತಡೆಯಲಾಗ್ತಿಲ್ಲ, 40% ಕಮಿಷನ್ ಬೇಡಿಕೆ ಇಡುತ್ತಿದ್ದಾರೆಂದು ಗುತ್ತಿಗೆದಾರರ ಸಂಘದವರು ಮೋದಿಗೆ ಪತ್ರ ಬರೆದ್ರು ಕ್ರಮ ಆಗಲಿಲ್ಲ. ಕರ್ನಾಟಕದ ಇತಿಹಾಸದಲ್ಲೇ ಗುತ್ತಿಗೆದಾರರ ಸಂಘದವರು ಯಾವಾಗಲೂ ಪತ್ರ ಬರೆದಿಲ್ಲ, ಅನುದಾನ ಕೇಳಿದ್ರೆ ಕಮಿಷನ್ ಕೇಳ್ತಾರೆಂದು ರೂಪ್ಸಾ ಸಂಘಟನೆಯವರು ಕೂಡ ಪಿಎಂಗೆ ಪತ್ರ ಬರೆದಿದ್ದಾರೆ, ಇನ್ನು ಬಿಜೆಪಿಯವರು ಮಠದ ಅನುದಾನದಲ್ಲೂ ಕಮಿಷನ್ ಕೇಳ್ತಾರೆಂದು ಸ್ವಾಮೀಜಿ ಒಬ್ಬರು ಹೇಳಿದ್ದಾರೆ. ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಇದೇ ವಿಚಾರವಾಗಿ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ, ಸಾಲ ಮಾಡಿದ್ದಾ ಕಾಮಗಾರಿ ಬಿಲ್ ಸಿಗದಿದ್ದಕ್ಕೆ ಮಾಜಿ ಸಚಿವ ಕೆಎಸ್ ಈಶ್ವರಪ್ಪಗೆ ಕಮಿಷನ್ ಕೊಡುವ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡ, ಈಶ್ವರಪ್ಪ ರಾಜೀನಾಮೆಗೆ ಧರಣಿ ಕೂತೆವು ಆಗ ಈಶ್ವರಪ್ಪ ರಾಜೀನಾಮೆ ಕೊಟ್ರು , ಎಂದು ವಾಗ್ದಾಳಿ ನಡೆಸಿದರು.
ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾನೆ ಎಂದು ಹೇಳಿದವ ಗಿರಾಕಿ ಎಂಟಿಬಿ ನಾಗರಾಜ್:
ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾನೆ ಎಂದು ಹೇಳಿದವ ಗಿರಾಕಿ ಎಂಟಿಬಿ ನಾಗರಾಜ್ ಕೂಡ ಪಿಎಸ್ಐ ನಂದೀಶ್ ಎಂಬುವ ಕೆಆರ್ ಪುರಂ ಠಾಣೆಗೆ 70 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡಿದ್ದ, ಸಾಲ ಮಾಡಿಕೊಂಡಿದ್ದ ಅದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಎಂಟಿಬಿ ಹೇಳಿಕೆ ನೀಡಿದ್ದ, 2500 ಕೋಟಿ ಕೊಟ್ರೆ ಸಿಎಂ ಆಗಬಹುದೆಂದು ಶಾಸಕ ಯತ್ನಾಳ್ ಹೇಳ್ತಾನೆ, ಪಿಎಸ್ ಆಯ್ಕೆಯಲ್ಲಿ ಯಡಿಯೂರಪ್ಪ ನವರ ಪುತ್ರ ವಿಜಯೇಂದ್ರರವರ ಮೂಗಿನ ನೇರಕ್ಕೆ ಇದೆ ಎಂದು ಯತ್ನಾಳ್ ಹೇಳ್ತಾನೆ, ಇಷ್ಟು ಇದ್ರು ಬಿಜೆಪಿಯವರು ಮಾನಗೆಟ್ಟವರು ಜನ್ರ ಬಳಿ ಹೋಗ್ತಾರೆ, ಬಿಜೆಪಿಯವರು ಮೂರಕ್ಕೆ ಬಿಟ್ಟವರು ಊರಿಗೆ ದೊಡ್ಡವರು ಎಂದು ವ್ಯಂಗ್ಯವಾಡಿದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪನನ್ನು ಹೇಗೆ ಆಯ್ಕೆ ಮಾಡಿದ್ರಪ್ಪ ನೀವು...?
