ಸಿದ್ದರಾಮಯ್ಯರಿಗೆ ಎಲ್ಲ ಕ್ಷೇತ್ರದಲ್ಲೂ ಸೋಲಿನ ಭೀತಿ

By Kannadaprabha News  |  First Published Jul 27, 2022, 3:13 PM IST

 ಸಿದ್ದರಾಮಯ್ಯರಿಗೆ ಎಲ್ಲ ಕ್ಷೇತ್ರದಲ್ಲೂ ಸೋಲಿನ ಭೀತಿ ಇದೆ. ರಾಜ್ಯದ ಕಾಂಗ್ರೆಸ್ ನಾಯಕನಿಗೇ ಕ್ಷೇತ್ರ ಹುಡುಕುವ ಸ್ಥಿತಿ ಇದೆ ಎಂದು ಸಂಸದ ಸಂಗಣ್ಣ ಕರಡಿ ವ್ಯಂಗ್ಯ ಮಾಡಿದರು.


ಕೊಪ್ಪಳ (ಜು.27) : ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯದ ಯಾವ ಕ್ಷೇತ್ರದಲ್ಲಿ ನಿಂತರೆ ಗೆಲ್ಲುತ್ತೇನೆ ಎಂಬ ಲೆಕ್ಕಾಚಾರ ಹಾಕುತ್ತಿದ್ದು, ಅವರು ಯಾವುದೇ ಕ್ಷೇತ್ರದಲ್ಲಿ ನಿಂತರೂ ಸೋಲುವ ಭೀತಿ ಇದೆ. ಹಾಗಾಗಿ ನಿರ್ದಿಷ್ಟಕ್ಷೇತ್ರದ ಹೆಸರು ಹೇಳುತ್ತಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಲೇವಡಿ ಮಾಡಿದರು. ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ

, ಮಾಜಿ ಸಿಎಂ ಸಿದ್ದರಾಮಯ್ಯ(Former CM Siddaramaiah) ರಾಜ್ಯದ ನಾಯಕ. ಅಂತಹ ನಾಯಕನಿಗೆ ಕ್ಷೇತ್ರ ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಕಾಂಗ್ರೆಸ್‌(Cogress) ಪಕ್ಷ ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಅವರಿಗೆ ಯಾವ ಕ್ಷೇತ್ರದಲ್ಲೂ ಗೆಲ್ಲುವ ವಿಶ್ವಾಸ ಇಲ್ಲ. ಹೀಗಾಗಿ ಕ್ಷೇತ್ರ ಹುಡುಕುವ ಪಡಿಪಾಟಲು ಉಂಟಾಗಿದೆ. ನಿಖರತೆ ಇದ್ದರೆ ಇಂತಹ ಕ್ಷೇತ್ರದಲ್ಲಿ ನಿಲ್ಲುತ್ತೇನೆ ಎಂದು ಸಿದ್ದರಾಮಯ್ಯ ಹೇಳಲಿ ಎಂದು ಸವಾಲು ಹಾಕಿದರು.

Latest Videos

undefined

ಬಾದಾಮಿ: ಪಾದಯಾತ್ರೆಗೆ ಸಿದ್ದರಾಮಯ್ಯ ಚಿಂತನೆ, ಕಾಂಗ್ರೆಸ್​​ನಲ್ಲಿ ಹೆಚ್ಚಿದ ಹುರುಪು

ಕೊಪ್ಪಳ(Koppala)ದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ತೊಂದರೆ ಇಲ್ಲ. ಹಿಂದೊಮ್ಮೆ ನಿಂತು ಸೋತಿದ್ದಾರೆ. ಮತ್ತೊಮ್ಮೆ ಸೋಲುವುದು ಖಚಿತ. ಸಿದ್ದರಾಮಯ್ಯ ಸ್ಪರ್ಧೆಯನ್ನು ವಿರೋಧ ಮಾಡಲು ಬರುವುದಿಲ್ಲ. ಅದು ಅವರ ಪಕ್ಷದ ತೀರ್ಮಾನ ಎಂದರು.

