PFI, SDPI ಬೆಳೆಯಲು ಸಿದ್ದರಾಮಯ್ಯ ಕಾರಣ; ನಳಿನ್ ಕುಮಾರ ಕಟೀಲ್ ಗಂಭೀರ ಆರೋಪ

By Ravi Janekal  |  First Published Sep 27, 2022, 11:01 AM IST
  • PFI, SDPI ಬೆಳೆಯಲು ಸಿದ್ದರಾಮಯ್ಯ ಕಾರಣ
  • ಸಿದ್ದರಾಮಯ್ಯ ಅಧಿಕಾರ ಅವಧಿಯಲ್ಲಿ ಉಗ್ರ ಸಂಘಟನೆಗಳು ಬೆಳೆದವು.
  • ಇಂದಿನ ಪರಿಸ್ಥಿತಿಗೆ ಸಿದ್ದರಾಮಯ್ಯ ಕಾರಣ.
  • ನಮ್ಮ ಸರ್ಕಾರ ಇಂಥ ಸಂಘಟನೆಗಳನ್ನು ಮಟ್ಟಹಾಕಲು ದೃಢ ಸಂಕಲ್ಪ ಮಾಡಿದೆ

ವಿಜಯಪುರ (ಸೆ.27) : ದೇಶಾದ್ಯಂತ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಂಡಿರುವ ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳ ಮೇಲೆ ಐಎನ್‌ಎ ದಾಳಿ ಮಾಡಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಇಂದು ಕೂಡ ಪೊಲೀಸ್ ಕಾರ್ಯಾಚರಣೆ ನಡೆಸಲಾಗಿದೆ. ಇಂದಿನ ಪರಿಸ್ಥಿತಿಗೆ ಸಿದ್ದರಾಮಯ್ಯ ಕಾರಣ.. ರಾಜ್ಯದಲ್ಲಿ ಎಸ್‌ಡಿಪಿಐ, ಪಿಎಫ್‌ಐ ಬೆಳೆಯಲು ಅವರೇ ಕಾರಣ ಎಂದು ಸಿದ್ದರಾಮಯ್ಯರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಗಂಭೀರ ಆರೋಪ ಮಾಡಿದ್ದಾರೆ.

 ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಇಂದು ಕೋಮುಗಲಭೆ, ಹಿಂದುಗಳ ಕೊಲೆ, ಬೆದರಿಕೆ ಪ್ರಕರಣಗಳು ಹೆಚ್ಚಾಗಿವೆ. ಪರಿಸ್ಥಿತಿ ಗಂಭೀರವಾಗಿದೆ. ಈ ಪರಿಸ್ಥಿತಿಗೆ ಸಿದ್ದರಾಮಯ್ಯನವರೇ ಕಾರಣ. ಸಿದ್ದರಾಮಯ್ಯ ಆಡಳಿತಾವಧೀಯಲ್ಲಿ  ದೇಶ ವಿರೋಧಿ ಸಂಘಟನೆಗಳು ಬೆಳೆದಿವೆ. ಆದರೆ ನಮ್ಮ ಸರ್ಕಾರ ಈಗ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ಎಲ್ಲ ಭಯೋತ್ಪಾದಕ ಸಂಘಟನೆಗಳನ್ನ ಮಟ್ಟಹಾಕುವ ಸಂಕಲ್ಪ ಮಾಡಿದೆ. ಹೀಗಾಗಿ ಉಗ್ರ ಕೃತ್ಯಗಳಲ್ಲಿ ತೊಡಗಿರುವ, ಕೋಮುಗಲಭೆ ಎಬ್ಬಿಸುವವರ ನಿವಾಸಗಳ ಮೇಲೆ ದಾಳಿ ನಡೆಸಿ ಬಂಧಿಸಲಾಗ್ತಿದೆ ಎಂದು ಹೇಳಿದರು.

Tap to resize

Latest Videos

ದೇಶಾದ್ಯಂತ ಎನ್‌ಐಎ ದಾಳಿ ನಡೆಸಿದೆ. ನಿನ್ನೆ ತಡರಾತ್ರಿಯೂ ರಾಜ್ಯ ಪೊಲೀಸರಿಂದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಈ ದಾಳಿಯಲ್ಲಿ ಬಂಧಿತರಾದವರಲ್ಲಿ ನಮ್ಮ ರಾಜ್ಯದವರೇ ಹೆಚ್ಚಿದ್ದಾರೆ. ದೇಶ ವಿರೋಧಿಗಳು ಹೆಚ್ಚಾಗಲು ಕಾರಣ ಯಾರು? ಸಿದ್ದರಾಮಯ್ಯ ಆಡಳಿತವಾಧಿಯಲ್ಲಿ ಬೆಳೆದು ಈಗ ದೇಶದ್ಯಾಂತ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿವೆ ಎಂದರು. ಮುಂದುವರಿದು,  ಪಿಎಫ್‌ಐ ನಿಷೇಧಕ್ಕೆ ದೇಶಭಕ್ತರ ಬೇಡಿಕೆ ಇದೆ. ಹೀಗಾಗಿ ಇಂಥ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಮೂಲಕ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

PFI ಮೇಲೆ‌ ದಾಳಿ,ರಾಜಕೀಯ ಪ್ರೇರಿತ ಎಂಬ ಆರೋಪ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಕಟೀಲ್, ಎಲ್ಲದಕ್ಕೂ ರಾಜಕೀಯ ಪ್ರೇರಿತ ಎನ್ನುತ್ತಾರೆ. ಭಯೋತ್ಪಾದನೆಗೆ ರಾಜಕೀಯ ಪ್ರೇರಣೆ ನೀಡಿದವರು ಯಾರು ? ಎಂದು ಪ್ರಶ್ನಿಸಿದರು.

ರಾತ್ರೋರಾತ್ರಿ ರಾಜ್ಯ ಪೊಲೀಸರ ಮೆಗಾ ಆಪರೇಷನ್, PFI ಗೆ ಮತ್ತೊಂದು ಶಾಕ್!

click me!