ಸಚಿವರಾದ ಮಾಧುಸ್ವಾಮಿ, ಎಸ್.ಟಿ. ಸೋಮಶೇಖರ್ ನಡುವೆ ನಡೆದ ಟಾಕ್ ವಾರ್ ಕುರಿತು ಅವರು ಪ್ರತಿಕ್ರಿಯೆ ನೀಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ
ಚಿಕ್ಕಮಗಳೂರು(ಆ.16): ಕಾಂಗ್ರೆಸ್ ಕಾಲದಲ್ಲಿಯೇ ಅತಿ ಹೆಚ್ಚು ಹಗರಣಗಳು ಈ ದೇಶದಲ್ಲಿ ನಡೆದಿವೆ. ಆ ಪಕ್ಷದಲ್ಲಿದ್ದ ಎಲ್ಲರೂ ದೇಶಭಕ್ತರಾಗಿದ್ದರೆ ಈ ಹಗರಣಗಳು ಏಕೆ ನಡೆಯುತಿತ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದ್ದಾರೆ. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿದ್ದ ಎಲ್ಲರೂ ದೇಶಪ್ರೇಮಿಗಳಾಗಿದ್ದರೆ, ಈ ದೇಶ ಏಕೆ ಸಾಲು ಸಾಲು ಹಗರಣವನ್ನು ಎದುರಿಸುತ್ತಿತ್ತು. ಹಗರಣ ಹೊತ್ತವರು ದೇಶ ಭಕ್ತರೆಂದರೆ ಅದಂತಹ ದೇಶದ್ರೋಹದ ಕೆಲಸ ಬೇರೆನು ಇದೆ? ಬ್ರಿಟಿಷರ ಎದೆ ನಡುಗಿದ್ದು ಅಹಿಂಸಾ ಹೋರಾಟಕ್ಕಲ್ಲ, ಕ್ರಾಂತಿಕಾರಿಗಳ ಹೋರಾಟಕ್ಕೆ, ಬ್ರಿಟಿಷರು ಹೆದರಿದ್ದು ಕ್ರಾಂತಿಕಾರಿಗಳಿಗೆ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ್ದು ಸುಭಾಷ್‌ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ ಸೇನೆ. ಅಹಿಂಸಾ ಹೋರಾಟ ದೊಡ್ಡ ಪ್ರಮಾಣದ ಪಾತ್ರ ವಹಿಸಿದೆ. ಅದರಿಂದಲೇ ಬಂತು ಅಂದ್ರೆ ಕ್ರಾಂತಿಕಾರಿಗಳ ಬಲಿದಾನಕ್ಕೆ ನಾವು ಕೊಡುವ ಬೆಲೆ ಏನು ಎಂದರು.
ಸಚಿವರ ಮೇಲೆ ಪಕ್ಷದ ಇಮೇಜ್ ಹೆಚ್ಚಿಸುವ ಜವಾಬ್ದಾರಿ:
ಸರ್ಕಾರ, ಪಕ್ಷದ ಇಮೇಜ್ ಹೆಚ್ಚಿಸುವ ಜವಾಬ್ದಾರಿ ಸಚಿವರ ಮೇಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸಚಿವರಾದ ಮಾಧುಸ್ವಾಮಿ, ಎಸ್.ಟಿ. ಸೋಮಶೇಖರ್ ನಡುವೆ ನಡೆದ ಟಾಕ್ ವಾರ್ ಕುರಿತು ಅವರು ಪ್ರತಿಕ್ರಿಯೆ ನೀಡಿದರು.
Chikkamagaluru; ಸಿದ್ದರಾಮಯ್ಯಗೆ ಎದಿರೇಟು ನೀಡಿದ ಸಿ.ಟಿ ರವಿ
ರಾಜ್ಯದ ಜನತೆಗೆ ಸಚಿವರ ಬದ್ಧತೆ ಇರಬೇಕು. ಅದನ್ನು ಗಮನದಲ್ಲಿ ಇಟ್ಟುಕೊಂಡು ತಮ್ಮ ಮಾತು, ಕಾರ್ಯದಲ್ಲಿ ಇರಬೇಕು. ಹಿರಿಯ ಸಚಿವರಿದ್ದಾರೆ, ಸಚಿವರು ಬಾಲಿಶವಾಗಿ ಮಾತನಾಡಿ, ಅವರ ಬಗ್ಗೆ ಸಮಾಜದಲ್ಲಿ ತಪ್ಪು ಭಾವನೆ ಬರಬಾರದು. ನಾವು ಸಾರ್ವಜನಿಕ ಕ್ಷೇತ್ರದಲ್ಲಿ ಇದ್ದೇವೆ, ಬದ್ಧತೆ ಇದ್ದು ನಾವೇ ಉತ್ತರದಾಯಿಗಳು ಎನ್ನುವುದು ಮನಸ್ಸಿನಲ್ಲಿರಬೇಕು. ವ್ಯವಸ್ಥೆಯನ್ನು ಸರಿಪಡಿಸುವುದಕ್ಕೆ ಕಳಿಸಿದ್ದಾರೆ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರಬೇಕು. ಸಚಿವರ ಮಾತು ಮತ್ತು ಕೃತಿಯಲ್ಲಿ ಅದು ವ್ಯಕ್ತವಾಗಬೇಕು ಎಂದು ಹೇಳಿದರು.