ತುಮಕೂರು-ರಾಯದುರ್ಗ ರೈಲ್ಪೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ತಾಲೂಕಿನಲ್ಲಿ 36 ಕಿಮೀ ಪೈಕಿ 8 ಕಿಮೀ ರೈಲ್ಪೆ ಮಾರ್ಗ ಪೂರ್ಣವಾಗಿದ್ದ ಬಗ್ಗೆ ಮಾಹಿತಿ ಇದೆ. ಬಹುಬೇಡಿಕೆಯ ಟೆಂಡರ್ ಅನ್ವಯ ಇನ್ನೂ 16 ಕಿಮೀಯ ರೈಲ್ಪೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.
ಪಾವಗಡ (ಜು.14): ತುಮಕೂರು-ರಾಯದುರ್ಗ ರೈಲ್ಪೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ತಾಲೂಕಿನಲ್ಲಿ 36 ಕಿಮೀ ಪೈಕಿ 8 ಕಿಮೀ ರೈಲ್ಪೆ ಮಾರ್ಗ ಪೂರ್ಣವಾಗಿದ್ದ ಬಗ್ಗೆ ಮಾಹಿತಿ ಇದೆ. ಬಹುಬೇಡಿಕೆಯ ಟೆಂಡರ್ ಅನ್ವಯ ಇನ್ನೂ 16 ಕಿಮೀಯ ರೈಲ್ಪೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯ ಮಧುಗಿರಿ, ಕೊರಟಗೆರೆ ಹಾಗೂ ತುಮಕೂರು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಅಂತಮ ಘಟ್ಟ ತಲುಪಿದ್ದು, ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಕೊಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾರ್ಗದ ಕಾಮಗಾರಿ ಪೂರ್ಣಗೊಳಿಸಲು ಆದೇಶಿಸಲಾಗಿದೆ ಎಂದರು.
ಕೇಂದ್ರದಲ್ಲಿ ತಮ್ಮ ರಾಜ್ಯದ ಪ್ರಗತಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ₹5000 ಕೋಟಿ ಹಾಗೂ ಬಿಹಾರದ ಸಿಎಂ ನಿತೀಶ್‌ಮಾರ್ ₹ 30,000 ಕೋಟಿ ಪ್ರಧಾನಿಗೆ ಬೇಡಿಕೆ ಇಟ್ಟಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಸೋಮಣ್ಣ, ಅವರ ರಾಜ್ಯದ ಪ್ರಗತಿಗೆ ಅವರು ಬೇಡಿಕೆ ಇಟ್ಟಿದ್ದಾರೆ. ನಮ್ಮ ರಾಜ್ಯದ ಸಿಎಂ ಸಿದ್ದರಾಮಯ್ಯ ಅಭಿವೃದ್ದಿ ವಿಚಾರವಾಗಿ ಕೇಂದ್ರಕ್ಕೆ ಬೇಡಿಕೆ ಇಡುವ ಬದಲು ಮುಡಾ ಹಾಗೂ ವಾಲ್ಮೀಕಿ ನಿಗಮದ ಭ್ರಷ್ಟಾಚಾರ ತೆಗೆದು ಅದರಲ್ಲಿಯೆ ಕಾಲಹರಣ ಮಾಡುವಲ್ಲಿ ನಿರತರಾಗಿದ್ದಾರೆ. ಈ ಪ್ರಶ್ನೆ ಸಿಎಂಗೆ ಕೇಳಿ ಎಂದರು.
140 ಕೋಟಿ ಕಾಮಗಾರಿಗೆ ಶೀಘ್ರ ಚಾಲನೆ: ಸಚಿವ ಮಧು ಬಂಗಾರಪ್ಪ
ರಾಜ್ಯದ ಪ್ರಗತಿಯಲ್ಲಿ ಸಿಎಂ ಬದ್ಧತೆ ಪ್ರದರ್ಶಿಸಬೇಕು. ರಾಜ್ಯದ ಪ್ರಗತಿಗಾಗಿ ಕೇಂದ್ರದಿಂದ ಸಾವಿರ ಕೋಟಿ ರು. ಅನುದಾನ ತಂದಿದ್ದು, ಅನೇಕ ಪ್ರಗತಿ ಕಾರ್ಯಗಳಿಗೆ ಅದ್ಯತೆ ನೀಡಿದ್ದೇನೆ. ನನ್ನ ಅವಧಿಯಲ್ಲಿ ಜನಪರ ಯೋಜನೆಯ ಅನುಷ್ಠಾನಕ್ಕೆ ಬದ್ಧರಾಗಿದ್ದೇನೆ ಎಂದರು. 2026ರ ಡಿಸೆಂಬರ್ ಒಳಗೆ ತುಮಕೂರು ಮಾರ್ಗದ ರೈಲ್ಪೆ ಕಾಮಗಾರಿ ಪೂರ್ಣಗೊಳಸಿದ್ದು, ಅದೇ ವೇಳೆಗೆ ಪಿಎಂ ನರೇಂದ್ರ ಮೋದಿ ಅವರಿಂದ ರೈಲು ಸಂಚಾರಕ್ಕೆ ಹಸಿರು ನಿಶಾಶನೆ ತೋರಿಸಲಾಗುವುದು. ನಾನು ರೈಲು ಬಿಡುತ್ತಿಲ್ಲ. ಈ ಭಾಗದ ಸಂಚಾರಕ್ಕೆ ಇನ್ನೂ ಎರಡು ವರ್ಷದಲ್ಲಿ ರೈಲು ಬಿಡಿಸುತ್ತೇನೆ.
