ಶಿವಮೊಗ್ಗ ಗೀತಾ ಶಿವರಾಜ್ ಕುಮಾರ್ ಡಮ್ಮಿ ಕ್ಯಾಂಡಿಡೇಟ್; ಈಶ್ವರಪ್ಪ ಡಬ್ಬ ಸೌಂಡ್: ವಾಗ್ದಾಳಿ ರಾಜಕಾರಣ

By Sathish Kumar KHFirst Published Mar 24, 2024, 2:39 PM IST
Highlights

ಈಶ್ವರಪ್ಪನವರ ಡಬ್ಬ ಸೌಂಡ್ ಮಾಡ್ತದೆ. ಅವರು ಕ್ಯಾಂಡಿಡೇಟ್ ಆಗಲ್ಲ. ಮಾಜಿ ಸಿಎಂ ಯಡಿಯೂರಪ್ಪನವರ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಶಿವಮೊಗ್ಗ (ಮಾ.24): ಈಶ್ವರಪ್ಪ ಅವರಿಗೆ ಬಸ್ಟ್ಯಾಂಡ್ ನಲ್ಲಿ ಕಣಿ ಹೇಳೋಕೆ ಹೇಳಿ. ಈಶ್ವರಪ್ಪನವರ ಡಬ್ಬ ಸೌಂಡ್ ಮಾಡ್ತದೆ. ಅವರು ಕ್ಯಾಂಡಿಡೇಟ್ ಆಗಲ್ಲ. ಮಾಜಿ ಸಿಎಂ ಯಡಿಯೂರಪ್ಪನವರ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ವಾಗ್ದಾಳಿ ಮಾಡಿದ್ದಾರೆ. 

ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು 'ಗೀತಾ ಶಿವ ರಾಜಕುಮಾರ್ ಡಮ್ಮಿ ಕ್ಯಾಂಡಿಡೇಟ್' ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ಈಶ್ವರಪ್ಪ ಅವರಿಗೆ ಬಸ್ಟ್ಯಾಂಡ್ ನಲ್ಲಿ ಕಣಿ ಹೇಳೋಕೆ ಹೇಳಿ. ಈಶ್ವರಪ್ಪ ಡಬ್ಬ ಸೌಂಡ್ ಮಾಡ್ತದೆ. ಅವರು ಕ್ಯಾಂಡಿಡೇಟ್ ಆಗಲ್ಲ. ಯಡಿಯೂರಪ್ಪ ಮಕ್ಕಳು ಈಶ್ವರಪ್ಪ ಅವರನ್ನು ಡಮ್ಮಿ ಮಾಡಿ ಕೂರಿಸಿದ್ದಾರೆ. ಈಶ್ವರಪ್ಪ ತಟ್ಟೆಯಲ್ಲಿ ಹೆಗಣ ಕೊಳೆತು ನಾರ್ತಿದೆ. ಈಶ್ವರಪ್ಪ ಅವರಿಗೆ ಪೊಲಿಟಿಕಲ್ ಸುಪಾರಿ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದು ಹೇಳಿದರು.

ಕಾವೇರಿ ಪೈಪ್‌ಲೈನ್ ದುರಸ್ತಿಗೊಳಿಸಿ, ಬೆಂಗಳೂರಿಗೆ 1,000 ಎಂಎಲ್‌ಡಿ ನೀರು ಸರಬರಾಜ ವ್ಯತ್ಯಯ ತಪ್ಪಿಸಿದ ಜಲಮಂಡಳಿ

