
ಮುಂಬೈ(ಜ. 07) ಶಿವಸೇನೆ ರಾಹುಲ್ ಗಾಂಧಿ ಅವರನ್ನು ಹಾಡಿ ಹೊಗಳಿದೆ. ದೆಹಲಿ ಆಡಳಿತಗಾರರು ರಾಹುಲ್ ಗೆ ಮಾತ್ರ ಹೆದರುತ್ತಾರೆ ಎಂದಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಿವಸೇನೆ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರೆ ಒಳ್ಳೆಯದು ಎಂದಿದೆ.
ದೆಹಲಿ ದೊರೆಗಳು ರಾಹುಲ್ ಗಾಂಧಿಗೆ ಹೆದರುತ್ತಾರೆ. ಒಬ್ಬ ಯೋಧ ಪ್ರಾಮಾಣಿಕವಾಗಿದ್ದರೆ ಎಂಥ ಎದುರಾಳಿಯಾದರೂ ಹೆದರಲೇಬೇಕು ಎಂದು ರಾಹುಲ್ ಕೊಂಡಾಡುತ್ತ ಪ್ರಧಾನಿ ಮೋದಿ ಮತ್ತು ತಂಡಕ್ಕೆ ಟಾಂಗ್ ನೀಡಿದೆ.
ಇದ್ದಕ್ಕಿದ್ದಂತೆ ರಾಹುಲ್ ಇಟಲಿಗೆ ಹಾರಿದ್ದು ಯಾಕೆ?
ರಾಹುಲ್ ಅವರನ್ನು ದುರ್ಬಲ ನಾಯಕ ಎಂದು ಪದೇ ಪದೇ ಬಿಂಬಿಸುವ ಕೆಲಸ ಮಾಡಲಾಗಿದೆ. ಆದರೆ ಅವರು ಅವಕಾಶ ಬಳಸಿಕೊಂಡು ಮೇಲೆ ಬರುತ್ತಿದ್ದಾರೆ ಎಂದಿದೆ. ಮೋದಿಯನ್ನು ಎದುರಿಸಲು ಯುಪಿಎ ತನ್ನ ವಿಸ್ತಾರ ಹೆಚ್ಚು ಮಾಡಿಕೊಳ್ಳಬೇಕು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದರು.
ದೆಹಲಿಯಲ್ಲಿ ಮನಡೆಯುತ್ತಿರುವ ರೈತರ ಪ್ರತಿಭಟನೆ ಸಂಬಂಧ ರಾಷ್ಟ್ರಪತಗಳನ್ನು ಭೇಟಿ ಮಾಡಿದ್ದ ರಾಹುಲ್ ನಂತತ ಇಟಲಿ ಪ್ರವಾಸ ಕೈಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು .
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.