ರಾಜ್ಯದಲ್ಲಿ 12 ಯೋಜನೆಗಳು ಪ್ರಗತಿಯಲ್ಲಿದ್ದು ಇನ್ನೂ ಮೂರು ವರ್ಷದಲ್ಲಿ ಕೆರೆಗಳಿಗೆ ನೀರು ತುಂಬಿಸುವ ಭದ್ರಾಮೇಲ್ನಂಡೆ ಸೇರಿ ಇತರೆ ಐದು ಯೋಜನೆ ಕಾರ್ಯಗತಗೊಳಿಸುವ ಭರವಸೆ ವ್ಯಕ್ತಪಡಿಸಿದರು. ಶಾಸಕ ಎಚ್.ವಿ.ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ತುಮಕೂರು ಹಾಗೂ ರಾಯದುರ್ಗದ ರೈಲ್ಪೆ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದ್ದು, ಕೇಂದ್ರದಿಂದ ಅನುದಾನ ಬಿಡುಗಡೆಗೊಳಿಸುವ ಮೂಲಕ ಯೋಜನೆಯ ಪ್ರಗತಿಗೆ ಹೆಚ್ಚು ಅದ್ಯತೆ ನೀಡಬೇಕು. ಭದ್ರಾ ಮೇಲ್ದಂಡೆ ಯೋಜನೆಯ ಪ್ರಗತಿಗೆ ಅನುದಾನ ಹಾಗೂ ಇತರೆ ತಾಲೂಕಿನ ಜ್ವಲಂತ ಸಮಸ್ಯೆ ಬಗ್ಗೆ ವಿವರಿಸಿ ಕೇಂದ್ರ ಸಚಿವ ಸೋಮಣ್ಣರಿಗೆ ಮನವಿ ಮಾಡಿದರು.
ಚುನಾವಣೆಯಲ್ಲಿ ನಮಗೆ ಸೋಲೇ ಹೊರತು ರಾಷ್ಟ್ರೀಯ ಸಿದ್ಧಾಂತದ ಸೋಲಲ್ಲ: ಸಿ.ಟಿ.ರವಿ
ಶಾಸಕ ಜ್ಯೋತಿ ಗಣೇಶ್, ಕೇಂದ್ರ ದಕ್ಷಿಣ ವಲಯ ರೈಲ್ವೆ ಇಲಾಖೆ ಸಿಎಒ ರಾಮ್ಗೋಪಾಲ್ ವರ್ಮ, ಸಿಇ ಸರೋಜ್ಕುಮಾರ್, ಡೆಪ್ಯೂಟಿ ಸಿಇ ವಿಪುಲ್, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಅಂಜಿನಪ್ಪ, ರಾಜ್ಯ ಬಿಜೆಪಿ ರೈತ ಮೊರ್ಚಾ ಉಪಾಧ್ಯಕ್ಷ ಶಿವಪ್ರಸಾದ್, ತಾಲೂಕು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೇಶ್ಬಾಬು, ಸಮಾಜ ಸೇವಕ ಬತ್ತಿನೇನಿ ನಾಗೇಂದ್ರರಾವ್, ಪಿ.ಎಚ್.ರಾಜೇಶ್, ತೆಂಗಿನಕಾಯಿ ರವಿ, ತಾಲೂಕು ಜೆಡಿಎಸ್ ಅಧ್ಯಕ್ಷ ಎನ್.ಎ.ಈರಣ್ಣ, ತಾಲೂಕು ಬಿಜೆಪಿ ಅಧ್ಯಕ್ಷ ರಂಗಣ್ಣ, ಸೊಗಡು ವೆಂಕಟೇಶ್ , ಸೂರ್ಯನಾರಾಯಣ್, ಶಿವಕುಮಾರ್ ಸಾಕೇಲ್, ತಿಪ್ಪೇಸ್ವಾಮಿ, ದೊಡ್ಡಹಳ್ಳಿ ಆಶೋಕ್, ರಂಗಸಮುದ್ರ ಮಹಾಲಿಂಗಪ್ಪ ,ಸುಜಿತ್ ಇದ್ದರು.