ಈಶ್ವರಪ್ಪ ಅವರನ್ನು ಹಿಂದುಳಿದ ವರ್ಗದ ಮತ ಹೊಡಿ ಅಂತಾ ಕಳುಹಿಸಿದ್ದಾರೆ. ಜಾತಿ ರಾಜಕಾರಣ ಮಾಡಿ ಇವರು ಹೊಲಸು ಮಾಡಿದ್ದಾರೆ. ಈಶ್ವರಪ್ಪ ಅವರು ತಮ್ಮ ಮಗನಿಗೆ ಟಿಕೆಟ್ ಕೊಡಿಸುವ ಗಂಡಸುತನ ಇದ್ದರೆ ಅದರ ಬಗ್ಗೆ ಮಾತನಾಡಲಿ. ನಮ್ಮ ಅಕ್ಕ (ಗೀತಾ ಶಿವರಾಜ್ ಕುಮಾರ್) ಒಳ್ಳೆಯ ರೀತಿ ಪ್ರಚಾರ ಮಾಡ್ತಿದ್ದಾರೆ. ನಮ್ಮ ತಂಟೆಗೆ ಬಂದರೆ ಮತದಾರರು ಉತ್ತರ ಕೊಡ್ತಾರೆ. ಒಂದು ಸರಿ ದೆಹಲಿಯಿಂದ ಪೋನ್ ಬಂದ್ರೆ ನನ್ನ ಮನಸು ಕರಗುತ್ತದೆ ಅಂತಾರೆ ಇವರು ಕ್ಯಾಂಡಿಡೇಟಾ ಅಥವಾ ಡಮ್ಮಿ ಕ್ಯಾಂಡಿಡೇಟಾ ಎಂದು ತಿರುಗೇಟು ನೀಡಿದರು.

ಶಿವಮೊಗ್ಗಕ್ಕೆ ಬ್ರಹ್ಮ ಬಂದರೂ ಬಂಡಾಯ ಸ್ಪರ್ಧೆ ವಾಪಸ್ ಪಡೆಯೊಲ್ಲ; ಕೆ.ಎಸ್. ಈಶ್ವರಪ್ಪ

ಈಶ್ವರಪ್ಪ ಅವರೇ ನೀವು ಗೌರವದಿಂದ ಇರಿ, ನಿಮಗೆ ಸಿಗುತ್ತಿರುವ ಗೌರವ ಉಳಿಸಿಕೊಳ್ಳಿ. ಕಾಂಗ್ರೆಸ್ ಬೇರೆಯವರ ಮನೆ ಒಡೆದಿದೆ ಅಂತಾ ಮತ ಕೇಳಲ್ಲ. ನಮ್ಮ ಗ್ಯಾರಂಟಿ ಯೋಜನೆಗಳೇ ನಮಗೆ ಕೈ ಹಿಡಿಯುತ್ತವೆ. ನಮ್ಮ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ. ರಾಘವೇಂದ್ರ ಅವರು ಮಾತನಾಡಬೇಕಾದರೆ ಅವರ ತಲೆ ಹಿಂಬ್ಯಾಲೆನ್ಸ್ ಆಗಿದೆ ಅನ್ಸುತ್ತದೆ. ಯಾರ ಕುಟುಂಬದಲ್ಲಿ ಮುಖ್ಯಮಂತ್ರಿ ಇದ್ದಾರೆ, ಶಾಸಕ ಇದ್ದಾರೆ, ಮಂತ್ರಿ ಇದ್ದಾರೆ ನೋಡಿಕೊಳ್ಳಲ್ಲಿ. ಒಂದೇ ಕುಟುಂಬದಲ್ಲಿ ಮಂತ್ರಿ, ಸಂಸದ, ಶಾಸಕರು ಇದ್ದಾರೆಯೋ ಅದಕ್ಕೆ ಕುಟುಂಬ ರಾಜಕಾರಣ ಅಂತಾರೆ. ಕುಟುಂಬ ರಾಜಕಾರಣಕ್ಕೆ ಅರ್ಥ ಪೂರ್ಣ ಉದಾಹರಣೆ ಯಡಿಯೂರಪ್ಪ ‌ಕುಟುಂಬವಾಗಿದೆ. ಈ ರಾಜ್ಯದಲ್ಲಿ ಭ್ರಷ್ಟಾಚಾರ ಆರಂಭವಾಗಿದ್ದು, ಯಡಿಯೂರಪ್ಪ ಕುಟುಂಬದಿಂದ ಎಂದು ವಾಗ್ದಾಳಿ ನಡೆಸಿದರು.

click me!