ಸಿದ್ದುಗೆ ತಪ್ಪಿನ ಅರಿವಾಗಿದೆ, ಒಳ್ಳೇ ಬುದ್ಧಿ ಬಂದಿದೆ: ಶಾಮನೂರು ಶಿವಶಂಕರಪ್ಪ

By Govindaraj S  |  First Published Aug 21, 2022, 3:00 AM IST

ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನಕ್ಕೆ ಹೋಗುವುದಿಲ್ಲವೆಂಬುದಾಗಿ ಹೇಳಿರುವ ಸಿದ್ದರಾಮಯ್ಯನಿಗೆ ಈಗ ತಪ್ಪಿನ ಅರಿವಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ.


ದಾವಣಗೆರೆ (ಆ.21): ವೀರಶೈವ ಲಿಂಗಾಯತ ಧರ್ಮವನ್ನು ಒಡೆಯುವ ಪ್ರಯತ್ನಕ್ಕೆ ಹೋಗುವುದಿಲ್ಲವೆಂಬುದಾಗಿ ಹೇಳಿರುವ ಸಿದ್ದರಾಮಯ್ಯನಿಗೆ ಈಗ ತಪ್ಪಿನ ಅರಿವಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ, ಕಾಂಗ್ರೆಸ್ಸಿನ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯನಿಗೆ ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಹೋಗಿದ್ದು ತಪ್ಪು ಎಂಬುದು ಈಗ ಅರಿವಾಗಿದ್ದು, ಸಿದ್ದರಾಮಯ್ಯ ಪಶ್ಚಾತ್ತಾಪ ಪಟ್ಟಿರುವುದರಿಂದ ಅದು ಅಲ್ಲಿಗೆ ಮುಗಿಯಿತು ಎಂದರು. 

ಸಿದ್ದರಾಮಯ್ಯನಿಗೆ ಒಳ್ಳೆಯ ಬುದ್ಧಿ ಬಂದಿದೆ. ಅದರಲ್ಲಿ ಸಿದ್ದರಾಮಯ್ಯ ಪಾತ್ರ ಏನೂ ಇಲ್ಲ. ಬೇರೆಯವರ ಒತ್ತಡ ಇತ್ತು. ಆದರೆ, ಧರ್ಮ ಒಡೆಯಲು ಯತ್ನಿಸಿದ ಆರೋಪ ಮಾತ್ರ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಮೇಲೆ ಬಂದಿತ್ತು. ಈಗ ಸಿದ್ದರಾಮಯ್ಯ ಪಶ್ಚಾತ್ತಾಪಪಟ್ಟಿದ್ದು, ಅದೆಲ್ಲಾ ಮುಗಿದ ವಿಚಾರ ಎಂದು ಹೇಳಿದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ನಾನು ಮತ್ತೊಮ್ಮೆ ದಾವಣಗೆರೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ದಕ್ಷಿಣ ಕ್ಷೇತ್ರದಿಂದಲೇ ನಾನು ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲಿದ್ದೇನೆ ಎಂಬುದಾಗಿ ತಮ್ಮ ಅನಿಸಿಕೆಯನ್ನು ಇದೇ ಸಂದರ್ಭದಲ್ಲಿ ತೋಡಿಕೊಂಡರು. 

