ಕುರುಬರ ಸಂಘದ ಚುನಾವಣೆ: 34ರಲ್ಲಿ ಒಂದೇ ಒಂದು ಸ್ಥಾನ ಗೆಲ್ಲದ ಈಶ್ವರಪ್ಪ ಟೀಂ, ಸಿದ್ದು ಮೇಲುಗೈ

By Suvarna News  |  First Published Jun 26, 2020, 7:06 PM IST

ತೀವ್ರ ಕುತೂಹಲ ಮೂಡಿದ್ದ ಪ್ರದೇಶ ಕುರುಬರ ಸಂಘದ ಚುನಾವಣೆಯಲ್ಲಿ ಸಚಿವ ಕೆ.ಎಸ್.ಈಶ್ವರಪ್ಪಗೆ ಭಾರೀ ಹಿನ್ನಡೆಯಾಗಿದ್ದು, ಸಿದ್ದರಾಮಯ್ಯ ಮೇಲುಗೈ ಸಾಧಿಸಿದ್ದಾರೆ.


ಬೆಂಗಳೂರು, (ಜೂನ್.26): ಪ್ರತಿಷ್ಠೆಯ ಕಣವಾಗಿದ್ದ ಪ್ರದೇಶ ಕುರುಬರ ಸಂಘದ ಚುನಾವಣೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬೆಂಬಲಿಗರು ಭರ್ಜರಿ ಗೆಲುವು ಸಾಧಿಸಿದ್ದಾರೆ.

ಈ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪಗೆ ಮುಖಂಭವಾಗಿದೆ. ಇಂದು (ಶುಕ್ರವಾರ) ನಡೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿಗರ ಎದುರು ಈಶ್ವರಪ್ಪ ಬೆಂಬಲಿಗರು 34ರಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲಾಗದೇ ಹೀನಾಯವಾಗಿ ಸೋಲುಕಂಡರು.

Tap to resize

Latest Videos

 ಬೆಂಗಳೂರಲ್ಲಿ ಲಾಕ್‌ಡೌನ್ ಇಲ್ಲ, ಪೆಟ್ರೋಲ್-ಡೀಸೆಲ್ ಕೈಗೆಟುಕುತ್ತಿಲ್ಲ; ಜೂ.26ರ ಟಾಪ್ 10 ಸುದ್ದಿ!

ಸಂಘದಲ್ಲಿ ರಾಜಕೀಯ ಬೇಡ ಎಂದು ಸಿದ್ದರಾಮಯ್ಯ ಅವರು ಅವಿರೋಧ ಆಯ್ಕೆಗೆ ಒಲವು ತೋರಿದ್ದರು. ಆದ್ರೆ, ಆಡಳಿತ ಪಕ್ಷದ  ಈಶ್ವರಪ್ಪ
ಚುನಾವಣೆಗೆ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆದಿದ್ದು, ಈಶ್ವರಪ್ಪನವರ ಬೆಂಬಲಿಗರು ಮಕಾಡೆ ಮಲಗಿದರು.

ಒಟ್ಟು 118 ನಿರ್ದೇಶಕರುಗಳಿದ್ದು, ಎಲ್ಲರೂ ಮತ ಚಲಾಯಿಸಿದ್ದಾರೆ. ಇನ್ನು ಪ್ರಮುಖವಾಗಿ ಸಿದ್ದರಾಮಯ್ಯ ಅವರ ಬೆಂಬಲಿಗರ ಪರವಾಗಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರು ಚುನಾವಣೆ ಉಸ್ತುವಾರಿ ವಹಿಸಿಕೊಂಡಿದ್ದರು.

ನೂತನ ಪದಾಧಿಕಾರಿಗಳ ಪಟ್ಟಿ ಇಂತಿದೆ.
* ಅಧ್ಯಕ್ಷ: ಬಳ್ಳಾರಿ ಕೃಷ್ಣ (83 ಮತಗಳು)‌, 
* ಪ್ರಧಾನ ಕಾರ್ಯದರ್ಶಿ: ಮಾಜಿ ಮೇಯರ್ ವೆಂಕಟೇಶ ಮೂರ್ತಿ (81 ಮತಗಳು) 
* ಕಾರ್ಯಾಧ್ಯಕ್ಷ: ಮೈಸೂರಿನ ಸುಬ್ಬಣ್ಣ (84)‌ ಆಯ್ಕೆ.
*ಖಜಾಂಚಿ: ದೇವರಾಜು (84) ಆಯ್ಕೆ

ಹಿರಿಯ ಉಪಾಧ್ಯಕ್ಷರು
*ಈರಣ್ಣ ಝಳಕಿ (83 ಮತಗಳು)
* ಜಗದೀಶ (78), 
* ಬಸವರಾಜ್ ಬಸಲಗುಂದಿ (75), 
* ರೇಖಾ ಹುಲಿಯಪ್ಪಗೌಡ (85) ಆಯ್ಕೆ.

ಉಪಾಧ್ಯಕರು
* ಕೃಷ್ಣ ಕುಮಾರ್ (78ಮತಗಳು)
* ಪುಟ್ಟಬಸವಯ್ಯ (78)
* ಮಿರ್ಜಾಪುರ ಮಹಾದೇವಪ್ಪ (76), 
* ಎಂ.ಸಿ.ರಾಜಣ್ಣ (81),
* ವೆಂಕಟರಮಣಪ್ಪ(75)
* ಶಂಕರ ವಿಠೋಬ ಹೆಗಡೆ (79)

click me!