ಕಾಂಗ್ರೆಸ್‌ ಸರ್ಕಾರಕ್ಕೆ ತಾಕತ್ತು ಇದ್ದರೆ ಮದರಸಾ ಚಟುವಟಿಕೆ ತಡೆಯಲಿ: ಶೋಭಾ ಕರಂದ್ಲಾಜೆ

Published : Oct 15, 2025, 05:29 AM IST
Shobha Karandlaje

ಸಾರಾಂಶ

ನಮಸ್ತೆ ಸದಾ ವತ್ಸಲೇ ಅಂದರೆ ತಪ್ಪು, ಆದರೆ ಪಾಕಿಸ್ತಾನ ಜಿಂದಾಬಾದ್ ಅಂದರೆ ಸರಿಯೇ? ಕಾಂಗ್ರೆಸ್‌ಗೆ ತಾಕತ್ತು ಇದ್ದರೆ ಮುಸ್ಲಿಮರ ಮದರಸಾಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯಲಿ ಎಂದು ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

ನವದೆಹಲಿ (ಅ.15): ನಮಸ್ತೆ ಸದಾ ವತ್ಸಲೇ ಅಂದರೆ ತಪ್ಪು, ಆದರೆ ಪಾಕಿಸ್ತಾನ ಜಿಂದಾಬಾದ್ ಅಂದರೆ ಸರಿಯೇ? ಕಾಂಗ್ರೆಸ್‌ ಸರ್ಕಾರಕ್ಕೆ ತಾಕತ್ತು ಇದ್ದರೆ ಮುಸ್ಲಿಮರ ಮದರಸಾಗಳಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳನ್ನು ತಡೆಯಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.

ಆರ್‌ಎಸ್‌ಎಸ್‌ ಚಟುವಟಿಕೆಗಳಿಗೆ ನಿರ್ಬಂಧ ಹಾಕುವಂತೆ ಸಚಿವ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿರುವುದಕ್ಕೆ ಮಂಗಳವಾರ ನಗರದಲ್ಲಿ ಪ್ರತಿಕ್ರಿಯಿಸಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರತುಪಡಿಸಿದರೆ ಪ್ರಿಯಾಂಕ್ ಖರ್ಗೆ ಅಸ್ಥಿತ್ವ ಏನು? ತಂದೆ ನೆರಳಿನಲ್ಲಿ ಬಂದ ನೀವು (ಪ್ರಿಯಾಂಕ್‌) ಸಂಘದ ಬಗ್ಗೆ ಮಾತನಾಡುವಷ್ಟು ದೊಡ್ಡವರಾಗಿದ್ದಾರಾ? ಖರ್ಗೆ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ವಾಗ್ದಳಿ ನಡೆಸಿದರು.

ನೂರು ವರ್ಷಗಳ ಹಿಂದೆ ಆರಂಭವಾದ ಆರ್‌ಎಸ್‌ಎಸ್‌ ದೇಶಭಕ್ತಿ ಬೆಳೆಸುವ ಕೆಲಸ ಮಾಡುತ್ತಿದ್ದು, ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸ್ವಯಂ ಸೇವಕರು ಬಿಳಿ ಬಟ್ಟೆಯಲ್ಲಿರುವ ಸನ್ಯಾಸಗಳಂತೆ ಆರ್‌ಎಸ್‌ಎಸ್ ಹೇಳಿದ ದೇಶ ಸೇವೆ ಮಾಡುತ್ತಿದ್ದಾರೆ. ಇಂಥ ದೇಶಭಕ್ತ ಸಂಘವನ್ನು ದಮನ ಮಾಡಲು ಕಾಂಗ್ರೆಸ್ ಪದೇ ಪದೇ ಯತ್ನಿಸಿದ್ದು, ಅದು ಫಲಿಸಲಿಲ್ಲ. ಆರ್‌ಎಸ್‌ಎಸ್‌ ಬ್ಯಾನ್ ಮಾಡಲು ಹೋದವರು ನಾಶವಾಗಿದ್ದು, ಸೋತು ಸುಣ್ಣವಾಗಿದ್ದಾರೆ ಎಂದರು.

ನಿಮ್ಮ ಮಾನಸಿಕತೆ ಏನು

ಪ್ರಿಯಾಂಕ್ ಖರ್ಗೆ ಕೂಡ ಕಾಂಗ್ರೆಸ್ ಮಾನಸಿಕತೆಯಲ್ಲಿ ಬಂದಿದ್ದು, ಆರ್‌ಎಸ್‌ಎಸ್ ಬ್ಯಾನ್ ಮಾಡಲು ಮುಂದಾಗಿದ್ದಾರೆ. ಭಾರತದಲ್ಲಿ ಭಾರತ್ ಮಾತೆ ಜೈ ಅನ್ನೋದು ತಪ್ಪು ಎಂದರೆ ನಿಮ್ಮ ಮಾನಸಿಕತೆ ಏನು? ಮಲ್ಲಿಕಾರ್ಜುನ ಖರ್ಗೆ ಅವರ ನೆರಳಿನಲ್ಲಿ ಬಂದ ನೀವು ಸಂಘದ ಬಗ್ಗೆ ಮಾತನಾಡುವಷ್ಟು ದೊಡ್ಡವರಾಗಿದ್ದಾರಾ? ನಿಮಗೆ ತಾಕತ್ತು, ಶಕ್ತಿ ಇದಿಯಾ? ಇದ್ದರೆ ಮದರಸಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳನ್ನು ತಡಿಯಿರಿ ಎಂದು ಸವಾಲು ಹಾಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇಂದ್ರ ಬಜೆಟ್ ಮಂಡಿಸಿದ 15 ನಿಮಿಷಕ್ಕೆ ಷೇರು ಮಾರುಕಟ್ಟೆಯಲ್ಲಿ ₹30,000 ಕೋಟಿ ನಷ್ಟ: ಜಿ.ಸಿ. ಚಂದ್ರಶೇಖರ್ ಆಕ್ರೋಶ
Karnataka News Live: Gadag - ಜಾತ್ರೆಗೆ ಬಂದ ಭಕ್ತರಿಗೆ ಪ್ರಸಾದವಾಗಿ ನೀಡಿದ್ದು ಬಿಸಿ ಬಿಸಿಯಾದ ಮಿರ್ಚಿ ಬಜ್ಜಿ