ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ಗಲಾಟೆ ಯಾರೇ ಮಾಡಲಿ ನಾನು ಖಂಡಿಸುತ್ತೇನೆ: ಸಿದ್ದರಾಮಯ್ಯ

By Gowthami K  |  First Published Apr 28, 2023, 4:27 PM IST

ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಯಾರೇ ಪ್ರಚಾರಕ್ಕೆ ಯಾವುದೇ ಊರಿಗೆ ಹೋಗಲಿ. ಆ ವೇಳೆ ಯಾರೇ ಗಲಾಟೆ ಮಾಡಲಿ ನಾನು ಖಂಡಿಸುತ್ತೇನೆ ಎಂದು ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ನಡೆದ ಗಲಾಟೆ ಬಗ್ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.


ರಾಯಚೂರು (ಏ.28):  ಸ್ವಗ್ರಾಮ ಸಿದ್ದರಾಮನ ಹುಂಡಿಯಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಮ್ಮೂರಿನಲ್ಲಿ ಗಲಾಟೆ ಆಗಿದ್ದು, ಅವರೇ ಗಲಾಟೆ ಶುರು ಮಾಡಿಸಿದ್ದು, ಪೋಲರೈಶೇನ್ ಆಫ್ ವೊಟೀಂಗ್ ಮಾಡಿಸಿದ್ದು ಅಲ್ಲಿ ಯಾರು ಬಂದು ಹೋಗಿದ್ರೂ, ಗಲಾಟೆ ನಡೆದಿಲ್ಲ. ಆದ್ರೂ ಕೂಡ ಬೇರೆ ಪಾರ್ಟಿಯವರು ಓಟ್ ಕೇಳಲು ಬಂದಾಗ ಯಾರೇ ಗಲಾಟೆ ಮಾಡಿದ್ರೂ ಅದನ್ನು ‌ನಾನು ಖಂಡಿಸುತ್ತೇನೆ. ಅವರು ಮೆರವಣಿಗೆ ಮಾಡಿಕೊಂಡು ಹೋಗಿದ್ರೆ ಏನು ಆಗುತ್ತಿರಲಿಲ್ಲ. ಯಾರೋ ನಮ್ಮ ಹುಡುಗರು ನಮ್ಮ ಪರವಾಗಿ ಘೋಷಣೆ ಕೂಗಿದ್ರು. ಸುಮ್ಮನೆ ಹೋಗಬೇಕಾಗಿತ್ತು. ಇಳಿದು ಹೋಗಿ ಅವರ ಜೊತೆಗೆ ಗಲಾಟೆ ಮಾಡಿದ್ದಾರೆ. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ನವರು ಮಾಡಲಿ. ಪ್ರಚಾರಕ್ಕೆ ಯಾವುದೇ ಊರಿಗೆ ಹೋಗಲಿ. ಆ ವೇಳೆ ಯಾರೇ ಗಲಾಟೆ ಮಾಡಲಿ ನಾನು ಖಂಡಿಸುತ್ತೇನೆ ಎಂದು  ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಸಿದ್ದರಾಮನ ಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವರುಣ ಕ್ಷೇತ್ರದ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಬಿಜೆಪಿ ಮೂಲತಃ ಗಲಭೆ ಪಾರ್ಟಿ. ಸಿದ್ದರಾಮನ ಹುಂಡಿಯಲ್ಲಿ ಕಾರು - ಬೈಕ್ ಡಿಕ್ಕಿಯಿಂದ ಜಗಳ ನಡೆದಿದೆ. ಈ ಬಗ್ಗೆ ಎಸ್ ಪಿ ಅವರ ಜೊತೆ ಮಾತನಾಡಿದ್ದೇನೆ. ಎಸ್‌ಪಿ ಅವರೇ ಹೇಳಿದ್ದಾರೆ. ಬಿಜೆಪಿ ಅವರು ಇದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಬಿಜೆಪಿ ಅವರು ಗಲಭೆ ಮಾಡಿಸಲು ನಿಸ್ಸಿಮರು. ಕಾಂಗ್ರೆಸ್ ಕಾರ್ಯಕರ್ತರು ಎಷ್ಟೇ ಪ್ರಚೋದನೆ ಮಾಡಿದರು‌ ಪ್ರಚೋದನೆಗೆ ಒಳಗಾಗ ಬಾರದು.

Tap to resize

Latest Videos

ಬಿಜೆಪಿ ರಾಜಕೀಯ ಲಾಭ ಕ್ಕಾಗಿ ಈ ರೀತಿ ಕಾರ್ಯತಂತ್ರ ಮಾಡುತ್ತಿದೆ. ಬಿಜೆಪಿ ಹಸಿ ಸುಳ್ಳು ಹೇಳುತ್ತಾ ದ್ಚೇಷ ತಂದು ಹಾಕಿ ತಮ್ಮ ಬೇಳೆ ಬೇಯಿಸಿ ಕೊಳ್ಳೋ ತಂತ್ರ ಮಾಡುತ್ತಿದೆ.ಗಲಾಟೆ ವೇಳೆ ಸಿದ್ದರಾಮಯ್ಯ ಕುಟುಂಬದವರು ಯಾರು ಅಲ್ಲಿ ಇರಲಿಲ್ಲ. ಅದರೂ ದುರುದ್ದೇಶದಿಂದ ನಮ್ಮ‌ ಕುಟುಂಬದ ಸದಸ್ಯರ ಮೇಲೆ ದೂರು ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮನಹುಂಡಿಯಲ್ಲಿ ಬಿಜೆಪಿಯಿಂದ ಜಗಳಕ್ಕೆ ರಾಜಕೀಯ ಬಣ್ಣ ಹಚ್ಚಲಾಗಿದೆ: ಯತೀಂದ್ರ ತಿರುಗೇಟು

ಸಿದ್ದರಾಮಯ್ಯ ಅವರ ಗುಂಪು ಸೋಮಣ್ಣ ಅವರನ್ನು ಫಾಲೋ ಮಾಡುತ್ತಿರುವ  ಆರೋಪಕ್ಕೆ ಸಂಬಂಧಿಸಿ ಮಾತನಾಡಿದ ಯತೀಂದ್ರ,  ಇದೊಂದು ಹಸಿ ಸುಳ್ಳು. ಯಾವುದೇ ಗುಂಪು ಸೋಮಣ್ಣ ಅವರನ್ನ ಫಾಲೋ ಮಾಡುತ್ತಿಲ್ಲ ಎಂದು ಹೇಳಿದರು.

ಸಿದ್ದರಾಮನ ಹುಂಡಿ ಏನು ಸಿದ್ದರಾಮಯ್ಯ ಸಂಸ್ಥಾನನಾ?: ಪ್ರತಾಪ್ ಸಿಂಹ ಆಕ್ರೋಶ

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!