ಮುಡಾ ಹಗರಣ ಮುಚ್ಚಿಹಾಕಲು ಸಿದ್ದರಾಮಯ್ಯ ಜಾತಿ ಗಣತಿ ವರದಿ ನಾಟಕ: ಹೆಚ್‌ಡಿಕೆ!

By Sathish Kumar KH  |  First Published Oct 7, 2024, 3:33 PM IST

ರಾಜ್ಯದಲ್ಲಿ ಮುಡಾ ಹಗರಣವನ್ನು ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. 


ಬೆಂಗಳೂರು (ಅ.07): ರಾಜ್ಯದಲ್ಲಿ ಮುಡಾ ಹಗರಣವನ್ನು ಜನರ ಬಾಯಿಂದ ಮುಚ್ಚಿಹಾಕಲು ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನು ಮುನ್ನೆಲೆಗೆ ತರುತ್ತಿದ್ದಾರೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.

ಕಾಂತರಾಜು ಅವರ ಸಮಿತಿ ರಚನೆ 2014ರಲ್ಲಿ ಮಾಡಿದ್ದರು. ಕಳೆದ 10 ವರ್ಷಗಳ ಹಿಂದೆ ಮಾಡಿದ್ದ ಜಾತಿಗಣತಿಯನ್ನು ಇದೀಗ ಜಾರಿಗೆ ತರಲು ಮುಂದಾಗಿದೆ. ಹಳೆಯ ಜಾತಿ ಗಣತಿ ವರದಿಯನ್ನು ಕುಮಾರಸ್ವಾಮಿ ರಿಲೀಸ್ ಮಾಡಲು ಬಿಡಲಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದರು. ಆದರೆ, ಈ ಜಾತಿಗಣತಿ ವರದಿಯನ್ನು ಲೋಕಸಭಾ ಚುನಾವಣೆಗೂ ಮುನ್ನವೇ ಸಲ್ಲಿಕೆ ಮಾಡಲಾಗಿದೆ. ಇಷ್ಟು ದಿನಗಳವರೆಗೆ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಆದರೆ, ಇದೀಗ ಮುಡಾ ಹಗರಣ ತನ್ನ ಕುರ್ಚಿಯನ್ನು ಅಲಿಗಾಡಿಸಿ ಸರ್ಕಾರವನ್ನು ಮುಳುಗಿಸುತ್ತಿದೆ ಎನ್ನುವಾಗ ಜಾತಿಗಣತಿ ವರದಿಯನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ಕಿಡಿಕಾರಿದರು.

Tap to resize

Latest Videos

undefined

ಇದನ್ನೂ ಓದಿ: ಬೈಎಲೆಕ್ಷನ್‌ನಿಂದ ಡಿಕೆಶಿಗೆ ಚನ್ನಪಟ್ಟಣ ನೆನಪಾಗ್ತಿದೆ: ಎಚ್.ಡಿ.ಕುಮಾರಸ್ವಾಮಿ

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೆಡಿಎಸ್, 'ಮುಡಾ ಹಗರಣದಲ್ಲಿ ಮೆತ್ತಿಕೊಂಡಿರುವ ಮಸಿ ಅಳಿಸಿ ಹಾಕಲು ಮುಡಾರಾಮಯ್ಯ *ಜಾತಿಗಣತಿ ವೈಟ್ನರ್* ಅನ್ನು ಮುನ್ನಲೆಗೆ ತಂದಿದ್ದಾರೆ. ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳೇ A1 ಆರೋಪಿ, ಭ್ರಷ್ಟಾಚಾರದ ಕಳಂಕ ಹೊತ್ತಿರುವ ಸಿದ್ದರಾಮಯ್ಯ ಸಿಎಂ ಕುರ್ಚಿಗೆ ಅಂಟಿಕೊಂಡಿದ್ದು, ಜನರನ್ನು ದಾರಿ ತಪ್ಪಿಸಲು ಜಾತಿಗಣತಿ ನಾಟಕ ಶುರು ಮಾಡಿದ್ದಾರೆ. 

