ಕಮಲಕ್ಕೆ ಸುಮಲತಾ ಬೆಂಬಲ, ಮಂಡ್ಯದಲ್ಲಿ‌ ಕಮಲ‌ ಕಿಲ‌ ಕಿಲ ಸಿಎಂ‌ ಬೊಮ್ಮಾಯಿ ಹರ್ಷ

By Gowthami K  |  First Published Mar 10, 2023, 8:41 PM IST

ಸುಮಲತಾ ಅಂಬರೀಶ್‌ ಬೆಂಬಲದಿಂದ ಮಂಡ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈಗ ಬಹಿರಂಗವಾಗಿ ಬೆಂಬಲ ಕೊಟ್ಟಿದ್ದಾರೆ ಸ್ವಾಗತ ಮಾಡುತ್ತಾನೆ ಎಂದಿದ್ದಾರೆ. 


 ವರದಿ: ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಹಾವೇರಿ (ಮಾ.10): ಸುಮಲತಾ ಅಂಬರೀಶ್‌ ಬೆಂಬಲದಿಂದ ಮಂಡ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ಬರುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿಗ್ಗಾವಿಯಲ್ಲಿ ಮಾದ್ಯಮದವರಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ,  ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸುಮಲತಾ ಪ್ರಧಾನಿ ಮೋದಿಯವರ‌ ಹಲವು ಕಾರ್ಯಕ್ರಮ ಬೆಂಬಲಿಸಿಕೊಂಡು ಬಂದಿದ್ದರು. ಮೋದಿಯವರು ಅವರ ಕ್ಷೇತ್ರಕ್ಕೆ ಹಾಗೂ ರಾಜ್ಯಕ್ಕೆ ಕೊಟ್ಟಂತಹ ರೈಲ್ವೆ ಯೋಜನೆ ಸೇರಿದಂತೆ ಹಲವು ಯೋಜನೆಗಳನ್ನ ಕೊಟ್ಟಿರುವುದನ್ನ ನೋಡಿಕೊಂಡು ಸದನದ ಒಳಗೆ ಹೊರಗೆ  ಬೆಂಬಲ ಕೊಟ್ಟಿದ್ದರು. ಈಗ ಬಹಿರಂಗವಾಗಿ ಬೆಂಬಲ ಕೊಟ್ಟಿದ್ದಾರೆ ಸ್ವಾಗತ ಮಾಡುತ್ತಾನೆ. ಸುಮಲತಾ ಬೆಂಬಲದಿಂದ ಖಂಡಿತವಾಗಿಯೂ ಮಂಡ್ಯ ಭಾಗದಲ್ಲಿ ಶಕ್ತಿ ಬರುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.

Tap to resize

Latest Videos

undefined

ಕಿರಾಣಿ ಅಂಗಡಿಗಳು ನೀಡುವ ಸೇವೆ ಮಾಲ್ ಗಳು ನೀಡುವುದಿಲ್ಲ: ಬೊಮ್ಮಾಯಿ
ಕಿರಾಣಿ ಅಂಗಡಿ ನೀಡುವ ಸೇವೆ ಮಾಲ್ ಗಳು ನೀಡಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾವೇರಿಯಲ್ಲಿ ತಿಳಿಸಿದರು. ಅವರು ಇಂದು ಕಿರಾಣಿ ವ್ಯಾಪಾರಸ್ಥರ ಸಂಘವನ್ನು ಉದ್ಗಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾಲ್ ಗಳು ಶಾಪಿಂಗ್  ಕಾಂಪ್ಲೆಕ್ಸ್ ಗಳು ಬಂದಿವೆ. ಸ್ವಲ್ಪ ದಿನ ವ್ಯಾಪಾರ ಚೆನ್ನಾಗಿ ಆದರೂ ಸ್ವಲ್ಪ ದಿನಗಳಲ್ಲಿ ಕಡಿಮೆಯಾಗುತ್ತದೆ ಏನೇ ಬಂದರೂ . ಕಿರಾಣಿ ಅಂಗಡಿ ವ್ಯಾಪಾರ ಕಡಿಮೆಯಾಗುವುದಿಲ್ಲ. ಕಾಳು ಕಡಿ ಕೊಳ್ಳುವವರು ಹೆಚ್ಚಿದ್ದಾರೆ, ದರ ಮತ್ತು ತೂಕ ಸರಿಯಾಗಿ ನೀಡಿದರೆ ಗ್ರಾಹಕರು ಸಂತೋಷದಿಂದಿರುತ್ತಾರೆ ಎಂದರು.

