ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೂ ನಾನೇ ಟಾರ್ಗೆಟ್ ಆಗಿದ್ದು, ಎರಡೂ ಪಕ್ಷಗಳು ಸೇರಿಕೊಂಡು ನನ್ನನ್ನು ಮುಗಿಸಲು ಯತ್ನ ಮಾಡುತ್ತಿವೆ. ನಾನು ಮಾಡಿದ ತಪ್ಪೇನು? ಎಂದು ಸಿದ್ದರಾಮಯ್ಯ ಅಳಲು ತೋಡಿಕೊಂಡರು.
ಮೈಸೂರು (ಏ.13): ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೂ ನಾನೇ ಟಾರ್ಗೆಟ್ ಆಗಿದ್ದು, ಎರಡೂ ಪಕ್ಷಗಳು ಸೇರಿಕೊಂಡು ನನ್ನನ್ನು ಮುಗಿಸಲು ಯತ್ನ ಮಾಡುತ್ತಿವೆ. ರಾಷ್ಟ್ರೀಯ ನಾಯಕರೆಲ್ಲ ಸೇರಿ ನನ್ನನ್ನ ಮುಗಿಸೋ ಯತ್ನ ಮಾಡುತ್ತಿದ್ದು, ನಾನು ಮಾಡಿದ ತಪ್ಪೇನು? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರು ಜಿಲ್ಲೆಯ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಮಾಡಲಿಲ್ಲ. ಯಡಿಯೂರಪ್ಪ ಅವರ ಪುತ್ರನನ್ನ ಸಚಿವರನ್ನಾಗಿ ಮಾಡಬೇಕು ಎಂಬ ಸಣ್ಣ ಕಾರಣಕ್ಕೆ ವಿಸ್ತರಣೆ ಮಾಡಲಿಲ್ಲ. ಒಂದೂ ಮುಕ್ಕಾಲು ವರ್ಷ ಅಧಿಕಾರ ನಡೆಸಿದರು. ಆದರೆ, ಬಿಜೆಪಿಯವರು ರಾಜ್ಯವನ್ನು ಹಾಳು ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ರಾಜ್ಯ ದಿವಾಳಿಯಾಗಿದೆ. ರಾಜ್ಯ ಉಳಿಸುವುದು ನಮ್ಮ ಧ್ಯೇಯವಾಗಿದೆ ಎಂದು ಹೇಳಿದರು.
ಅಭ್ಯರ್ಥಿ ಭಾಸ್ಕರ್ ರಾವ್ ಬದಲಾವಣೆ ಕೂಗು, ಸೈಲೆಂಟ್ ಸುನೀಲ್ ಬೆಂಬಲಿಗರಿಗೆ ಅಣ್ಣಾಮಲೈ ಸಲಹೆ!
ಯಾರಿಂದಲೂ ನನ್ನ ಮುಗಿಸೋಕೆ ಆಗೊಲ್ಲ: ಬಿಜೆಪಿ ಹಾಗೂ ಜೆಡಿಎಸ್ ಪಕ್ಷಕ್ಕೂ ನಾನೇ ಟಾರ್ಗೆಟ್ ಆಗಿದ್ದು, ಎರಡೂ ಪಕ್ಷಗಳು ಸೇರಿಕೊಂಡು ನನ್ನನ್ನು ಮುಗಿಸಲು ಯತ್ನ ಮಾಡುತ್ತಿವೆ. ರಾಷ್ಟ್ರೀಯ ನಾಯಕರೆಲ್ಲ ಸೇರಿ ನನ್ನನ್ನ ಮುಗಿಸೋ ಯತ್ನ ಮಾಡುತ್ತಿದ್ದು, ನಾನು ಮಾಡಿದ ತಪ್ಪೇನು? ರಾಜ್ಯದ ಜನರ ಆಶೀರ್ವಾದ ಇರುವಾಗ ನನ್ನನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಅದು ನಿಮ್ಮಿಂದ ಮಾತ್ರ ಸಾಧ್ಯ. ಯಾವುದೇ ಕಾರಣಕ್ಕೂ ಗುಂಪು ಮಾಡಲ್ಲ. ಯಾವುದೇ ಕಾರಣಕ್ಕೂ ಪಕ್ಷ ದ್ರೋಹ ಮಾಡಲ್ಲ. ಸಿದ್ದರಾಮಯ್ಯ ಅವರ ಕೈ ಬಲ ಪಡಿಸ್ತೀನಿ ಎಂದು ಶಪಥ ಮಾಡಿ ಎಂದು ಕಾಂಗ್ರೆಸ್ ಕಾರ್ಯಕರ್ತರ ಬಳಿ ಮನವಿ ಮಾಡಿ ಶಪಥ ಮಾಡಿಸಿಕೊಂಡರು.