ಶಾಸಕ ಮಾಡಾಳ್ ವಿರೂಪಾಕ್ಷಪ್ಪನನ್ನು ಹೇಗೆ ಆಯ್ಕೆ ಮಾಡಿದ್ರಪ್ಪ ನೀವು ಎಂದು ಮಾತು ಆರಂಭಿಸಿದ ಸಿದ್ದರಾಮಯ್ಯ, ಮಾಡಾಳ್ ವಿರೂಪಾಕ್ಷಪ್ಪನ ಮಗ ಪ್ರಶಾಂತ್ ಮಾಡಾಳ್ ಸರ್ಕಾರಿ ಅಧಿಕಾರಿ, ಅವನ ಮನೆ ಲೋಕಾಯುಕ್ತ ದಾಳಿ ಮಾಡಿದ್ರೆ ಆರು ಕೋಟಿ ಹತ್ತು ಲಕ್ಷ ಹಣ ಸಿಕ್ಕಿದೆ. ಅ ಗಿರಾಕಿ ಕೆಎಸ್ ಡಿಎಲ್ ಟೆಂಡರ್ ನೀಡಲು ನಲವತ್ತು ಲಕ್ಷ ಪಡೆಯುವಾಗ ಲೋಕಾಯುಕ್ತಗೆ ಸಿಕ್ಕಾಕಿಕೊಂಡ, ಅಪ್ಪ ವಿರೂಪಾಕ್ಷಪ್ಪ ಹೇಳಿದಂತೆ ಹಣವನ್ನು ಮಗ ತೆಗೆದುಕೊಂಡಿದ್ದಾನೆ. ಕೆಎಸ್ ಡಿಎಲ್ ಚೇರ್ಮನ್ ಆಗಿರುವುದು ಮಾಡಾಳ್ ವಿರೂಪಾಕ್ಷಪ್ಪ, ಈ ಗಿರಾಕಿ ಒಂದೇ ದಿನದಲ್ಲಿ ಜಾಮೀನು ಪಡೆದು ಮೆರವಣಿಗೆ ಮಾಡಿಕೊಂಡು ಬಂದ್ನಲ್ಲ ಇವನು ಶಾಸಕನಾಗಲು ನಾಲಯಕ್, ಇವನ್ನು ಭ್ರಷ್ಟ ಶಾಸಕನಾಗ್ಬೇಕಾ, ಕೋರ್ಟ್ ಜಾಮೀನು ಕೊಟ್ಟಿದೆ. ನಿಮ್ಮ ಕೋರ್ಟ್ ಜನತಾ ನ್ಯಾಯಾಲಯ ಶಿಕ್ಷೆ ಕೊಡ್ಬೇಕು ವಿರೂಪಾಕ್ಷಪ್ಪನವರಿಗೆ ಸೋಲಿನ ರುಚಿ ತೋರಿಸ್ಬೇಕು, ನನ್ನ ಜೀವನದಲ್ಲಿ ನೋಡೇ ಇಲ್ಲ ಜಾಮೀನು ಪಡೆಯಲು ಸಿಎಂ ಬೊಮ್ಮಾಯಿಯವರು ಸರ್ಪೋಟ್ ಮಾಡಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಪೋಲಿಸರು ಸಿಎಂ ಹೇಳಿದಂತೆ ಕೇಳಿದ್ದಾರೆ. ತಕ್ಷಣನೇ ಮನೆ ಮೇಲೆ ದಾಳಿ ಮಾಡಿದ್ದಾರೆ ಇನ್ನು ಹಣ ಸಿಗುತ್ತಿತ್ತು, ಅದ್ರೇ ಅದು ಆಗಾಲಿಲ್ಲ ಎಂದು ಮಾಡಾಳ್ ವಿರೂಪಾಕ್ಷಪ್ಪನವರ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಸುಮಲತಾ ಬೆಂಬಲ, ಅದೇನ್ ಅಚ್ಚರಿ ಸುದ್ದಿ ಅಲ್ಲ ಎಂದ್ರು ಹೆಚ್‌ಡಿಕೆ
ವಡ್ನಾಳ್ ರಾಜಣ್ಣಗೆ ಈ ಬಾರಿ ಟಿಕೆಟ್:
ಮಾಜಿ ಶಾಸಕ ವಡ್ನಾಳ್ ರಾಜಣ್ಣ ನಿಗೆ ಟಿಕೆಟ್ ಕೊಡಲು ಇಚ್ಚಿಸಿದ್ದೇವೆ, ಅವರು ಚುನಾವಣೆಗೆ ಸ್ಪರ್ಧಿಸಲು ತಯಾರಿದ್ದರೇ ಅವರಿಗೆ ಟಿಕೆಟ್ ಕೊಡ್ತೇವೆ, ಆದ್ರೆ ಎಂಟು ಜನ ಆಕಾಂಕ್ಷಿಗಳಿದ್ದಾರೆ, ಆದ್ರೆ ಟಿಕೆಟ್ ಕೊಡಲು ಬರುವುದು ಒಬ್ಬರಿಗೆ ಮಾತ್ರ, ಆದ್ರೆ ಮನೆಯಲ್ಲಿ ಸಮಸ್ಯೆ ಹಾಗು ಆರೋಗ್ಯ ಚೆನ್ನಾಗಿಲ್ಲ ಎಂದು ನನ್ನ ಗಮನಕ್ಕೆ ತಂದಿದ್ರು, ಆದ್ರೆ ಸ್ಪರ್ಧೆ ಮಾಡಿದ್ರು ಟಿಕೆಟ್ ಕೊಡುವೆ ಎಂದರು.
ಕಮಲಕ್ಕೆ ಸುಮಲತಾ ಬೆಂಬಲ, ಮಂಡ್ಯದಲ್ಲಿ ಕಮಲ ಕಿಲ ಕಿಲ ಸಿಎಂ ಬೊಮ್ಮಾಯಿ ಹರ್ಷ
ಜೆಡಿಎಸ್ ನವರನ್ನು ನಂಬಬೇಡಿ:
ಜೆಡಿಎಸ್ ನವರು ಗೆದ್ದ ಬಳಿಕ ಎತ್ತಿನ ಬಾಲ ಹಿಡಿಯುವರು, ಜೆಡಿಎಸ್ ನವರು ಬಹುಮತ ಬರಬಾರದೆಂಬ ಇಚ್ಚೇ ಇರುವವರು ಇವರು, ಕಾಂಗ್ರೆಸ್ ಬಿಜೆಪಿ ಮಧ್ಯೆ ಅಧಿಕಾರದ ಜಪ ಮಾಡುವವರು, ಅವರಿಗೆ ಸಿಎಂ ಆಗಲು ಅವಕಾಶ ಕೊಟ್ಟಿದ್ವೀ, ಅದ್ರೇ ಅವರು ಅಧಿಕಾರ ನಡೆಸಿದ್ದು ತಾಜ್ ವೆಸ್ಟ್ ಎಂಡ್ ಹೋಟೇಲ್ ನಿಂದ ಮಾತ್ರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಯವರಿಗೆ ಟಾಂಗ್ ನೀಡಿದರು.