ಅಮಿತ್‌ ಶಾ ಸಂಧಾನ: ಮಣಿಪುರ ಸರ್ಕಾರ ಪತನದಿಂದ ಬಚಾವ್‌!

By Suvarna News  |  First Published Jun 25, 2020, 2:28 PM IST

ಅಮಿತ್‌ ಶಾ ಸಂಧಾನ: ಮಣಿಪುರ ಸರ್ಕಾರ ಪತನದಿಂದ ಬಚಾವ್‌| ಶಾಸಕರ ರಾಜೀನಾಮೆಯಿಂದಾಗಿ ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ 


ಗುವಾಹಟಿ(ಜೂ.25): ಶಾಸಕರ ರಾಜೀನಾಮೆಯಿಂದಾಗಿ ಪತನದ ಭೀತಿಗೆ ಸಿಲುಕಿದ್ದ ಮಣಿಪುರದ ಬೀರೇನ್‌ ಸಿಂಗ್‌ ನೇತೃತ್ವದ ಬಿಜೆಪಿ ಸರ್ಕಾರ ಸದ್ಯ ಅಪಾಯದಿಂದ ಪಾರಾಗಿದೆ.

ಮೇಘಾಲಯ ಮುಖ್ಯಮಂತ್ರಿಯೂ ಆಗಿರುವ ಎನ್‌ಪಿಪಿ ನಾಯಕ ಕಾನ್ರಾಡ್‌ ಸಂಗ್ಮಾ ಹಾಗೂ ರಾಜೀನಾಮೆ ನೀಡಿದ್ದ ಉಪಮುಖ್ಯಮಂತ್ರಿ ವೈ. ಜಾಯ್‌ಕುಮಾರ್‌ ಸಿಂಗ್‌ ಅವರು ದೆಹಲಿಯಲ್ಲಿ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಣಿಪುರದ ಸರ್ಕಾರಕ್ಕೆ ಬೆಂಬಲ ನೀಡುವುದಾಗಿ ಕಾನ್ರಾಡ್‌ ಅವರು ತಿಳಿಸಿದರು. ರಾಜೀನಾಮೆ ನೀಡಿದ್ದ ಎಲ್ಲ 9 ಶಾಸಕರನ್ನೂ ದೆಹಲಿಗೆ ಕರೆತರಲಾಗಿತ್ತು.

Tap to resize

Latest Videos

ಲಾಲುಗೆ ನಿತೀಶ್‌ ಶಾಕ್‌: 5 ಎಂಎಲ್ಸಿಗಳು ಜೆಡಿಯುಗೆ!

ಕಳೆದ ವಾರ ಎನ್‌ಪಿಪಿಯ ನಾಲ್ವರು ಹಾಗೂ ಬಿಜೆಪಿಯ ಮೂವರು ಶಾಸಕರು ರಾಜೀನಾಮೆ ನೀಡಿ, ಬೀರೇನ್‌ ಸಿಂಗ್‌ ನೇತೃತ್ವದ ಸರ್ಕಾರಕ್ಕೆ ಬೆಂಬಲ ವಾಪಸ್‌ ಪಡೆದಿತ್ತು. ಹೀಗಾಗಿ ಸರ್ಕಾರ ಅಲ್ಪಮತಕ್ಕೆ ಕುಸಿದು, ಕಾಂಗ್ರೆಸ್‌ ಹಕ್ಕು ಮಂಡನೆ ಮಾಡಿತ್ತು.

click me!