ಮಸ್ಕಿ ಉಪಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ | ಪ್ರತಾಪ್ ಗೌಡ ಪಾಟೀಲ್ ವಿರುದ್ಧ ವಾಗ್ದಾಳಿ
ರಾಯಚೂರು(ಮಾ.29): ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಮೋಸ ಮಾಡಿ ಲಂಚಕ್ಕೆ ಬಲಿಯಾಗಿ 20-25 ಕೋಟಿಗೆ ಮಾರಾಟವಾಗಿದ್ದಾರೆ. 2013ರಲ್ಲಿ ಹಂಪನಗೌಡ , ಅಮರೇಗೌಡ ಒತ್ತಾಯದಿಂದ ಪ್ರತಾಪ್ ಗೌಡ ಕಾಂಗ್ರೆಸ್ ಸೇರ್ಪಡೆ ಆದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಸ್ಕಿ ಉಪಚುನಾವಣೆ ಪ್ರಚಾರ ಹಿನ್ನೆಲೆ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿ, ಪ್ರತಾಪ್ ಗೌಡ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಚೂರಿ ಹಾಕಿ, ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಪ್ರತಾಪ್ ಗೌಡ ಪಾಟೀಲ್ ಮಾರಾಟವಾಗಿದ್ದೇನೆ. ಮಾರಾಟವಾದ ಪ್ರತಾಪ್ ಗೌಡ ಪಾಟೀಲ್ ಅವರನ್ನು ಮಸ್ಕಿ ಮತದಾರರು ಸೋಲಿಸಿ ಎಂದು ಕರೆ ನೀಡಿದ್ದಾರೆ.
'ನಾನೇಕೆ ಕೇಂದ್ರದ ವಿರುದ್ಧ ಮಾತಾಡಲಿ, ನಾನು ಹೇಳಿದ್ದು ಹಳೆ ಕತೆ'
ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಪ್ರತಾಪ್ ಗೌಡ ಪಾಟೀಲ್ ಸೋಲುವುದು ಅಷ್ಟೇ ಸತ್ಯ. ಬಸನಗೌಡ ತುರ್ವಿಹಾಳ ಗೆಲುವಿಗಾಗಿ ನಾನು ಹಳ್ಳಿ ಹಳ್ಳಿಗೆ ಬರುತ್ತೇನೆ ಎಂದಿದ್ದಾರೆ.
ಬಸನಗೌಡ ತುರ್ವಿಹಾಳಗೆ ಅನ್ಯಾಯವಾಗಿದೆ. ನಾನು ಸಿಎಂ ಆಗಿದ್ದ ವೇಳೆ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ 2ವರೆ ಸಾವಿರ ಕೋಟಿ ಮಸ್ಕಿಗೆ ನೀಡಿದ್ದೇನೆ. ನಾನು ನೀಡಿದ ಅನುದಾನದಿಂದಲ್ಲೇ ಮಸ್ಕಿ ಅಭಿವೃದ್ಧಿ ಆಗಿದೆ. ನಂದವಡಗಿ ಏತ ನೀರಾವರಿಗೆ 3ಸಾವಿರ ಕೋಟಿ ನೀಡಿದ್ದೇನೆ ಎಂದಿದ್ದಾರೆ.