ಸಚಿವ ಮಾಧುಸ್ವಾಮಿ ಕೇಂದ್ರದ ವಿರುದ್ದ ಹೇಳಿಕೆ ವಿಚಾರ/ ತುಮಕೂರಿನಲ್ಲಿ ಸ್ಪಷ್ಟನೆ ನೀಡಿದ ಮಾಧುಸ್ವಾಮಿನಾನು ಈ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿಲ್ಲ./ ಹಿಂದಿನ ಕೇಂದ್ರ ಸರ್ಕಾರದ ವಿರುದ್ದ ಮಾತನಾಡಿದ್ದೆ/ ಸೆಮಿನಾರ್ ನಲ್ಲಿ ನನ್ನ ಅಭಿಪ್ರಾಯ ಹೇಳಿದ್ದೆ, ಅದು ಸೆಮಿನಾರ್ ಗೆ ಮಾತ್ರ ಸೀಮಿತ/ ಹಿಂದಿನಿಂದ ಇಂದಿನ ವರೆಗಿನ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆ ಕುರಿತು ತೆಗೆದುಕೊಳ್ಳುವ ನಿರ್ಧಾರ ಬಗ್ಗೆ ಮಾತನಾಡಿದೆ.
ತುಮಕೂರು(ಮಾ. 29) ಸಚಿವ ಮಾಧುಸ್ವಾಮಿ ಕೇಂದ್ರದ ವಿರುದ್ದ ಹೇಳಿಕೆ ನೀಡಿದ್ದಾರೆ ಎಂಬುದು ದೊಡ್ಡ ಚರ್ಚೆಯಾಗಿತ್ತು. ತುಮಕೂರಿನಲ್ಲಿ ಇದಕ್ಕೆ ಮಾಧುಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ನಾನು ಈ ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿಲ್ಲ. ಹಿಂದಿನ ಕೇಂದ್ರ ಸರ್ಕಾರದ ವಿರುದ್ದ ಮಾತನಾಡಿದ್ದೆ. ಸೆಮಿನಾರ್ ನಲ್ಲಿ ನನ್ನ ಅಭಿಪ್ರಾಯ ಹೇಳಿದ್ದೆ, ಅದು ಸೆಮಿನಾರ್ ಗೆ ಮಾತ್ರ ಸೀಮಿತ. ಹಿಂದಿನಿಂದ ಇಂದಿನ ವರೆಗಿನ ಕೇಂದ್ರ ಸರಕಾರ ಒಕ್ಕೂಟ ವ್ಯವಸ್ಥೆ ಕುರಿತು ತೆಗೆದುಕೊಳ್ಳುವ ನಿರ್ಧಾರ ಬಗ್ಗೆ ಮಾತನಾಡಿದ್ದೆ ಎಂದು ಹೇಳಿದ್ದಾರೆ.
'ಅಷ್ಟಕ್ಕೂ ಮಾಧುಸ್ವಾಮಿ ಹೇಳಿದ್ದು ಏನು?'
ಹಾಗಂತ ಮೋದಿ ಸರ್ಕಾರದ ವಿರುದ್ದ ಮಾತನಾಡಿಲ್ಲ. ಪೂರ್ತಿ ಭಾಷಣ ಕೇಳಿ ನೋಡಿ. ಕಳೆದ 70 ವರ್ಷದ ಆಡಳಿತ ವ್ಯವಸ್ಥೆ ಬಗ್ಗೆ ಮಾತನಾಡಿದ್ದೆ. ನಾನುಬಿಜೆಪಿ ಸಚಿವನಾಗಿ ಸರ್ಕಾರದ ವಿರುದ್ಧ ಮಾತನಾಡುತ್ತೇನಾ? ಸಿದ್ದರಾಮಯ್ಯರು ಅದನ್ನ ತಪ್ಪಾಗಿ ತಿಳಿದು ಕೊಂಡಿದ್ದಾರೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.
ಕೇಂದ್ರ ಸರ್ಕಾರಗಳು ರಾಜ್ಯಗಳ ಅಧಿಕಾರವನ್ನು ಕಸಿದುಕೊಳ್ಳುತ್ತಿವೆ ಎಂದು ಮಾಧುಸ್ವಾಮಿ ಹೇಳಿದ್ದಾರೆ ಎಂಬುದು ವರದಿಯಾಗಿತ್ತು. ಈ ಬಗ್ಗೆ ಸಚಿವರು ನೀಡಿದ ಸ್ಪಷ್ಟನೆಯನ್ನು ನಿಮ್ಮ ಮುಂದೆ ಇಟ್ಟಿದ್ದೆವೆ.