ಆದರೆ, ಕಾಂಗ್ರೆಸ್ ಪಕ್ಷದಲ್ಲೇ ಜಾತಿಗಣತಿ ವರದಿಯನ್ನು ಯಾವುದೇ ಕಾರಣಕ್ಕೂ ಬಹಿರಂಗ ಮಾಡಬಾರದು ಎಂಬ ಕೂಗು ಎದ್ದಿದೆ. ರಾಜ್ಯದ ಅಭಿವೃದ್ಧಿ ಮರೆತು, ಜನಪರ ಆಡಳಿತ ನೀಡಲು ವಿಫಲವಾಗಿರುವ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಜಾತಿಗಣತಿ ವಿಷಯದಲ್ಲಿ ಜನರಿಗೆ ಮಂಕುಬೂದಿ ಎರಚುತ್ತಿದೆ. ಸಿಎಂ ರೇಸ್‌ನಲ್ಲಿ ಕಾಂಗ್ರೆಸ್‌ ನಾಯಕರಲ್ಲೇ ಜಟಾಪಟಿ ಜೋರಾಗಿದ್ದು, ಕಾಂಗ್ರೆಸ್ ಮನೆಯೊಂದು ಮೂವತ್ತಾರು ಬಾಗಿಲು ಆಗಿದೆ.  ಅವೈಜ್ಞಾನಿಕ ಜಾತಿಗಣತಿ ಮುನ್ನಲೆಗೆ ತಂದು ಭ್ರಷ್ಟಾಚಾರಗಳಿಂದ ರಕ್ಷಣೆ ಪಡೆಯಲು ಹೊರಟಿರುವ ಅವಕಾಶವಾದಿಗೆ ಜನರೇ ತಕ್ಕಪಾಠ ಕಲಿಸುವುದು ನಿಶ್ಚಿತ ಎಂದಿ ಪೋಸ್ಟ್ ಹಂಚಿಕೊಂಡಿದೆ.

ಡ್ರಾಮಾರಾಮಯ್ಯನ ಜಾತಿ ಗಣತಿ!!

ಮುಡಾ ಹಗರಣದಲ್ಲಿ ಮೆತ್ತಿಕೊಂಡಿರುವ ಮಸಿ ಅಳಿಸಿ ಹಾಕಲು ಮುಡಾರಾಮಯ್ಯ *ಜಾತಿಗಣತಿ ವೈಟ್ನರ್* ಅನ್ನು ಮುನ್ನಲೆಗೆ ತಂದಿದ್ದಾರೆ.

ಮುಡಾ ಹಗರಣದಲ್ಲಿ ಸ್ವತಃ ಮುಖ್ಯಮಂತ್ರಿಗಳೇ A1 ಆರೋಪಿ, ಭ್ರಷ್ಟಾಚಾರದ ಕಳಂಕ ಹೊತ್ತಿರುವ ಸಿಎಂ ಕುರ್ಚಿಗೆ ಅಂಟಿಕೊಂಡಿದ್ದು, ಜನರನ್ನು ದಾರಿ ತಪ್ಪಿಸಲು… pic.twitter.com/wGc1QQUNv6

— Janata Dal Secular (@JanataDal_S)

