ಬಡವರ ಏಳಿಗೆಗಾಗಿ ಸಿದ್ಧರಾಮಯ್ಯ ಅಧಿಕಾರದಲ್ಲಿರಬೇಕು: ಸಚಿವ ಕೆ.ಎನ್.ರಾಜಣ್ಣ

Kannadaprabha News   | Kannada Prabha
Published : Jun 22, 2025, 06:54 AM IST
Minister KN Rajanna

ಸಾರಾಂಶ

ಬಡವರ ಬಗ್ಗೆ ಅಪಾರ ಕಾಳಜಿಯುಳ್ಳವರು. ಅವರ ಸೇವೆ ಮಾಡಲು ರಾಜಕೀಯ ಅಧಿಕಾರ ಮುಖ್ಯವಾಗಿದ್ದು, ಬಡವರಿಗಾಗಿ ಸಿದ್ಧರಾಮಯ್ಯ ಅವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ತುಮಕೂರು (ಜೂ.22): ಬಡವರ ಬಗ್ಗೆ ಅಪಾರ ಕಾಳಜಿಯುಳ್ಳವರು. ಅವರ ಸೇವೆ ಮಾಡಲು ರಾಜಕೀಯ ಅಧಿಕಾರ ಮುಖ್ಯವಾಗಿದ್ದು, ಬಡವರಿಗಾಗಿ ಸಿದ್ಧರಾಮಯ್ಯ ಅವರು ಅಧಿಕಾರದಲ್ಲಿರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು. ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಾಟಾಗಿದ್ದ ತಮ್ಮ ಅಮೃತ ಮಹೋತ್ಸವ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ನಾನು ರಾಜಕೀಯದಿಂದ ದೂರ ಉಳಿಯುವ ಮನಸ್ಸು ಮಾಡಿದ್ದೇನೆ. ಆದರೆ ಬಡವರ ಏಳಿಗೆಗಾಗಿ ಸದಾ ಶ್ರಮಿಸುತ್ತೇನೆ. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಧಿಕಾರ ಇರಬೇಕು.

ಅಧಿಕಾರ ಇದ್ದಾಗ ಮಾತ್ರವೇ ಬಡವರಿಗೆ ಅನುಕೂಲ ಮಾಡಲು ಸಾಧ್ಯ. ಬಡವರ ಸೇವೆಗಾಗಿ ಮತ್ತು ಅವರ ಏಳಿಗೆಗಾಗಿ ನೀವು ಅಧಿಕಾರದಲ್ಲಿ ಮುಂದುವರೆಯಬೇಕು ಎಂದು ಮನವಿ ಮಾಡಿದರು. ಮಧುಗಿರಿ ಕ್ಷೇತ್ರ ಮಿಡಿಗೇಶಿಯಲ್ಲಿ ಈ ಹಿಂದೆ ನಡೆದ ಸಮಾರಂಭದಲ್ಲಿ ಮಕ್ಕಳಿಗೆ ಶೂ ಭಾಗ್ಯಕ್ಕಾಗಿ ಮನವಿ ಮಾಡಿದ್ದೆ. ಅದನ್ನು ಜಾರಿಗೆ ತಂದು ಬಡ ಮಕ್ಕಳಿಗ ಅನುಕೂಲ ಕಲ್ಪಿಸಿದರು. ಅನ್ನಭಾಗ್ಯದಂತಹ ಕ್ರಾಂತಿಕಾರಕ ಯೋಜನೆ ರೂಪಿಸಿದರು. ಈ ಯೋಜನೆ ಯಾವುದೇ ಒಂದು ಸಮುದಾಯಕ್ಕೆ ಮತ್ತು ವರ್ಗಕ್ಕೆ ಸೀಮಿತವಲ್ಲ. ಎಲ್ಲ ಬಡವರಿಗೂ ಈ ಯೋಜನೆ ಅನುಕೂಲವಾಗಿದೆ. ಇಷ್ಟಾದರೂ ಟೀಕೆಗಳು ನಿಂತಿಲ್ಲ. ಅದಕ್ಕೆ ತಲೆಕೆಡಿಸಿಕೊಳ್ಳುವುದೂ ಇಲ್ಲ ಎಂದರು.