ಸಿದ್ದರಾಮಯ್ಯ ಸ್ಪರ್ಧೆ ಮಾಡಿದರೆ ನಾನು ಸ್ಪರ್ಧೆ ಮಾಡುತ್ತೇನೆ ಎಂಬುದು ಇಲ್ಲ. ನಾನು ಹಾಲಿ ಸಂಸದನಾಗಿದ್ದೇನೆ. ನನ್ನ ಅವಧಿ ಇನ್ನೂ 1 ವರ್ಷ 9 ತಿಂಗಳು ಇದೆ. ಹೀಗಾಗಿ ಸ್ಪರ್ಧೆ ಮಾಡುವುದಿಲ್ಲ. ಸ್ವಇಚ್ಛೆಯಿಂದ ಸ್ಪರ್ಧೆಗೆ ಬಯಸುವುದಿಲ್ಲ. ಪಕ್ಷ ಏನು ನಿರ್ಧಾರ ತೆಗೆದುಕೊಳ್ಳಲಿದೆಯೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದರು.

ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ಪೈಪೋಟಿ ಇದೆ. ಅದು ಮತ್ತಷ್ಟುತಾರಕಕ್ಕೇರುತ್ತದೆ. ಇದರಿಂದ ಬಿಜೆಪಿಗೆ ಲಾಭವೇ ಹೊರತು ನಷ್ಟವೇನಿಲ್ಲ. ಡಿಕೆಶಿ ಸಿಎಂ ಸ್ಥಾನಕ್ಕಾಗಿ ಒಕ್ಕಲಿಗ ಟ್ರಂಪ್‌ ಕಾರ್ಡ್‌ ಬಳಕೆ ಮಾಡುತ್ತಿದ್ದಾರೆ. ಒಂದು ಸಮುದಾಯದ ಬೆಂಬಲದಿಂದ ಸಿಎಂ ಆಗಲು ಸಾಧ್ಯವಿಲ್ಲ. ಎಲ್ಲರನ್ನು ಜತೆಗೆ ತೆಗೆದುಕೊಂಡು ಹೋಗಬೇಕು. ಡಿಕೆಶಿ, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್‌, ರಾಮಲಿಂಗಾರೆಡ್ಡಿ ನಡುವೆ ಪೈಪೋಟಿ ನಡೆದಿದೆ. ಜಮೀರ್‌ ಸಹ ನಾವು ಸಿಎಂ ಆಗಬೇಕೆಂದು ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿ ಆಂತರಿಕ ಸಂಘರ್ಷ ನಡೆಯುತ್ತಿದೆ ಎಂದರು

.ಕರ್ನಾಟಕಕ್ಕೆ ಒಳ್ಳೆಯದಾಗಬೇಕೆಂದರೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು: ಜಮೀರ್‌ ಅಹ್ಮದ

ಕಾಂಗ್ರೆಸ್‌ನವರು ಕೂಸು ಹುಟ್ಟುವ ಮುನ್ನ ಕುಲಾಯಿ ಹೊಲಿಸುತ್ತಿದ್ದಾರೆ. ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವುದರಲ್ಲಿ ಸಂದೇಹ ಇಲ್ಲ. ದೇಶದಲ್ಲಿ ಕಾಂಗ್ರೆಸ್‌ ಮುಳುಗಿದೆ. ಇಡಿ ಮೂಲಕ ಕಾಂಗ್ರೆಸ್‌ ಉಳಿದಿದೆ ಎಂದು ತೋರಿಸುತ್ತಿದ್ದಾರೆ. ಕಾನೂನಿಗೆ ವಿರುದ್ಧವಾಗಿ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನು ವಿರೋಧಿಸುತ್ತೇವೆ. ಕಾಂಗ್ರೆಸ್‌ನವರು ಪ್ರಜಾಪ್ರಭುತ್ವ ವನ್ನು ವಿರೋಧಿಸುತ್ತಾರೆ. ಇಡಿ ಖರ್ಗೆ, ಮೋದಿ, ಅಮಿತ್‌ ಶಾ ಅವರನ್ನೂ ವಿಚಾರಣೆ ಮಾಡಿದೆ. ಅವ್ಯವಹಾರ ನಡೆದಿದ್ದರೆ ಇವತ್ತಿಲ್ಲ ನಾಳೆ ಕಾನೂನು ಕ್ರಮ ತೆಗೆದುಕೊಳ್ಳುತ್ತದೆ ಎಂದರು.

click me!