ಮತ್ತೊಂದು ಟ್ವೀಟ್‌ನಲ್ಲಿ ಮುಡಾವನ್ನು ಮುಕ್ಕಿ ತಿಂದಿರುವ ಮುಡಾರಾಮಯ್ಯ ತನ್ನ ಅಕ್ರಮಗಳು ಹೊರಬರುತ್ತಿದ್ದಂತೆ ರಾಜ್ಯದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಹೊಸ ಸದಾರಮೆ ನಾಟಕ ಶುರು ಮಾಡಿದ್ದಾರೆ. ಹೌದು.. ನಿಮ್ಮ ಧರ್ಮಪತ್ನಿಯವರು ಯಾವುದೇ ತಪ್ಪು ಮಾಡಿಲ್ಲ..ಆದರೆ, ಪತ್ನಿ ಹೆಸರಲ್ಲಿ ಅಕ್ರಮವಾಗಿ ಸೈಟು ಕಬಳಿಸಿದ ಸಿದ್ಧಹಸ್ತರು..! ಮುಡಾ ಫೈಲ್ಸ್  ನ ಕಥೆ, ಚಿತ್ರ ಕಥೆ, ನಿರ್ದೇಶನ‌ ನಿಮ್ಮದೇ ಅಲ್ಲವೇ.? ಗೌರವಯುತವಾಗಿ ಮನೆಯಲ್ಲಿರುವ, ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಆ ತಾಯಿಯ ಹೆಸರನ್ನು  ರಾಜಕೀಯ ಲಾಭಕ್ಕೆ ಬಳಸಿಕೊಂಡ ಸೈಟ್ ಕಳ್ಳ ಸಿಕ್ಕಬಿದ್ದ ಮೇಲೆ ಈಗ ಮೊಸಳೆ ಕಣ್ಣೀರು ಸುರಿಸಲು ನಾಚೀಕೆಯಾಗುವುದಿಲ್ಲವೇ? ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ. 

ಇದನ್ನೂ ಓದಿ: ಸರ್ಕಾರ ಹೋದರೆ ಹೋಗ್ಲಿ, ಜಾತಿಗಣತಿ ಜಾರಿ ಮಾಡಿ: ಬಿ.ಕೆ.ಹರಿಪ್ರಸಾದ್‌ ಆಗ್ರಹ

ಮುಂದುವರೆದು, 'ದಲಿತರನ್ನು ಬಳಸಿಕೊಂಡು ಬಲಿತಿರುವ ನೀವು ವಾಲ್ಮೀಕಿ ನಿಗಮದ ಹಣವನ್ನು ಹೇಗೆಲ್ಲ ಲೂಟಿ ಮಾಡಿದ್ದೀರಿ ..? ದಲಿತರ ಜಮೀನು ನುಂಗಿದ್ದೀರಿ.. ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟ  ಸಾವಿರಾರು ಕೋಟಿ ದುರ್ಬಳಕೆ ಮಾಡಿಕೊಂಡ ಭ್ರಷ್ಟಾತಿ ಭ್ರಷ್ಟ  ಸರ್ಕಾರ ನಿಮ್ಮದು. ಹೆಜ್ಜೆ ಹೆಜ್ಜೆಗೂ ದಲಿತರ ಬೆನ್ನಿಗೆ ಚೂರಿ ಹಾಕುತ್ತಲೇ ಇರುವ ನಿಮಗೆ ದಲಿತರ ಬಗ್ಗೆ ಮಾತಾಡುವ ಯಾವ ನೈತಿಕತೆಯು ಉಳಿದಿಲ್ಲ.. ಎ1 ಆರೋಪಿ ‘ಭ್ರಷ್ಟರಾಮಯ್ಯ’ ಅಲುಗಾಡುತ್ತಿರುವ  ಸಿಎಂ ಕುರ್ಚಿ ಉಳಿಸಿಕೊಳ್ಳಲು ಹಾಗೂ ಜನರ ಅನುಕಂಪ ಪಡೆಯಲು ಮಾಡುತ್ತಿರುವ ಹೈಡ್ರಾಮಾಗಳಷ್ಟೇ..! ನಿಮ್ಮ ಕಾಂಗ್ರೆಸ್ ಹೈಕಮಾಂಡ್ ಸೂಚನೆಗೂ ಮೊದಲೇ ತಾವೇ ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಿ' ಎಂದು ಪೋಸ್ಟ್ ಹಂಚಿಕೊಳ್ಳಲಾಗಿದೆ.

click me!