Tap to resize

Latest Videos

Udupi; ಮತ್ತಷ್ಟು ಪ್ರತಿಭಟನೆ ಎದುರಿಸಲು ರೆಡಿಯಾಗಿ, ಸಿದ್ದುಗೆ ಸಚಿವ ಸುನಿಲ್ ಕುಮಾರ್ ಚಾಟಿ

ಮಾಜಿ ಮುಖ್ಯಮಂತ್ರಿಬಿ.ಎಸ್‌.ಯಡಿಯೂರಪ್ಪರಿಗೆ ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಸ್ಥಾನ ನೀಡಿದ ಮಾತ್ರಕ್ಕೆ ಏನೂ ಆಗುವುದಿಲ್ಲ. ಯಡಿಯೂರಪ್ಪ ಒಬ್ಬರಿಂದಲೇ ಏನೂ ಮಾಡುವುದಕ್ಕೆ ಆಗುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಅತೀ ಹೆಚ್ಚು ಕ್ಷೇತ್ರ ಗೆಲ್ಲುವ ಮೂಲಕ ನಾವು ಕಾಂಗ್ರೆಸ್ಸಿನವರೇ ಸರ್ಕಾರ ಮಾಡುತ್ತೇವೆ. ನಮ್ಮ ಪಕ್ಷದ್ದೇ ಸರ್ಕಾರವೂ ಬರಲಿದೆ ಎಂದು ಡಾ.ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಸಮುದಾಯ ಭವನ ಬಗ್ಗೆ ಸಿಎಂ ಬಳಿ ಚರ್ಚೆ: ಸ್ಮಾರ್ಟ್‌ ಸಿಟಿ ಯೋಜನೆಯಡಿ ನಿರ್ಮಿಸಿದ ಸಮುದಾಯ ಭವನವನ್ನು ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ಗೆ ಹಸ್ತಾಂತರಿಸುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸುವುದಾಗಿ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು. ನಗರದ ಶ್ರೀ ದುರ್ಗಾಂಬಿಕಾ ಶಾಲಾವರಣದಲ್ಲಿ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಸ್ಥಾನ ಟ್ರಸ್ಟ್‌ಗೆ ಸ್ಮಾರ್ಟ್‌ ಸಿಟಿ ಯೋಜನೆಯಲ್ಲಿ ನಿರ್ಮಿಸಿರುವ ಸಮುದಾಯ ಭವನ ಹಸ್ತಾಂತರಿಸುವ ವಿಚಾರವಾಗಿ ಅ.21ರಂದು ಆಗಮಿಸುವ ಸಿಎಂ ಬೊಮ್ಮಾಯಿ ಬಳಿ ಚರ್ಚಿಸುವೆ ಎಂದರು.

ಸರ್ಕಾರವನ್ನು ಕೋಮುವಾದಿಗಳ ಮತ್ತು ಗೂಂಡಾಗಳ ಕೈಗೆ ಕೊಡಲಾಗಿದೆ: ಖಾದರ್ ಆಕ್ರೋಶ

ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ಗೆ ಸೇರಿದ ಜಾಗದಲ್ಲಿ ಸ್ಮಾರ್ಟ್‌ ಸಿಟಿಯೇ ಸಮುದಾಯ ಭವನ ನಿರ್ಮಿಸಲು ಮುಂದೆ ಬಂದಿದ್ದು, ಅದರಂತೆ ಯಾವುದೇ ಪ್ರತಿ ಫಲಾಪೇಕ್ಷೆ ಇಲ್ಲದೇ ಅವಕಾಶ ನೀಡಲಾಗಿತ್ತು. ಈಗ ಸ್ಮಾರ್ಟ್‌ ಸಿಟಿಯವರು ಸಮುದಾಯ ಭವನವನ್ನು ಹಸ್ತಾಂತರಿಸುತ್ತಿಲ್ಲ ಎಂದು ಹೇಳಿದರು. ಇದೇ ವೇಳೆ ಶ್ರೀ ದುರ್ಗಾಂಬಿಕಾ ದೇವಿಯ 2021ರ ಕಾರ್ತಿಕೋತ್ಸವ ಹಾಗೂ 2022ರ ಜಾತ್ರಾ ಮಹೋತ್ಸವ ಲೆಕ್ಕಪತ್ರಗಳ ಪರಿಶೀಲಿಸಲಾಯಿತು. ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್‌ನಿಂದ ಕೊಂಡಜ್ಜಿ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಮಳಿಗೆಗಳ ಬಾಡಿಗೆಗೆ ನೀಡಲು ಸಭೆಯಲ್ಲಿ ಒಪ್ಪಿಗೆ ದೊರೆಯಿತು.

click me!