 ಕಮಲ ಹಿಡಿದ ಸುಮಲತಾ ಅಂಬರೀಶ್‌, ಆಪ್ತರ ಸಮ್ಮುಖದಲ್ಲಿ ಬೆಂಬಲವಷ್ಟೇ ಘೋಷಣೆ!

ಕಿರಾಣಿ ಅಂಗಡಿಗಳ ಸೇವೆ:
ಶಿಗ್ಗಾಂವ್ ಸುತ್ತಮುತ್ತಲಲ್ಲಿ ಕಿರಾಣಿ ಅಂಗಡಿಗಳು ಸೇವೆ ಮಾಡಿಕೊಂಡು ಬಂದಿವೆ. ಹಳ್ಳಿಯ ಜನ ಮಾರುಕಟ್ಟೆಗೆ ಬಂದಾಗ ಅವರಲ್ಲಿ ಇಂಥ ಕಡೆ ತೂಕ, ಗುಣಮಟ್ಟ ಸರಿ ಇರುತ್ತದೆ ಎಂದು  ವಿಶ್ವಾಸ ಗಳಿಸಿಕೊಂಡಿದ್ದೀರಿ. ಬಹಳಷ್ಟು ಅಂಗಡಿಗಳಿಗೆ ಖಾಯಂ ಗಿರಾಕಿಗಳಿದ್ದಾರೆ. ಇದಲ್ಲದೇ ಹಳ್ಳಿ ಜನ ಕುಳಿತು ಮಾತನಾಡುವ ಕೇಂದ್ರ ಸ್ಥಳವೂ ಹೌದು ಹಾಗೂ ಕೆಲವೊಮ್ಮೆ  ಕಿರಾಣಿ ಅಂಗಡಿಗಳಲ್ಲಿ ರಾಜಕೀಯವೂ ಹುಟ್ಟುತ್ತದೆ  ನಗೆ ಚಟಾಕಿ ಹಾರಿಸಿದರು.

ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ನನ್ನ ಮೇಲೆ ಹಲ್ಲೆಯಾಗಿತ್ತು, ಜೆಡಿಎಸ್‌ ವಿರುದ್ಧ ಹರಿಹಾಯ್ದ ಸುಮಲತಾ!

ಅಗತ್ಯವಿದ್ದಷ್ಟು ಮಾತ್ರ ಲಾಭ ಮಾಡಿ
 ಹಿರಿಯರು ಬಹಳ ಉತ್ತಮ ಸೇವೆಯನ್ನು  ಮಾಡಿಕೊಂಡು ಬಂದಿದ್ದಾರೆ. ಯುವಕರು ಸೇರಿ ಹೊಸ ಸಂಘವನ್ನು ಕಟ್ಟಿದ್ದಾರೆ.  ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆದು ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ  ಅವರಿಗೆ ಒಳ್ಳೆಯ ಪದಾರ್ಥ ದೊರೆಯಬೇಕು ಹಾಗೂ ನಿಮಗೆ ಲಾಭವಾಗಬೇಕು. ಲಾಭ ದೊದ್ದ ಪ್ರಾಮಾಣದಲ್ಲಿ ಮಾಡಲು ಹೋದರೆ ವ್ಯಾಪಾರ ಕಡಿಮೆಯಾಗುತ್ತದೆ.  ಅಗತ್ಯವಿದ್ದಷ್ಟು ಮಾತ್ರ ಲಾಭ ಇಟ್ಟುಕೊಂಡರೆ ನಿಯಮಿತವಾಗಿ ವ್ಯಾಪಾರವಾಗುತ್ತದೆ. ಆ ನಿಟ್ಟಿನಲ್ಲಿ ಶಿಗ್ಗಾಂವಿಯ ಹಿರಿಯ ವರ್ತಕರು ಬಹಳ ಉತ್ತಮ ಹೆಸರು ಮಾಡಿದ್ದು, ಅದೇ ರೀತಿ ನೀವೂ ಕೂಡ ಇರಬೇಕು ಎಂದು ಸಲಹೆ ನೀಡಿದರು.

click me!