ಸಿದ್ದರಾಮಯ್ಯ ಮುಖ ನೋಡಿ ಒಗ್ಗಟ್ಟಾಗಿ: ನಮ್ಮ ಬಳಿಯೂ ಕೂಡ ಗುಂಪುಗಳಿವೆ. ಮರಿಗೌಡ, ಸಿದ್ದೇಗೌಡ ಮುಖ ನೋಡಬೇಡಿ. ಸಿದ್ದರಾಮಯ್ಯ ಮುಖ ನೋಡಿಕೊಂಡು ಒಗ್ಗಟ್ಟಾಗಿ. ನನ್ನ ಮೇಲೆ ನಿಮಗೆ ನಂಬಿಕೆ ಇದ್ದರೆ ನನ್ನ ಪರ ಇರಿ. ಕಾಂಗ್ರೆಸ್ ಕಾರ್ಯಕರ್ತರ ಬಳಿ ಒಗ್ಗಟ್ಟಿನ ಮಂತ್ರ ಜಪಿಸಿದರು. ರಾಜ್ಯದಲ್ಲಿ ಶೇ. 200 ಪರ್ಸೆಂಟ್ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ವಾರ್ಷಿಕ 56 ಸಾಔಇರ ಕೋಟಿ ರೂ. ಸಾಲ ಕಟ್ಟಬೇಕು: ಬಿಜೆಪಿಯವರು ರಾಜ್ಯವನ್ನು ಹಾಳು ಮಾಡಿದ್ದಾರೆ. ಬಿಜೆಪಿ ಪಕ್ಷದಿಂದ ರಾಜ್ಯ ದಿವಾಳಿಯಾಗಿದೆ. ರಾಜ್ಯ ಉಳಿಸುವುದು ನಮ್ಮ ಧ್ಯೇಯ. ವರ್ಷಕ್ಕೆ 56 ಸಾವಿರ ಕೋಟಿ ಅಸಲು, ಬಡ್ಡಿ ರಾಜ್ಯದ ಸಾಲ ಕಟ್ಟಬೇಕು. ನಾನು ಇದನ್ನ ಪ್ರಚಾರಕ್ಕೆ ಹೇಳುತ್ತಿಲ್ಲ. ಈ ರೀತಿ ಸ್ಥಿತಿಯಿಂದ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಬಿಜೆಪಿ- ಜೆಡಿಎಸ್ ಪುನಃ ಅಧಿಕಾರಕ್ಕೆ ಬರಬಾರದು. 75 ರಿಂದ 80 ಸಾವಿರ ಕೋಟಿ ಪ್ರತಿ ವರ್ಷ ಸಾಲ ಮಾಡಿದ್ದಾರೆ. ಇಂತಹ ಸ್ಥಿತಿಯಲ್ಲಿ ರಸ್ತೆ , ಶಾಲೆ, ಆಸ್ಪತ್ರೆ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನೆ ಮಾಡಿದರು.
ಯಡಿಯೂರಪ್ಪ 8 ದಿನ ಮೊಬೈಲ್ ಸ್ವಿಚ್ ಆಫ್ ಮಾಡಿದ್ರೆ ಬಿಜೆಪಿ 50 ಸೀಟನ್ನೂ ಗೆಲ್ಲೊದಿಲ್ಲ!
ಜನರ ದುಡ್ಡನ್ನ ಜನರಿಗೆ ಕೊಡಲು ಹೊಟ್ಟೆ ಉರಿ. ಲಂಚ ಹೊಡೆಯುವುದನ್ನ ಕಡಿಮೆ ಮಾಡಿದರೆ 7 ಕೆಜಿ ಅಕ್ಕಿ ಕೊಡಬಹುದು. ಒಂದು ಲಕ್ಷ ಕಾಮಗಾರಿಗೆ 40 ಸಾವಿರ ಲಂಚ ಕೊಡಬೇಕು. ಜಿಎಸ್ ಟಿ ಶೇ. 18 , ಗುತ್ತಿಗೆದಾರ ಶೇ. 25 ನೀಡಬೇಕು. ಉಳಿದ ಹಣದಲ್ಲಿ ಅಭಿವೃದ್ಧಿ ಹೇಗೆ ಸಾಧ್ಯ? ಎಸ್ಸಿ, ಎಸ್ಟಿ ಸಮುದಾಯಕ್ಕೆ ಕಾನೂನು ಮಾಡಿದ್ದೆವು. ಎಸ್‌ಇಪಿ, ಟಿಎಸ್ ಪಿ ಕಾನೂನು ಮಾಡಿದ್ದೆವು. ಜನಸಂಖ್ಯೆಗೆ ಅನುಗುಣವಾಗಿ ಹಣ ಖರ್ಚು ಮಾಡುವ ಯೋಜನೆ ಮಾಡಬೇಕು ಎಂದು ಹೇಳಿದರು.