ಮಧ್ಯಮ ಕುಟುಂಬದಿಂದ ಬಂದ ನಾನು ಬಾಲ್ಯದಿಂದಲೂ ಬಡವರ ಪರ ಹೋರಾಡುತ್ತಾ ಬಂದಿದ್ದೇನೆ. ಬಡವರಿಗೆ ದೌರ್ಜನ್ಯ ಆದರೆ ನಾನು ಸಹಿಸುವುದಿಲ್ಲ. 50 ವರ್ಷಗಳಿಂದಲೂ ಅನ್ಯಾಯದ ವಿರುದ್ಧ ಪ್ರತಿಭಟಿಸುತ್ತಲೇ ನಾನೀಗ ಸಚಿವನಾಗಿ ನಿಂತಿದ್ದೇನೆ ಎಂದು ತಮ್ಮ ಹೋರಾಟದ ದಿನಗಳನ್ನು ಸ್ಮರಿಸಿಕೊಂಡರು. ನಾನು ಸಾಮಾನ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ಗೆದ್ದು ಬಂದಿದ್ದೇನೆ. ಗೆದ್ದ ಮೇಲೆ ಜನರ ಋಣ ತೀರಿಸಬೇಕು. ರೈತರ ಬದುಕು ಮತ್ತು ಬಡವರ ಬದುಕು ಹಸನಾಗಬೇಕು ಎಂಬ ಉದ್ದೇಶ ನನ್ನದು. ಈ ಕಾರಣಕ್ಕಾಗಿಯೇ ಹಲವು ಯೋಜನೆಗಳನ್ನು ಜಾರಿಗೆ ತಂದು ಬಡವರ ಉದ್ಧಾರಕ್ಕೆ ಶ್ರಮಿಸಿದ್ದೇನೆ. ರಾಜಕಾರಣದಲ್ಲಿ ಅಧಿಕಾರ ಇದ್ದಾಗ ಧ್ವನಿ ಇಲ್ಲದವರಿಗೆ ಧನಿಯಾಗಬೇಕು.

ಅವರ ಆಶೀರ್ವಾದವೇ ದೇವರ ಆಶೀರ್ವಾದವಾಗುತ್ತದೆ. ಬಡವರಿಗೆ ಸಹಾಯ ಮಾಡದೆ ಅವರನ್ನು ನಿರ್ಲಕ್ಷಿಸಿದರೆ ಅವರ ಶಾಪ ಖಂಡಿತಾ ತಟ್ಟದೇ ಇರದು ಎಂದರು. ಅಸಹಾಯಕರಿಗೆ ಹಿಂಸೆ ಕೊಟ್ಟಾಗ ಮುಂದೆ ಅದು ನಮಗೆ ಹಿಂದಿರುಗುತ್ತದೆ. ಇವೆಲ್ಲವನ್ನು ಗಮನಿಸಿಯೇ ಬಡವರಿಗೆ ಅನುಕೂಲವಾಗುವ ಯೋಜನೆಗಳಿಗೆ ಹೆಚ್ಚು ಆಸಕ್ತಿ ವಹಿಸಲಾಗಿದೆ ಎಂದರು. ಸಹಕಾರ ಚಳವಳಿ ಜನರ ಚಳವಳಿಯಾಗಬೇಕು. ರೈತರ ಬದುಕು ಹಸನಾಗಬೇಕು. ಆಗ ಮಾತ್ರ ಜನ ಮತ್ತು ಈ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ. ಮುಂದಿನ ದಿನಗಳಲ್ಲಿ ಬಡವರ ಏಳಿಗೆಗಾಗಿ ಶ್ರಮಿಸುತ್ತೇನೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ
ರಾಜ್ಯದಲ್ಲಿ ರಾಜಕೀಯ ಹೊಲಸೆದ್ದು, ಎಲ್ಲ ಪಕ್ಷಗಳು ಗಬ್ಬೆದ್ದು ಹೋಗಿವೆ: ಕೆ.ಎಸ್.ಈಶ್ವರಪ್ಪ