ಅಜಾನ್‌ ಕೂಗಿ​ನಿಂದ ಆಗು​ವ ಸಮ​ಸ್ಯೆಗಳ​ ಬಹಿರಂಗಕ್ಕೆ ಹಿಂಜ​ರಿ​ಯ​ಲ್ಲ: ಕೆಎಸ್ ಈಶ್ವರಪ್ಪ

By Kannadaprabha News  |  First Published Mar 17, 2023, 7:50 AM IST

ಅಜಾನ್‌ ಕೂಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಎಷ್ಟುತೊಂದರೆ ಆಗ್ತಿದೆ ಎಂಬುದು ಪೋಷಕರಿಗೆ ಗೊತ್ತು, ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಗೊತ್ತು. ಇರುವ ವಿಷಯ ಬಹಿರಂಗವಾಗಿ ಹೇಳಲು ಹಿಂದೆ ಮುಂದೆ ನೋಡಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿ​ದರು.


ಶಿವಮೊಗ್ಗ (ಮಾ.17) : ಅಜಾನ್‌ ಕೂಗುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಎಷ್ಟುತೊಂದರೆ ಆಗ್ತಿದೆ ಎಂಬುದು ಪೋಷಕರಿಗೆ ಗೊತ್ತು, ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಗೊತ್ತು. ಇರುವ ವಿಷಯ ಬಹಿರಂಗವಾಗಿ ಹೇಳಲು ಹಿಂದೆ ಮುಂದೆ ನೋಡಲ್ಲ ಎಂದು ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಹೇಳಿ​ದರು.

ಬೇರೆಯವರಿಗೆ ತೊಂದರೆ ಆಗದ ರೀತಿಯಲ್ಲಿ ಕೂಗಬೇಕು ಎಂದು ಸುಪ್ರೀಂ ಕೋರ್ಟ್(Supreme court) ತೀರ್ಪು ಕೊಟ್ಟಿದೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆವರೆಗೆ ನಿಷೇಧ ವಿಧಿ​ಸಿದೆ. ಸುಪ್ರೀಂ ಕೋರ್ಟ್ ತೀರ್ಪು ಇದ್ದರೂ ಈ ರೀತಿ ಮಾಡುತ್ತಿದ್ದಾರೆ. ಜನಸಾಮಾನ್ಯರ ಭಾವನೆಗಳನ್ನು ನಾನು ಹೇಳುವವನೆ. ನನ್ನ ವಿರುದ್ಧ ಎಷ್ಟುಪ್ರತಿಭಟನೆ ಮಾಡಿದರೂ ಎದುರಿಸುತ್ತೇನೆ ಎಂದು ಹೇಳಿದರು.

Latest Videos

undefined

ಅಜಾನ್ ಕುರಿತು ವಿವಾದಾತ್ಮಕ ಹೇಳಿಕೆ : ಈಶ್ವರಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ SDPI ಪ್ರತಿಭಟನೆ

ಮೂಡಿಗೆರೆ ಶಾಸಕ ಕುಮಾರಸ್ವಾಮಿ ಅವರಿಗೆ ಸ್ವಪಕ್ಷದವರೇ ವಿರೋಧ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಈ ರೀತಿ ಪ್ರತಿಭಟನೆ ಮಾಡಲು ಅವಕಾಶ ಇರುತ್ತದೆ. ಆದರೆ, ಪ್ರತಿಭಟನೆ ಮಾಡೋದು ಸರಿನಾ, ತಪ್ಪಾ ಅಂತಾ ಯಾರು ವಿರುದ್ಧ ಮಾಡಿದ್ದಾರೋ ಅವರು ಯೋಚನೆ ಮಾಡಬೇಕು. ಸರಿ ಎನ್ನುವುದಾದರೆ ಅದನ್ನು ಎದುರಿಸಬೇಕು. ಪ್ರತಿಭಟನೆ ಸರಿಯಲ್ಲ ಎನ್ನುವುದಾದರೆ ಅದನ್ನು ತಿದ್ದಿಕೊಳ್ಳಬೇಕು. ಕೆಲವರಿಗೆ ಆ ಶಾಸಕ ಮಾಡಿರುವ ಕೆಲಸ ಸಮಾಧಾನ ಇಲ್ಲ ಅಂತಾ ಅನಿಸಿರಬಹುದು. ಕಾರ್ಯಕರ್ತರ ಜೊತೆ ಕುಳಿತುಕೊಂಡು ಸಮಾಧಾನ ಮಾಡುವ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ಇದು ಮುಂದುವರಿದುಕೊಂಡು ಹೋಗುತ್ತದೆ ಎಂದು ಸಲಹೆ ನೀಡಿದರು.

ಸೋಮಣ್ಣ ವಿಚಾರದಲ್ಲಿ ನನಗೆ ಸಮಾಧಾನ:

ಸಚಿವ ಸೋಮಣ್ಣ(V Somanna) ಅಸಮಾಧಾನ ವಿಚಾರ ಮುಗಿದುಹೋಗಿದೆ. ಸಮಾಧಾನವಾಗಿದೆ ಅಂತಾ ಅವರೇ ಹೇಳಿದ ಮೇಲೆ ಇನ್ನೇನಿದೆ. ಕೇಂದ್ರದ ನಾಯಕರು ಸೋಮಣ್ಣನ ಜೊತೆ ಮಾತುಕತೆ ನಡೆಸಿದ್ದಾರೆ. ನನಗೆ ಸಮಾಧಾನ ಇದೆ ಅಂತಾ ಸೋಮಣ್ಣ ಹೇಳಿದ್ದೆ ನನಗೆ ಸಮಾಧಾನ. ರಾಜ್ಯದಲ್ಲಿ ಚುನಾವಣೆ ನಡೆಯುವ ಸಂದರ್ಭದಲ್ಲಿ ಬೇಸರ ಆಗುತ್ತಿರುತ್ತದೆ. ಕೇಂದ್ರದ ನಾಯಕರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ದಿನಕ್ಕೆ ನಾಲ್ಕೈದು ಬಾರಿ ಕೂಗಿದ್ರೆ ಸಾರ್ವಜನಿಕರಿಗೆ ಕಿರಿಕಿರಿ: ಅಜಾನ್ ಬಗ್ಗೆ ಮತ್ತೆ ಹೇಳಿಕೆ ನೀಡಿದ ಈಶ್ವರಪ್ಪ!

click me!