ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು: ಶ್ರೀರಾಮುಲು ಹೀಗೆ ಹೇಳಿದ್ಯಾಕೆ?

By Girish Goudar  |  First Published Aug 16, 2022, 10:59 AM IST

ಸಿದ್ದರಾಮಯ್ಯ ಪರ ಸಚಿವ ಶ್ರೀರಾಮುಲು ಬ್ಯಾಟಿಂಗ್‌, ನಾವಿಬ್ಬರೂ ರಾಜಕಾರಣದಲ್ಲಿ ಇರಬೇಕು, ನಾವಿಬ್ಬರೂ ವಿಧಾನಸೌಧದ ಒಳಗೂ ಇರಬೇಕು: ರಾಮುಲು


ಬಳ್ಳಾರಿ(ಆ.16):  ಸದಾ ಸಿದ್ದರಾಮಯ್ಯ ವಿರುದ್ಧ ಟಿಕೆ ಮಾಡೋ ಸಚಿವ ಬಿ. ಶ್ರೀರಾಮುಲು‌ ಇದೀಗ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಹೇಳುವ ಮೂಲಕ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ್ದಾರೆ. ಶ್ರೀರಾಮುಲು ಕುರುಬ ಸಮುದಾಯ, ಸಿದ್ದರಾಮಯ್ಯ ವಿರೋಧಿಯಲ್ಲ. ಅವಕಾಶ ಬಂದ್ರೆ‌ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ‌ ನನಗೂ ಇದೆ. ನಾನು ಸಿಎಂ ಆಗಬೇಕು ಅನ್ನೋದನ್ನ ಸಿದ್ದರಾಮಯ್ಯ ಕೂಡ ಒಪ್ಪುತ್ತಾರೆ ಅಂತ ಹೇಳುವ ಸಿಎಂ ಕುರ್ಚಿಯ ಮೇಲೆ ಶ್ರೀರಾಮುಲು ಕಣ್ಣಿಟ್ಟಿದ್ದಾರೆ. 

ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು, ದೊಡ್ಡ ರಾಜಕೀಯ ವ್ಯವಸ್ಥೆಯಲ್ಲಿ ರಾಜಕೀಯ ತಂತ್ರಗಳನ್ನ ಮಾಡಲೇಬೇಕು. ಮುಂದೊಂದು ದಿನ ನಾನು ಸಿದ್ದರಾಮಯ್ಯ ಮತ್ತು ಶ್ರೀರಾಮುಲು ಒಂದೇ ವೇದಿಕೆಯಲ್ಲಿ ಬರುವವರು. ಹಿಂದುಳಿದ ಜಾತಿಗಳನ್ನ ಒಂದು ಮಾಡುವ ಪ್ರಯತ್ನವನ್ನ ನಾನು ಮತ್ತು‌ ಸಿದ್ದರಾಮಯ್ಯ ಮಾಡುತ್ತಿದ್ದೇವೆ. ನಾನು ಮತ್ತು ಸಿದ್ದರಾಮಯ್ಯ ಎರಡು ಪ್ರತ್ಯೇಕ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ವಿ. ನಾವಿಬ್ಬರು ಒಂದೊಂದು ಕ್ಷೇತ್ರದಲ್ಲಿ ಗೆದ್ದಿದ್ದೇವೆ. ಹೇಗೆ ಅನ್ನೋದನ್ನ ಮುಂದೊಂದು ದಿನ ಹೇಳುವೆ ಅಂತ ತಿಳಿಸಿದ್ದಾರೆ. 

Tap to resize

Latest Videos

undefined

ಶ್ರೀರಾಮುಲು ಹಂಗಿನಲ್ಲಿ ನಾನಿಲ್ಲ, ಅವರಿಗೆ ಸಂಸ್ಕಾರ ಇಲ್ಲ: ನಾಗೇಂದ್ರ

ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಲ್ಲಿ ಹೇಗೆ ಗೆದ್ರು ಅನ್ನೋದನ್ನ ಹೋಗಿ ಅವರನ್ನ ಕೇಳಿ ಪರೋಕ್ಷವಾಗಿ ಸಿದ್ದರಾಮಯ್ಯ ಗೆಲ್ಲಲು ಶ್ರೀರಾಮುಲು‌ ಸಹಕಾರ ಮಾಡಿದ್ರಂತೆ. ನಾನು ಸಿದ್ದರಾಮಯ್ಯ ವಿರೋಧಿಯಲ್ಲ. ನೋಡೋಕೆ ಮಾತ್ರ ನಾವೂ ವಿರುದ್ಧ. ನಮ್ಮ ದೋಸ್ತಿ ಬೇರೇನೆ ಇದೆ. ಒಳಗೊಳಗೆ ನಾವೂ ಏನೋ ಮಾಡಿಕೊಳ್ಳುತ್ತೇವೆ. ಅದೆಲ್ಲಾ ನಿಮ್ಮಗ್ಯಾಕೆ..? ನಿಮಗೆ ಗೊತ್ತಗಲ್ಲ ಅಂತ ಹೇಳುವ ಮೂಲಕ ಸಿದ್ದರಾಮಯ್ಯ ಪರ ರಾಮುಲು ಬ್ಯಾಟಿಂಗ್‌ ಮಾಡಿದ್ದಾರೆ. 
 

click me!